ಈಶಾನ್ಯ ದೆಹಲಿಯಲ್ಲಿ 2020 ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಮಾಜಿ ಜೆಎನ್‌ಯು ವಿದ್ಯಾರ್ಥಿ ನಾಯಕ ಉಮರ್ ಖಾಲೀದ್ ಅವರಿಗೆ ಜಾಮೀನು ನೀಡುವುದನ್ನು ದೆಹಲಿ ಹೈಕೋರ್ಟ್ ನಿರಾಕರಿಸಿದೆ.
ಹೆಚ್ಚುವರಿ ಸೆಷನ್ಸ್‌ನ ನ್ಯಾಯಾಧೀಶರಾದ ಸಮೀರ್ ಬಾಜಪೇಯಿ ಅವರು ಖಾಲೀದ್ ಜಾಮೀನು ಅರ್ಜಿಯನ್ನು ನಿರಾಕರಿಸಿದರು. ಇದು ಖಾಲೀದ್ ಅವರ ನಿಯಮಿತ ಜಾಮೀನು ಅರ್ಜಿಯಾಗಿದ್ದು, ಎರಡನೇ ಬಾರಿ ಜಾಮೀನು ಅರ್ಜಿಗೆ ಮನವಿ ಸಲ್ಲಿಸಿದ್ದರು.
ದೆಹಲಿ ಗಲಭೆಯಲ್ಲಿ ಪಿತೂರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮರ್ ಖಾಲೀದ್ ಅವರು ಯುಎಪಿಎ ಪ್ರಕರಣದಡಿ 2020 ಸೆಪ್ಟಂಬರ್‌ನಿಂದ ಸೆರೆಮನೆಯಲ್ಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಧರ್ಮಾಧಿಕಾರಿ’ಗೆ ಅಡ್ಡಬಿದ್ದ ಸರ್ಕಾರ ಸಾರುತ್ತಿರುವ ಸಂದೇಶವೇನು?
ಖಾಲೀದ್ ಅವರು ಫೆ.14, 2024ರಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹಿಂಪಡೆದ ನಂತರ ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಮೊರೆ ಹೋಗಿದ್ದರು.
ಖಲೀದ್ ಪರ ವಕೀಲರಾದ ತ್ರಿದೀಪ್ ಪಯ್ಸ್, ಆರೋಪಿಯು ಯಾವುದೇ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿಲ್ಲ.ಆತನಿಂದ ಒಂದು ಸಣ್ಣ ದಾಖಲೆಯನ್ನು ವಶಪಡಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕೆಂದು ಕೋರ್ಟ್‌ಗೆ ಮನವಿ ಮಾಡಿದರು.
ಅನಂತರ ಕೋರ್ಟ್ ಮುಂದೆ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕರಾದ ಅಮಿತ್ ಪ್ರಸಾದ್, ಪಿತೂರಿಯ ಭಾಗವಾಗಿ ಖಾಲೀದ್ ಅವರು ತಮ್ಮ ಮಾತುಗಳನ್ನು ಎಲ್ಲ ಕಡೆ ಪ್ರಚುರಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನರೊಂದಿಗೆ ವಿವಿಧ ರೀತಿಯ ಚಾಟ್‌ಗಳನ್ನು ನಡೆಸಿದ್ದಾರೆ. ಪಿತೂರಿಯಲ್ಲಿ ಆರೋಪಿಯ ಹೆಸರು ಮೊದಲಿನಿಂದಲೂ ಕಾಣಿಸಿಕೊಂಡಿದೆ ಎಂದು ಕೋರ್ಟ್‌ಗೆ ತಿಳಿಸಿದರು.
