ಲೋಕಸಭೆ ಚುನಾವಣೆ 2024ರ ಮತ ಎಣಿಕೆ ಪ್ರಕ್ರಿಯೆಯು ಬಿರುಸಿನಿಂದ ಸಾಗುತ್ತಿದ್ದು, ದಕ್ಷಿಣ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದತ್ತ ಚಿತ್ತ ನೆಟ್ಟಿದೆ.
ಆಂಧ್ರಪ್ರದೇಶದಲ್ಲಿ 25 ಲೋಕಸಭೆ ಕ್ಷೇತ್ರಗಳು ಮತ್ತು 175 ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ಏಕ ಕಾಲದಲ್ಲಿ ನಡೆಯುತ್ತಿದೆ. ಟಿಡಿಪಿ 113 ವಿಧಾನಸಭೆ ಕ್ಷೇತ್ರಲ್ಲಿ ಮುನ್ನಡೆ ಸಾಧಿಸಿದರೆ ವೈಎಸ್‌ಸಿಆರ್‌ಪಿ 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
Assembly election results: TDP ahead in Andhra Pradesh; ruling YSRCP leading on 6 seats in early trends
Read @ANI Story | https://t.co/vxQoe71C0C#AndhraPradesh #Elections pic.twitter.com/28vxS6bGdq
— ANI Digital (@ani_digital) June 4, 2024
ಇನ್ನು ತೆಲಂಗಾಣದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಕಂಡು ಬಂದಿದೆ. ಇನ್ನು ಹೈದಾರಾಬಾದ್ ಲೋಕಸಭೆ ಕ್ಷೇತ್ರದಲ್ಲಿ ಎಐಎಂಐಎಂ ಮುನ್ನಡೆಯನ್ನು ಸಾಧಿಸಿದೆ.
ಇದನ್ನು ಓದಿದ್ದೀರಾ? ಕೇರಳ, ತಮಿಳುನಾಡು ಲೋಕಸಭೆ ಚುನಾವಣೆ: ರಾಹುಲ್ ಮುನ್ನಡೆ, ತಮಿಳುನಾಡಿನಲ್ಲಿ ಸ್ಟ್ರಾಂಗ್ ರೂಮ್ ಕೀ ನಾಪತ್ತೆ
ಮೊದಲ ಸುತ್ತಿನ ನಂತರ ವಾರಂಗಲ್ (ಎಸ್‌ಸಿ) ಮತ್ತು ಮಹಬೂಬಾಬಾದ್ (ಎಸ್‌ಟಿ) ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಕಡಿಯಂ ಕಾವ್ಯ ಮತ್ತು ಪೋರಿಕಾ ಬಲರಾಮ್ ನಾಯಕ್ ಮುನ್ನಡೆ ಸಾಧಿಸಿದ್ದಾರೆ.
ಇನ್ನು ಎನ್‌ಡಿಎ 301 ಕ್ಷೇತ್ರಗಳಲ್ಲಿ, ಇಂಡಿಯಾ ಒಕ್ಕೂಟ 211 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಲೋಕಸಭೆ ಚುನಾವಣೆ ನಡುವೆ ಷೇರು ಮಾರುಕಟ್ಟೆಯು ನಷ್ಟದಲ್ಲಿ ಸಾಗುತ್ತಿದೆ.