2024ರ ಲೋಕಸಭಾ ಚುನಾವಣೆಯ ಮತದಾನ ಮುಗಿದಿದ್ದು, ಹಲವಾರು ಸಂಸ್ಥೆಗಳು ಮತ್ತು ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸುತ್ತಿವೆ. ಎಲ್ಲ ಸಮೀಕ್ಷೆಗಳು ಬಿಜೆಪಿ ಮತ್ತು ಎನ್‌ಡಿಎ ಪರವಾಗಿದ್ದು, ಮೂರನೇ ಅವಧಿಗೆ ಮೋದಿ ಪ್ರಧಾನಿಯಾಗುತ್ತಾರೆ ಎಂದು ಹೇಳುತ್ತಿವೆ.
ಚುನಾವಣೋತ್ತರ ಸಮೀಕ್ಷೆ ನಡೆಸಿರುವ ರಿಪಬ್ಲಿಕ್ ಟಿವಿ, ಇಂಡಿಯಾ ನ್ಯೂಸ್, ಮ್ಯಾಟ್ರಿಜ್, ಜೀ ನ್ಯೂಸ್, ಜನ್ಕಿ ಬಾತ್, ಲೋಕ್‌ಪೋಲ್ ಸಂಸ್ಥೆಗಳು ಮತಗಟ್ಟೆ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಯ ಅಂತಿಗಳನ್ನು ಪ್ರಕಟಿಸಿವೆ.
ವಿವಿಧ ಸಂಸ್ಥೆಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆಗಳ ಅಂಕಿಅಂಶಗಳು ಹೀಗಿವೆ;
ಚುನಾವಣೋತ್ತರ ಸಮೀಕ್ಷೆ – 2024 |
|||
ಎನ್‌ಡಿಎ | ಇಂಡಿಯಾ | ಇತರೆ | |
ರಿಪಬ್ಲಿಕ್ ಟಿವಿ | 359 | 154 | 30 |
ಇಂಡಿಯಾ ನ್ಯೂಸ್ | 371 | 125 | 47 |
ಮ್ಯಾಟ್ರಿಜ್ | 353-368 | 118-133 | 43-48 |
ಜೀನ್ಯೂಸ್ | 353-367 | 118-133 | 43-68 |
ಜನ್ಕಿ ಬಾತ್ | 362-392 | 141-161 | 10-20 |
ಲೋಕ್‌ಪೋಲ್ | 325-335 | 155-165 | 48-55 |
ಪಿ-ಮಾರ್ಕ್ಯೂ | 359 | 154 | 30 |
ನ್ಯೂಸ್ ನೇಷನ್ | 378 | 169 | 23 |
ಲೋಕಸಭೆಯಲ್ಲಿ ಒಟ್ಟು 545 ಸ್ಥಾನಗಳಿದ್ದು, ಕೇಂದ್ರದಲ್ಲಿ ಸರ್ಕಾರ ರಚಿಸಲು ಬಹುಮತಕ್ಕೆ ಕನಿಷ್ಠ 272 ಸ್ಥಾನಗಳನ್ನು ಗೆಲ್ಲಬೇಕು.