ಆರಂಭವಾದ ಮಳೆ ಆರ್ಭಟ; ಮತ್ತೆ ಪ್ರವಾಹದ ಹಾದಿ ಹಿಡಿದ ಬೆಂಗಳೂರು

Date:

ಕೆಲವು ದಿನಗಳ ನಂತರ ಬೆಂಗಳೂರಿನಲ್ಲಿ ಶನಿವಾರ ರಾತ್ರಿಯಿಡೀ ಭಾರೀ ಮಳೆ ಸುರಿದಿದೆ. ರಾತ್ರಿ ಸುರಿದ ಮಳೆಗೆ ನಗರದಲ್ಲಿ ಅವಾಂತರ ಸೃಷ್ಟಿಯಾಗಿದ್ದು, ಹಲವು ಮರಗಳು ಧರೆಗುರುಳಿವೆ.

ಕೇರಳಕ್ಕೆ ಮುಂಗಾರು ಮಾರುತಗಳು ಅಪ್ಪಳಿಸಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಮಳೆ ಅರ್ಭಟ ಶುರುವಾಗಿದೆ. ಶನಿವಾರ ತಡ ರಾತ್ರಿವರೆಗೂ ಸುರಿದ ಭಾರೀ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನಗರದ ಹಲವೆಡೆ ಗಾಳಿ ಮಳೆಗೆ ಮರಗಳು ಧರೆಗುರುಳಿವೆ. ಅಲ್ಲಲ್ಲಿ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು.

ಬೆಂಗಳೂರಿನ ಶೇಷಾದ್ರಿಪುರಂ, ಶಿವಾನಂದ ಸರ್ಕಲ್, ವಿಜಯನಗರ, ಶಿವಾಜಿನಗರ, ಮೈಸೂರು ರಸ್ತೆ, ಗೋವಿಂದರಾಜನಗರ, ಚಾಮರಾಜಪೇಟೆ, ಮಲ್ಲೇಶ್ವರಂ, ವಸಂತನಗರ, ಶಾಂತಿನಗರ, ಜಯನಗರ, ಯಶವಂತಪುರ, ರಾಜಾಜಿನಗರ, ಕೋರಮಂಗಲ ಹಾಗೂ ಎಂಜಿ ರಸ್ತೆ, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಹಲವೆಡೆ ಧಾರಾಕಾರ ಮಳೆಯಾಗಿದೆ. ಕೇವಲ ಒಂದೂವರೆ ಗಂಟೆಯ ಮಳೆಗೆ ನಗರದ ರಸ್ತೆಗಳು ಜಲಾವೃತಗೊಂಡು ನದಿಯಂತಾಗಿವೆ. ಭಾರೀ ಮಳೆಯಿಂದ ರಸ್ತೆಗಳು ಜಲಾವೃತ್ತವಾದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು. ಮಳೆ ನೀರು ನಿಂತು ರಸ್ತೆಗುಂಡಿ ಕಾಣದೇ ವಾಹನ ಸವಾರರು ಜೀವ ಪಣಕ್ಕಿಟ್ಟು ವಾಹನ ಚಲಾಯಿಸಬೇಕಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇನ್ನು ಸರ್ಜಾಪುರದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಇಡೀ ಪ್ರದೇಶ ನದಿಯಂತಾಗಿದೆ. ಬೊಮ್ಮನಹಳ್ಳಿಯ ಸಾರಕ್ಕಿ ಸಿಗ್ನಲ್ ಬಳಿಯ ರಾಮಕೃಷ್ಣ ನಗರದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ರಾತ್ರಿಯಿಡಿ ಜನರು ನಿದ್ದೆ ಮಾಡದೆ ಜಾಗರಣೆ ಮಾಡುವಂತಾಗಿದೆ. ಇದರಿಂದ ಬಿಬಿಎಂಪಿ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಫ್ಲೈಓವರ್ ಹಾಗೂ ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ಶೇಖರಣೆಯಾಗಿ ಕೆಲ ಹೊತ್ತು ವಾಹನ ಸಂಚಾರ ಮಾಡಲು ಆಗದ ಸ್ಥಿತಿ ನಿರ್ಮಾಣವಾಗಿತ್ತು.

ಮಾರತ್‌ಹಳ್ಳಿ ಜಂಕ್ಷನ್‌ನಲ್ಲಿ ಸವಾರರು ನೀರಿನಲ್ಲಿ ಮುಳುಗಿದ ರಸ್ತೆ ಗುಂಡಿ ದಾಟಲು ಹರಸಾಹಸ ಪಟ್ಟ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೋಣನಕುಂಟೆ ಪ್ರದೇಶದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಸ್ಥಳೀಯರು ಮಳೆ ನೀರಿನಲ್ಲಿ ಆಲಿಕಲ್ಲುಗಳನ್ನು ಹೆಕ್ಕುತ್ತಿರುವ ವಿಡಿಯೋ ಹರಿದಾಡುತ್ತಿದೆ.

ಈ ಸುದ್ದಿ ಓದಿದ್ದೀರಾ? ಗಗನಕ್ಕೇರಿದ ತರಕಾರಿ ಬೆಲೆ | ಕಡಿಮೆ ಬೆಲೆಗೆ ಸಿಗುತ್ತಿದ್ದ ಮೂಲಂಗಿ ದರ ₹80ಕ್ಕೆ ಏರಿಕೆ; ₹240ಕ್ಕೆ ಜಿಗಿದ ಬೀನ್ಸ್‌

ಅಧಿಕ ಗಾಳಿ ಬೀಸಿದ ಪರಿಣಾಮ ಸುಲ್ತಾನ್ ಪಾಳ್ಯ, ಯಲಹಂಕ, ಯಶವಂತಪುರ ಸೇರಿದಂತೆ ಹಲವು ಕಡೆ ಸುರಿದ ಭಾರೀ ಮಳೆಗೆ ಮರ ಗಿಡ ರೆಂಬೆ ಕೊಂಬೆಗಳು ಧರಗೆ ಉರುಳಿ ಬಿದ್ದಿವೆ. ನಾಗಾವರ ಮುಖ್ಯರಸ್ತೆಯಲ್ಲಿ ಬೃಹತ್ ಮರ ರಸ್ತೆಗೆ ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ನಗರದಲ್ಲಿ ಮಳೆಯ ಅರ್ಭಟಕ್ಕೆ ಪಶ್ಚಿಮ ವಲಯದಲ್ಲಿ 2, ದಕ್ಷಿಣ ವಲಯದಲ್ಲಿ 1 ಪೂರ್ವ ವಲಯದಲ್ಲಿ 2, ಆರ್.ಆರ್‌ ನಗರ 2, ಮಹದೇವಪುರ 1, ದಾಸರಹಳ್ಳಿ 1 ಸೇರಿದಂತೆ ಒಟ್ಟು 9 ಮರಗಳು ಉರುಳಿ ಬಿದ್ದಿವೆ.

ಶನಿವಾರ ರಾತ್ರಿ ನಗರದ ಇಂಡಸ್ಟ್ರಿಯಲ್ ಏರಿಯಾ – 7.8 ಸೆಂ.ಮೀ, ಹೊರಮಾವು – 7 ಸೆಂ.ಮೀ, ವಿದ್ಯಾಪೀಠ – 6.3 ಸೆಂ.ಮೀ, ಹಂಪಿನಗರ – 6.2 ಸೆಂ.ಮೀ, ಕೊಡಿಗೆಹಳ್ಳಿ – 6 ಸೆಂ.ಮೀ, ಹೇರೋಹಳ್ಳಿ – 5.9 ಸೆಂಮೀ, ದೊಡ್ಡನೆಕುಂದಿ – 5.8 ಸೆಂಮೀ, ಜಕ್ಕೂರು – 5.6 ಸೆಂ.ಮೀ, ನಾಗೇನಹಳ್ಳಿ – 5.3 ಸೆಂ.ಮೀ, ಯಲಹಂಕ – 5.3 ಸೆಂ.ಮೀ, ಆರ್‌ ಆರ್‌ ನಗರ – 5.2 ಸೆಂ.ಮೀ ಮಳೆಯಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಕೃಷಿ ಸಾಲ ಬಾಧೆ : ವಿಷ ಸೇವಿಸಿ ರೈತ ಆತ್ಮಹತ್ಯೆ

ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ಮನನೊಂದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ...

ಕೇಂದ್ರ ಬಜೆಟ್‌-2024 | ಮಹಿಳೆಯರಿಗೆ ನೆರವಾಗುವ ನಾರಿಶಕ್ತಿ ಬಜೆಟ್ ಇದಾಗಿದೆ: ಎಚ್‌ ಡಿ ಕುಮಾರಸ್ವಾಮಿ

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ 'ವಿಕಸಿತ ಭಾರತ' ನಿರ್ಮಾಣಕ್ಕೆ ಶಕ್ತಿ...

ಉತ್ತರ ಕನ್ನಡ | ಶಿರೂರು ದುರಂತ : ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ಮಹಿಳೆ ಶವ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ನಾಪತ್ತೆಯಾಗಿದ್ದ...

ಕೋಲಾರ | ಕಾಲೇಜಿನಲ್ಲಿ ಹೊಡೆದಾಡಿಕೊಂಡ ಉಪನ್ಯಾಸಕರು; ಆಸ್ಪತ್ರೆಗೆ ದಾಖಲು

ಕೋಲಾರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರು ಹೊಡೆದಾಡಿಕೊಂಡಿರುವ ಘಟನೆ ಮಂಗಳವಾರ ಬೆಳಿಗ್ಗೆ...