ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಒಂದು ತಿಂಗಳ ಅವಧಿಯಲ್ಲಿಯೇ ಬರೋಬ್ಬರಿ 7 ಕೆಜಿ ತೂಕವನ್ನು ಕಳೆದುಕೊಂಡಿದ್ದು ತಮ್ಮ ತೂಕ ಇಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿದ್ದಾರೆ.
ಕೆಲವು ಗಂಭೀರ ವೈದ್ಯಕೀಯ ಸ್ಥಿತಿಯನ್ನು ಎದುರಿಸುತ್ತಿರುವ ಕಾರಣ ವೈದ್ಯಕೀಯ ಪರೀಕ್ಷೆಗಳನ್ನು ಮಾಡಲು ಇನ್ನೂ ಏಳು ದಿನಗಳವರೆಗೆ ಮಧ್ಯಂತರ ಜಾಮೀನು ವಿಸ್ತರಣೆಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.
ಜೂನ್ 1ರವರೆಗೆ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಆದರೆ ಒಂದು ವಾರ ವಿಸ್ತರಣೆಗೆ ಕೋರಿ ಕೇಜ್ರಿವಾಲ್ ಸುಪ್ರೀಂ ಕೋರ್ಟ್‌ಗೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ. ಆರೋಗ್ಯ ಸಮಸ್ಯೆಯ ಪ್ರಸ್ತಾಪ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಮಧ್ಯಂತರ ಜಾಮೀನು 7 ದಿನ ವಿಸ್ತರಿಸಲು ಕೋರಿ ಸುಪ್ರೀಂಗೆ ಕೇಜ್ರಿವಾಲ್ ಅರ್ಜಿ
ಈ ಬಗ್ಗೆ ಬಟಿಂಡಾದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, “ನನ್ನ ತೂಕ ಭಾರೀ ಇಳಿಕೆಯಾಗಿದೆ. ಯಾವುದೇ ಕಾರಣವಿಲ್ಲದೆ ಒಬ್ಬ ವ್ಯಕ್ತಿಯ ತೂಕ ಒಂದು ತಿಂಗಳಲ್ಲಿ 7 ಕೆಜಿಯಷ್ಟು ಇಳಿಕೆಯಾದರೆ ಅದು ಅತೀ ಗಂಭೀರವಾದ ಸಮಸ್ಯೆ. ಆದ್ದರಿಂದ ವೈದ್ಯರು ಹಲವಾರು ಪರೀಕ್ಷೆಗಳನ್ನು ಸೂಚಿಸಿದ್ದಾರೆ” ಎಂದು ತಿಳಿಸಿದರು.
“ನನ್ನ ಆರೋಗ್ಯ ಸಮಸ್ಯೆಗೆ ಬೇಕಾದ ಎಲ್ಲಾ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ನಾನು ಏಳು ದಿನಗಳ ಕಾಲಾವಕಾಶವನ್ನು ಕೇಳಿದ್ದೇನೆ. ಎಲ್ಲಾ ಪರೀಕ್ಷೆಗಳನ್ನು ಮಾಡಿದರೆ, ಕನಿಷ್ಠ ಗಂಭೀರ ಕಾಯಿಲೆಯಾ ಇದೆಯೇ ಇಲ್ಲವೇ ಎಂಬುವುದಾದರೂ ನಮಗೆ ತಿಳಿಯುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ದೆಹಲಿ| ನನ್ನ ಮತ ಎಎಪಿಗೆ, ಕೇಜ್ರಿವಾಲ್ ವೋಟ್ ಕಾಂಗ್ರೆಸ್‌ಗೆ: ರಾಹುಲ್ ಗಾಂಧಿ
ಅಬಕಾರಿ ನೀತಿ ಹಗರಣದಲ್ಲಿ ಭ್ರಷ್ಟಾಚಾರ ಮಾಡಿದ ಆರೋಪದಲ್ಲಿ ಅರವಿಂದ್ ಕೇಜ್ರಿವಾಲ್ ಅವರು 50 ದಿನಗಳ ಕಾಲ ಜೈಲಿನಲ್ಲಿದ್ದರು. ಮಾರ್ಚ್ 21ರಂದು ಬಂಧನಕ್ಕೆ ಒಳಗಾದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಜೂನ್ 1ರವರೆಗೆ ಜಾಮೀನು ನೀಡಿದ್ದು, ಮೇ 10ರಂದು ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ನಂತರ, ಕೇಜ್ರಿವಾಲ್ ಅವರು ಇಂಡಿಯಾ ಒಕ್ಕೂಟದ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ.