ಮುಂದಿನ ಅಧಿಕಾರವಧಿಯಲ್ಲಿ ಯುಸಿಸಿ, ‘ಒಂದು ದೇಶ ಒಂದು ಚುನಾವಣೆ’ ಜಾರಿ: ಅಮಿತ್ ಶಾ

Date:

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಇಡೀ ದೇಶಕ್ಕೆ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮತ್ತು ‘ಒಂದು ದೇಶ ಒಂದು ಚುನಾವಣೆ’ ಜಾರಿ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶಾ ಬಿಜೆಪಿ ಧರ್ಮ ಆಧಾರಿತ ಪ್ರಚಾರದಲ್ಲಿ ತೊಡಗಿಲ್ಲ ಎಂದು ಒತ್ತಿ ಹೇಳಿದ್ದಾರೆ. ಆದರೆ ಮುಸ್ಲಿಮರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸುವುದಾಗಿ ಪ್ರತಿಪಾದಿಸಿದರು.

ಇದನ್ನು ಓದಿದ್ದೀರಾ?  ಒಂದು ದೇಶ ಒಂದು ಚುನಾವಣೆ ಅನ್ನೋದು ಒಂದು ದೇಶ ಒಂದೇ ಪಕ್ಷ ಅನ್ನೋಕಡೆಗೆ ಹೋಗುತ್ತೆ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹಾಗೆಯೇ 370ನೇ ವಿಧಿಯನ್ನು ರದ್ದುಗೊಳಿಸುವುದು ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಧಾರ್ಮಿಕ ವಿಷಯಗಳೆಂದು ಪರಿಗಣಿಸುವುದಾದರೆ, ಬಿಜೆಪಿ ಈ ಪ್ರಯತ್ನವನ್ನು ಮಾಡಿದೆ ಮತ್ತು ಮುಂದುವರಿಸುತ್ತದೆ ಎಂದು ಹೇಳಿದರು.

ಇನ್ನು ಚುನಾವಣಾ ಆಯೋಗ ಸರಿಯಾದ ಡೇಟಾವನ್ನು ನೀಡದ ಆರೋಪದ ಬಗ್ಗೆ ಪ್ರಸ್ತಾಪಿಸಿದ ಶಾ, “ಬಿಜೆಪಿ ಸೋತ ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಹಿಂದಿನ ಚುನಾವಣೆಗಳಲ್ಲಿ ಇದೇ ರೀತಿಯ ಪ್ರೋಟೋಕಾಲ್‌ಗಳನ್ನು ಬಳಸಲಾಗಿದೆ. ಪ್ರತಿಪಕ್ಷಗಳ ಕಳವಳ ಆಧಾರರಹಿತ” ಎಂದು ವಾದಿಸಿದರು.

ಇದನ್ನು ಓದಿದ್ದೀರಾ? ʼಒಂದು ದೇಶ ಒಂದು ಚುನಾವಣೆʼಯೋ, ಇದೊಂದು ಹೂವಿನ ರೂಪದ ಕಣ್ಕಟ್ಟೋ ಅಥವಾ ಹಲವಾರು ಭ್ರಾಂತಿಗಳೋ?

ಸಾಮಾನ್ಯವಾಗಿ ಚುನಾವಣೆ ನಡೆದ ದಿನದ ಕೊನೆಯಲ್ಲಿ ಚುನಾವಣಾ ಆಯೋಗ ಒಟ್ಟು ಮತದಾನ ಪ್ರಮಾಣದ ಸಂಖ್ಯೆ ಮತ್ತು ಶೇಕಡವಾರು ವಿವರವನ್ನು ನೀಡುತ್ತದೆ. ಅದಾದ ಬಳಿಕ ಒಂದೆರಡು ದಿನಗಳಲ್ಲಿ ಅಂತಿಮ ಲೆಕ್ಕಾಚಾರವನ್ನು ತಿಳಿಸುತ್ತದೆ. ಆದರೆ ಈ ಬಾರಿ ಚುನಾವಣಾ ಆಯೋಗ ಮೊದಲೆರಡು ಹಂತಗಳಲ್ಲಿ ಅಂತಿಮ ಮತದಾನ ಪ್ರಮಾಣದ ಡೇಟಾ ನೀಡಲು 11 ದಿನಗಳು ತೆಗೆದುಕೊಂಡಿದೆ. ಅದು ಕೂಡಾ ಬರೀ ಶೇಕಡವಾರು ಲೆಕ್ಕಾಚಾರವನ್ನು ಬಹಿರಂಗಪಡಿಸಿದೆ.

