ಪಾದಚಾರಿಗಳ ಮೇಲೆ ಅಪಘಾತ ನಡೆಸಿದ ಆರೋಪದ ಮೇಲೆ ಗುಪೊಂದು ಬಾಲಿವುಡ್ ನಟಿ ರವೀನಾ ಟಂಡನ್ ಹಾಗೂ ಆಕೆಯ ಚಾಲಕನ ಮೇಲೆ ಹಲ್ಲೆ ನಡೆಸಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮೂವರು ಮಹಿಳೆಯರಿಗೆ ಹಲ್ಲೆ ಮಾಡಿದ್ದಾರೆಂದು ಒಂದು ನಿಂದಿಸಿ ಹಲ್ಲೆ ನಡೆಸುತ್ತಿದ್ದಾರೆ.
ಪೊಲೀಸರ ಪ್ರಕಾರ ಈ ಘಟನೆಯು ಶನಿವಾರ ರಾತ್ರಿ ಮುಂಬೈನ ಬಾಂದ್ರದಲ್ಲಿನ ಕಾರ್ಟರ್ ರಸ್ತೆಯಲ್ಲಿ ನಡೆದಿದ್ದು, ಖಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ.
ವಿಡಿಯೋದಲ್ಲಿರುವಂತೆ, ರವೀನಾ ಟಂಡನ್ ಕಾರಿನ ಚಾಲಕ ಮೂವರು ಮಹಿಳೆಯರಿಗೆ ಅಪಘಾತ ಮಾಡಿದ ಮಾಡಿದ ಕಾರಣಕ್ಕಾಗಿ ಕೋಪಗೊಂಡ ಉದ್ರಿಕ್ತ ಗುಂಪು ನಟಿ ಹಾಗೂ ಚಾಲಕನನ್ನು ತರಾಟೆಗೆ ತೆಗೆದುಕೊಳ್ಳುತ್ತಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಧಿಕಾರ ಸ್ಥಾನಗಳಿಂದ ಮಹಿಳೆಯರನ್ನು ಹೊರಗಿಟ್ಟು ಸಮಾನತೆ ಬಗ್ಗೆ ಮಾತನಾಡುವುದಕ್ಕೆ ಅರ್ಥವಿದೆಯೇ?
ಜಗಳವಾಡುತ್ತಿದ್ದ ಗುಂಪಿನ ಜೊತೆ ರವೀನಾ ಟಂಡನ್ ಮಾತನಾಡುತ್ತಿರುವ ಸಂದರ್ಭದಲ್ಲಿ ಆಕೆಯನ್ನು ತಳ್ಳಿ ಹಲ್ಲೆ ನಡೆಸಿದೆ. ನಟಿ ನನಗೆ ಹೊಡೆಯಬೇಡಿ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಡಿಯೋದಲ್ಲಿ ವ್ಯಕ್ತಿಯೊಬ್ಬರು, ರವೀನಾ ಟಂಡನ್ ಚಾಲಕ ತಮ್ಮ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನು ಪ್ರಶ್ನಿಸಿದಾಗ ಆತ ತಮ್ಮ ತಾಯಿಯ ಮೇಲೆ ಹಲ್ಲೆ ಪುನಃ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಿದ್ದಾರೆ.
ತಾಯಿ ಸಹೋದರಿ ಹಾಗೂ ಸಂಬಂಧಿಕರೊಬ್ಬರ ಜೊತೆ ನಟಿಯ ಮನೆಯ ಬಳಿ ಹೋಗುತ್ತಿದ್ದಾಗ ಘಟನೆ ನಡೆದಿದೆ ವ್ಯಕ್ತಿ ತಿಳಿಸಿದ್ದಾರೆ. ನಟಿ ಮದ್ಯಪಾನ ಮಾಡಿದ್ದರು. ವಾಹನದಿಂದ ಕೆಳಗಿಳಿದು ಬಂದು ನಮ್ಮ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವ್ಯಕ್ತಿ ಆರೋಪಿಸಿದ್ದಾರೆ.
ಘಟನೆ ಬಗ್ಗೆ ಸಾರ್ವಜನಿಕವಾಗಿ ನಟಿ ರವೀನಾ ಟಂಡನ್ ಇಲ್ಲಿಯವರೆಗೂ ಯಾವುದೇ ಹೇಳಿಕೆ ನೀಡಿಲ್ಲ.
