ಪ್ರಾದೇಶಿಕ ಸೇನೆಯಲ್ಲಿ (Territorial army Commissioned Officer) ಕಮಿಷನ್ಡ್ ಆಫೀಸರ್ ಆಗಿ ಭಾರತೀಯ ಸೇನೆಯಲ್ಲಿ ಕರ್ನಾಟಕದ ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ ನಿಯೋಜನೆಗೊಂಡಿದ್ದಾರೆ.
ದಕ್ಷಿಣ ಭಾರತದಿಂದ ಆಯ್ಕೆಯಾಗಿರುವ ಮೊದಲ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿಯಾಗಿರುವ ಭವ್ಯ ನರಸಿಂಹಮೂರ್ತಿ ಅವರು 2022ನೇ ಸಾಲಿನ ಪರೀಕ್ಷೆಯಲ್ಲಿ ಆಯ್ಕೆಯಾದ ಏಕೈಕ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿಯಾಗಿದ್ದಾರೆ.
ಕಾಶ್ಮೀರದಲ್ಲಿ ಭಾರತ ಪಾಕಿಸ್ಥಾನ ಗಡಿಯ ಬಳಿಯಿರುವ ಭಾರತೀಯ ಸೇನಾ ಘಟಕದಲ್ಲಿ ತರಬೇತಿ ಪಡೆದು ಲೆಫ್ಟಿನಂಟ್ (Lieutenant) ಆಗಿ ನಿಯೋಜನೆಗೊಂಡಿದ್ದಾರೆ.
ಪ್ರಾದೇಶಿಕ ಸೇನೆಯು ಭಾರತೀಯ ನಾಗರಿಕರಿಗೆ ತಮ್ಮ ನಾಗರಿಕ ವೃತ್ತಿಯ ಜೊತೆಗೆ ಭಾರತೀಯ ಸೇನೆಯ ಭಾಗವಾಗಿ ದೇಶಸೇವೆ ಮಾಡುವ ಅವಕಾಶ ಒದಗಿಸಿಕೊಡುತ್ತದೆ. ಪ್ರಸ್ತುತ ಪ್ರಾದೇಶಿಕ ಸೇನೆಯಲ್ಲಿ ಕ್ರಿಕೆಟ್ ಆಟಗಾರ ಎಂ ಎಸ್ ಧೋನಿ, ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸೇರಿದ್ದಾರೆ.
ಪ್ರಾದೇಶಿಕ ಸೇನೆಯಲ್ಲಿ ಕಮಿಷನರ್ ಆಫೀಸರ್ ಆಗಿ ನೇಮಕವಾಗಿರುವ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಭವ್ಯ ನರಸಿಂಹಮೂರ್ತಿ, “ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣ ಇದಾಗಿದೆ. ಇನ್ನು ಮುಂದೆ ನಾನು ದೇಶದ ಒಳಗೆ ರಾಜಕಾರಣಿಯಾಗಿ ನನ್ನ ಜನರ ಸೇವೆ ಸಲ್ಲಿಸುವುದರ ಜೊತೆಗೆ ಭಾರತೀಯ ಸೇನಾಧಿಕಾರಿಯಾಗಿ ನನ್ನ ದೇಶ ಕರೆದಾಗ ಗಡಿಯಲ್ಲಿ ದೇಶದ ರಕ್ಷಣೆ ಮಾಡಲು ಸಿದ್ದಳಿದ್ದೇನೆ. ವರ್ಷದಲ್ಲಿ ಎರಡು ತಿಂಗಳು ನಾನು ದೇಶ ಸೇವೆ ಮಾಡಬೇಕು. ರಾಜ್ಯದ ಜನರ ಆಶೀರ್ವಾದ ನನ್ನ ಮೇಲೆ ಸದಾ ಹೀಗೆ ಇರಲಿ” ಎಂದು ಕೋರಿದರು.
Some prominent personalities currently in TA include Cricketer Sri M S Dhoni, Ex Dy CMof Rajasthan Sri Sachin Pilot, Ex Cabinet Minister Sri Anurag Thakur.
Anymore I will be serving my country both as Politician and as Army Officer.
Jai Hind
Lt Bhavya Narasimhamurthy
3/3 pic.twitter.com/LdTIoD6Wd6— Bhavya Narasimhamurthy (@Bhavyanmurthy) June 1, 2024
