ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಇಡೀ ದೇಶಕ್ಕೆ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮತ್ತು ‘ಒಂದು ದೇಶ ಒಂದು ಚುನಾವಣೆ’ ಜಾರಿ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶಾ ಬಿಜೆಪಿ ಧರ್ಮ ಆಧಾರಿತ ಪ್ರಚಾರದಲ್ಲಿ ತೊಡಗಿಲ್ಲ ಎಂದು ಒತ್ತಿ ಹೇಳಿದ್ದಾರೆ. ಆದರೆ ಮುಸ್ಲಿಮರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸುವುದಾಗಿ ಪ್ರತಿಪಾದಿಸಿದರು.
ಇದನ್ನು ಓದಿದ್ದೀರಾ? ಒಂದು ದೇಶ ಒಂದು ಚುನಾವಣೆ ಅನ್ನೋದು ಒಂದು ದೇಶ ಒಂದೇ ಪಕ್ಷ ಅನ್ನೋಕಡೆಗೆ ಹೋಗುತ್ತೆ
ಹಾಗೆಯೇ 370ನೇ ವಿಧಿಯನ್ನು ರದ್ದುಗೊಳಿಸುವುದು ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಧಾರ್ಮಿಕ ವಿಷಯಗಳೆಂದು ಪರಿಗಣಿಸುವುದಾದರೆ, ಬಿಜೆಪಿ ಈ ಪ್ರಯತ್ನವನ್ನು ಮಾಡಿದೆ ಮತ್ತು ಮುಂದುವರಿಸುತ್ತದೆ ಎಂದು ಹೇಳಿದರು.
ಇನ್ನು ಚುನಾವಣಾ ಆಯೋಗ ಸರಿಯಾದ ಡೇಟಾವನ್ನು ನೀಡದ ಆರೋಪದ ಬಗ್ಗೆ ಪ್ರಸ್ತಾಪಿಸಿದ ಶಾ, “ಬಿಜೆಪಿ ಸೋತ ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಹಿಂದಿನ ಚುನಾವಣೆಗಳಲ್ಲಿ ಇದೇ ರೀತಿಯ ಪ್ರೋಟೋಕಾಲ್‌ಗಳನ್ನು ಬಳಸಲಾಗಿದೆ. ಪ್ರತಿಪಕ್ಷಗಳ ಕಳವಳ ಆಧಾರರಹಿತ” ಎಂದು ವಾದಿಸಿದರು.
ಇದನ್ನು ಓದಿದ್ದೀರಾ? ʼಒಂದು ದೇಶ ಒಂದು ಚುನಾವಣೆʼಯೋ, ಇದೊಂದು ಹೂವಿನ ರೂಪದ ಕಣ್ಕಟ್ಟೋ ಅಥವಾ ಹಲವಾರು ಭ್ರಾಂತಿಗಳೋ?
ಸಾಮಾನ್ಯವಾಗಿ ಚುನಾವಣೆ ನಡೆದ ದಿನದ ಕೊನೆಯಲ್ಲಿ ಚುನಾವಣಾ ಆಯೋಗ ಒಟ್ಟು ಮತದಾನ ಪ್ರಮಾಣದ ಸಂಖ್ಯೆ ಮತ್ತು ಶೇಕಡವಾರು ವಿವರವನ್ನು ನೀಡುತ್ತದೆ. ಅದಾದ ಬಳಿಕ ಒಂದೆರಡು ದಿನಗಳಲ್ಲಿ ಅಂತಿಮ ಲೆಕ್ಕಾಚಾರವನ್ನು ತಿಳಿಸುತ್ತದೆ. ಆದರೆ ಈ ಬಾರಿ ಚುನಾವಣಾ ಆಯೋಗ ಮೊದಲೆರಡು ಹಂತಗಳಲ್ಲಿ ಅಂತಿಮ ಮತದಾನ ಪ್ರಮಾಣದ ಡೇಟಾ ನೀಡಲು 11 ದಿನಗಳು ತೆಗೆದುಕೊಂಡಿದೆ. ಅದು ಕೂಡಾ ಬರೀ ಶೇಕಡವಾರು ಲೆಕ್ಕಾಚಾರವನ್ನು ಬಹಿರಂಗಪಡಿಸಿದೆ.
ಚುನಾವಣೆ ನಡೆದ ದಿನದ ಮತದಾನ ಪ್ರಮಾಣದ ಡೇಟಾ ಮತ್ತು ಅಂತಿಮ ಮತದಾನ ಪ್ರಮಾಣದ ಡೇಟಾದ ನಡುವೆ ಶೇಕಡ 4ರಷ್ಟು ವ್ಯತ್ಯಾಸ ಸಾಮಾನ್ಯ. ಆದರೆ ಈ ಲೋಕಸಭೆ ಚುನಾವಣೆಯಲ್ಲಿ ಡೇಟಾದಲ್ಲಿ ಸುಮಾರು ಶೇಕಡ 6-9ರಷ್ಟು ವ್ಯತ್ಯಾಸ ಕಂಡು ಬಂದಿದೆ. ಇದನ್ನು ವಿಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.