ಹಾವೇರಿ | ಬುದ್ಧನ ಜೀವನ ತತ್ವಗಳು ಎಲ್ಲ ಕಾಲಕ್ಕೂ ಬೆಲೆಯುಳ್ಳವುಗಳಾಗಿವೆ: ದಸಂಸ ರಾಜ್ಯಾಧ್ಯಕ್ಷ ತಿರಕಪ್ಪ ಚಿಕ್ಕೇರಿ

Date:

Advertisements

ಬುದ್ಧನ ಜೀವನ ತತ್ವಗಳು ಎಲ್ಲ ಕಾಲಕ್ಕೂ ಬೆಲೆಯುಳ್ಳವುಗಳು ಆಗಿವೆ. ನೆಮ್ಮದಿಯ ಬದುಕಿಗೆ ಸರಳ ಜೀವನ ಮುಖ್ಯವಾಗಿದೆ. ಗೌತಮ ಬುದ್ಧರು ಜೀವನದ ಅರ್ಥವನ್ನು ಕಂಡುಕೊಂಡು ವಿಶ್ವದಲ್ಲಿ ಶಾಂತಿ, ನೆಮ್ಮದಿಯ ಜೀವನಕ್ಕೆ ತಮ್ಮನ್ನು ಅರ್ಪಿಸಿಕೊಂಡರು. ಅವರ ಜೀವನ ಆದರ್ಶಗಳನ್ನು ಪಾಲಿಸುವಂತಾಗಲಿ ಎಂದು ದಸಂಸ(ಭೀಮ ಘರ್ಜನೆ)ದ ರಾಜ್ಯಾಧ್ಯಕ್ಷ ತಿರಕಪ್ಪ ಚಿಕ್ಕೇರಿ ಹೇಳಿದರು.

ಹಾವೇರಿ ನಗರದ ಕಾಗಿನೆಲೆ ಮುರುಘರಾಜೇಂದ್ರ ಮಠದಲ್ಲಿ ದಲಿತ ಸಂಘರ್ಷ ಸಮಿತಿ(ಭೀಮ ಘರ್ಜನೆ)ಯಿಂದ ತಿರಕಪ್ಪ ಚಿಕ್ಕೇರಿ ಅವರ ಘನ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಗೌತಮ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದಂತ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಮಿತಿ ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ ಮಾತನಾಡಿ, “ಗೌತಮ ಬುದ್ಧರ ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡು ನೆಮ್ಮದಿಯ ಬದುಕಿಗೆ ಸಾಕ್ಷಿಯಾಗೋಣ” ಎಂದರು.

Advertisements

ಈ ಸುದ್ದಿ ಓದಿದ್ದೀರಾ? ಬೀದರ್‌ | ಕೃಷಿ ನಿರ್ದೇಶಕರಿಂದ ಅಧಿಕಾರ ದುರ್ಬಳಕೆ ಆರೋಪ; ಕ್ರಮಕ್ಕೆ ಆಗ್ರಹ

ಕಟ್ಟಡ ಕಾರ್ಮಿಕರ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ ಎನ್ ಮಾಸೂರ, ಕಲ್ಯಾಣ ಸಮಿತಿಯ ಜಿಲ್ಲಾಧ್ಯಕ್ಷ ಮಂಜಪ್ಪ ಮರೋಳ, ಹಾನಗಲ್ ತಾಲೂಕಿನ ಸಂಚಾಲಕ ಜಗದೀಶ ಹರಿಜನ, ಮಹೇಶಪ್ಪ ಹರಿಜನ, ಹನುಮಂತಪ್ಪ ಸಿ ಡಿ, ಮಂಜುನಾಥ ಹಾವನೂರ ಹಾಗೂ ಡಿಎಸ್‌ಎಸ್ ಭೀಮ ಘರ್ಜನೆ ಸಂಘಟನೆಯ ಪದಾಧಿಕಾರಿಗಳಾದ ಬಸವರಾಜ ಎಂ ದೊಡ್ಡಮನಿ, ಸಂತೋಷ ಕನ್ನಮ್ಮನವರ, ನಿಂಗಪ್ಪ ಹಿತ್ತಲಮನಿ, ಮಲ್ಲೇಶಪ್ಪ ಹಿರೇಕ್ಕನವರ, ಪರಮೇಶ ಮಾದರ, ಚಂದ್ರಪ್ಪ ಮಾದರ, ನೀಲಪ್ಪ ಮಾದರ, ಗಣೇಶ ಹರಿಜನ, ಬಿದ್ದಾಡೆಪ್ಪ ಹಂಸಬಾವಿ, ನಾಗರಾಜ ಹರಿಜನ, ದಯಾನಂದ ಹರಿಜನ, ಹನುಮಂತ ಹೊಳೆಮ್ಮನವರ, ಶಿವಾನಂದ ಹಿತ್ತಲಮನಿ, ಮಲ್ಲೇಶಪ್ಪ ಹರಿಜನ ಇನ್ನೂ ಅನೇಕ ಪದಾಧಿಕಾರಿಗಳು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X