ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಪುತ್ರನ ಬೆಂಗಾವಲು ವಾಹನ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದಿದೆ.
ಮೃತರಲ್ಲಿ 17 ವರ್ಷದ ಅಪ್ರಾಪ್ತನೊಬ್ಬ ಸೇರಿದ್ದಾನೆ. ಕೈಸರ್ಜಂಗ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬ್ರಿಜ್ ಭೂಷಣ್ ಸಿಂಗ್ ಪುತ್ರ ಕರಣ್ ಭೂಷಣ್ ಸಿಂಗ್ ಈ ಬಾರಿ ಸ್ಪರ್ಧಿಸಿದ್ದಾನೆ.
ವಿಡಿಯೋದಲ್ಲಿರುವ ಪ್ರಕಾರ ಅಪಘಾತದ ಸ್ಥಳದಲ್ಲಿ ಪೊಲೀಸ್ ಬೆಂಗಾವಲು ವಾಹನ ಎಂದು ಕಾರಿನ ಮುಂಭಾಗದ ಗಾಜಿನಲ್ಲಿ ತೋರಿಸುತ್ತದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶಿಕ್ಷಣ ಕ್ಷೇತ್ರವನ್ನು ಖಾಸಗಿಯವರ ಸುಪರ್ದಿಗೊಪ್ಪಿಸುತ್ತಿದೆಯೇ ಸರಕಾರ?
ಎಫ್ಐಆರ್ ವರದಿಯಂತೆ ದೂರುದಾರ ಚಂದಾ ಬೇಗಂ ಅವರ ಹೇಳಿಕೆಯಂತೆ ಇಂದು ಬೆಳಿಗ್ಗೆ 9 ಗಂಟೆಗೆ 17 ವರ್ಷದ ರೆಹಾನ್ ಹಾಗೂ 24 ವರ್ಷದ ಶಾಝಾದೆ ಅವರು ಬೈಕ್ನಲ್ಲಿ ಚಲಿಸುತ್ತಿದ್ದಾಗ ಎದುರುನಿಂದ ವೇಗವಾಗಿ ಬಂದ ಎಸ್ಯುವಿ ಬೆಂಗಾವಲು ವಾಹನ ಡಿಕ್ಕಿ ಹೊಡೆದಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಒಬ್ಬ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಕಾರನ್ನು ವಶಪಡಿಸಿಕೊಂಡಿರುವ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ. ಕಾರಿನಲ್ಲಿ ಬ್ರಿಜ್ಭೂಷಣ್ ಅವರು ಹಿಂದಿನ ಕಾರಿನಲ್ಲಿ ಚಲಿಸುತ್ತಿದ್ದರೆಂಬುದಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಸ್ಥಳದಲ್ಲಿ ಹಲವು ಜನರು ಸೇರಿದ್ದು, ಮೃತರ ಕುಟುಂಬ ಸದಸ್ಯರು ನ್ಯಾಯ ನೀಡಬೇಕೆಂದು ಆಗ್ರಹಿಸಿದ್ದಾರೆ.
ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೆಹಲಿ ಕೋರ್ಟ್ ಈತನ ವಿರುದ್ಧ ಪ್ರಕರವನ್ನು ದಾಖಲಿಸಿದೆ. ಬಿಜೆಪಿ ಈ ಬಾರಿ ಬ್ರಿಜ್ಗೆ ಲೋಕಸಭಾ ಟಿಕೆಟ್ ನಿರಾಕರಿಸಿ ಆತನ ಪುತ್ರನಿಗೆ ನೀಡಿತ್ತು.