ಚುನಾವಣೆ ನಡೆದ ದಿನದ ಮತದಾನ ಪ್ರಮಾಣದ ಡೇಟಾ ಮತ್ತು ಅಂತಿಮ ಮತದಾನ ಪ್ರಮಾಣದ ಡೇಟಾದ ನಡುವೆ ಶೇಕಡ 4ರಷ್ಟು ವ್ಯತ್ಯಾಸ ಸಾಮಾನ್ಯ. ಆದರೆ ಈ ಲೋಕಸಭೆ ಚುನಾವಣೆಯಲ್ಲಿ ಡೇಟಾದಲ್ಲಿ ಸುಮಾರು ಶೇಕಡ 6-9ರಷ್ಟು ವ್ಯತ್ಯಾಸ ಕಂಡು ಬಂದಿದೆ. ಇದನ್ನು ವಿಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೇವದಾರಿ ಗಣಿಗಾರಿಕೆ ಯೋಜನೆ ಬಗ್ಗೆ ಕಳವಳ ಬೇಡ: ಕೇಂದ್ರ ಸಚಿವ ಕುಮಾರಸ್ವಾಮಿ

ಬಳ್ಳಾರಿಯ ಸಂಡೂರು ವ್ಯಾಪ್ತಿಯ ದೇವದಾರಿ ಪ್ರದೇಶದಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿ...

ಬಿಹಾರ | ಉದ್ಘಾಟನೆಗೂ ಮುನ್ನ ನದಿಯಲ್ಲಿ ಕೊಚ್ಚಿ ಹೋದ 12 ಕೋಟಿ ರೂ. ವೆಚ್ಚದ ಸೇತುವೆ

ಬಿಹಾರ ದ ಅರಾರಿಯಾ ಜಿಲ್ಲೆಯಲ್ಲಿ ಬಾಕ್ರಾ ನದಿಗೆ ಅಡ್ಡಲಾಗಿ 12 ಕೋಟಿ...

ಸಾಹಿತಿಗಳೂ ರಾಜಕಾರಣಿಗಳೇ, ಸರ್ಕಾರದಿಂದ ನೇಮಕವಾಗಿದ್ದಾರೆ, ಸಭೆ ಮಾಡಿದ್ದೇನೆ: ಡಿ ಕೆ ಶಿವಕುಮಾರ್

ಇತ್ತೀಚೆಗೆ ಕೆಪಿಸಿಸಿ ಕಚೇರಿಗೆ ಸಾಹಿತ್ಯ, ಸಂಸ್ಕೃತಿ ಹಾಗೂ ಇತರ ಅಕಾಡೆಮಿಗಳ ಅಧ್ಯಕ್ಷರ...

ವಿನೀತ ಮೋದಿಗೆ ಜಾಗತಿಕ ಒತ್ತಡ; ದುರ್ಬಲಗೊಳ್ಳುತ್ತಿದೆ ವಿದೇಶಾಂಗ ಸಂಬಂಧ

ಭಾರತದಲ್ಲಿ ದುರ್ಬಲರಾಗಿ, ವಿನೀತರಾಗಬೇಕಾದ ಒತ್ತಡ ಹೊಂದಿರುವ ಮೋದಿ, ತಮ್ಮ ಮೂರನೇ ಅವಧಿಯಲ್ಲಿ...