ಚುನಾವಣೆ ಫಲಿತಾಂಶ | ಪಂಜಾಬ್ ಮತ್ತು ಹರಿಯಾಣದಲ್ಲಿ ಬಿಜೆಪಿಗೆ ಹಿನ್ನಡೆ

Date:

Advertisements

ದೇಶದಲ್ಲಿ ಲೋಕಸಭೆ ಚುನಾವಣೆಯ ಮತಎಣಿಕೆ ನಡೆಯುತ್ತಿದೆ. ‘ಇಂಡಿಯಾ’ ಒಕ್ಕೂಟ ಮತ್ತು ಎನ್‌ಡಿಎ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ರೈತ ಹೋರಾಟದ ಕಣವಾಗಿದ್ದ ಪಂಜಾಬ್ ಮತ್ತು ಹರಿಯಾಣದಲ್ಲಿ ಬಿಜೆಪಿ ಹಿನ್ನಡೆ ಸಾಧಿಸಿದೆ. ರೈತ ಸಿಟ್ಟು ಪ್ರತಿಧ್ವನಿಸುತ್ತಿದೆ. ಪಂಜಾಬ್‌ನ ಜಲಂಧರ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಮುನ್ನಡೆ ಸಾಧಿಸಿದ್ದಾರೆ.

ಪಂಜಾಬ್‌ನ 13 ಸ್ಥಾನಗಳಲ್ಲಿ ಬಿಜೆಪಿ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಇಂಡಿಯಾ ಒಕ್ಕೂಟ 6 ಸ್ಥಾನಗಳಲ್ಲಿ ಮುಂದಿದೆ. ಚಂಡೀಗಢದಲ್ಲಿ ಇಂಡಿಯಾ ಒಕ್ಕೂಟ ಏಕೈಕ ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಹರಿಯಾಣದ 10 ಕ್ಷೇತ್ರಗಳಲ್ಲಿ ಬಿಜೆಪಿ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಇಂಡಿಯಾ ಒಕ್ಕೂಟ 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಜಲಂಧರ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರು ಸುಮಾರು 16,000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಏತನ್ಮಧ್ಯೆ, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ಲುಧಿಯಾನದ ದಖಾ ಮತ್ತು ಜಾಗರಾನ್‌ನ ಗ್ರಾಮೀಣ ಭಾಗಗಳಲ್ಲಿ ಮುಂದಿದ್ದಾರೆ.

Advertisements

ಆನಂದ್‌ಪುರ ಸಾಹಿಬ್‌ನ ಎಎಪಿಯ ಮಲ್ವಿಂದರ್ ಕಾಂಗ್ ಅವರು 3,000 ಮತಗಳಿಂದ ಮುನ್ನಡೆ ಸಾಧಿಸುತ್ತಿದ್ದಾರೆ. ಉತ್ತರಾಖಂಡದ ಎಲ್ಲ ಐದು ಸ್ಥಾನಗಳಲ್ಲಿ ಮತ್ತು ಹಿಮಾಚಲ ಪ್ರದೇಶದ ನಾಲ್ಕರಲ್ಲಿ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಪಂಜಾಬ್‌ನಲ್ಲಿ 62.80% ಮತದಾನವಾಗಿದೆ. ಹಿಮಾಚಲ ಪ್ರದೇಶವು 71% ರಷ್ಟು ಮತದಾನವಾಗಿದೆ. ಆದರೆ ಚಂಡೀಗಢದಲ್ಲಿ 40.14% ಮತದಾನ ದಾಖಲಾಗಿದೆ. ಹರಿಯಾಣದ ಅಂತಿಮ ಸರಾಸರಿಯು 64.8% ರಷ್ಟಿದೆ ಮತ್ತು ಉತ್ತರಾಖಂಡದಲ್ಲಿ, 2019ಕ್ಕೆ ಹೋಲಿಸಿದರೆ ಐದು ಸ್ಥಾನಗಳಲ್ಲಿ ಮೂರು ಸ್ಥಾನಗಳು ಮತದಾರರಲ್ಲಿ ಕುಸಿತ ಕಂಡಿವೆ.

ಹರಿಯಾಣದ 6 ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ 4 ರಲ್ಲಿ ಬಿಜೆಪಿ ಮುಂದಿದೆ. ವರುಣ್ ಚೌಧರಿ, ಕುಮಾರಿ ಸೆಲ್ಜಾ ಮತ್ತು ರಾಜ್ ಬಬ್ಬರ್ ಅವರ ಪ್ರಬಲ ಪ್ರದರ್ಶನ ತೋರಿಸುತ್ತಿದ್ದಾರೆ.

ಕಾಂಗ್ರೆಸ್ 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಅಂಬಾಲದಿಂದ ವರುಣ್ ಚೌಧರಿ ಅವರು 173078 ಮತಗಳನ್ನು ಪಡೆದು 27362 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಸಿರ್ಸಾದಿಂದ ಸೆಲ್ಜಾ ಅವರು 206364 ಮತಗಳನ್ನು ಪಡೆದು 76484 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಸೋನಿಪತ್‌ದಿಂದ ಸತ್ಪಾಲ್ ಬ್ರಹ್ಮಚಾರಿ 117359 ಮತಗಳನ್ನು ಪಡೆದು 4549 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಹಿಸಾರ್‌ದಿಂದ ಜೈ ಪ್ರಕಾಶ್ 91204 ಮತಗಳನ್ನು ಪಡೆದು 5848 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ರೋಹ್ಟಕ್‌ದಿಂದ ದೀಪೇಂದರ್ ಸಿಂಗ್ ಹೂಡಾ 143706 ಮತಗಳನ್ನು ಪಡೆದು 81330 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಗುರಗಾಂವ್‌ದಿಂದ ರಾಜ್ ಬಬ್ಬರ್ 152575 ಮತಗಳನ್ನು ಪಡೆದು 38095 ಮತಗಳಿಂದ ಮುನ್ನಡೆಯಲ್ಲಿದ್ದಾರೆ.

ಬಿಜೆಪಿ ನಾಲ್ಕು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕುರುಕ್ಷೇತ್ರ ನವೀನ್ ಜಿಂದಾಲ್ 63491 ಮತಗಳನ್ನು ಪಡೆದು 565 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಕರ್ನಾಲ್ ಮನೋಹರ್ ಲಾಲ್ ಖಟ್ಟರ್ 167530 ಮತಗಳನ್ನು ಪಡೆದು 43171 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಭಿವಾನಿ-ಮಹೇಂದ್ರಗಢ ಧರಂಭೀರ್ ಸಿಂಗ್ 165489 ಮತಗಳನ್ನು ಪಡೆದು 5167 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಫರಿದಾಬಾದ್ ಕ್ರಿಶನ್ ಪಾಲ್ 129261 ಮತಗಳನ್ನು ಪಡೆದು 15276 ಮತಗಳಿಂದ ಮುನ್ನಡೆಯಲ್ಲಿದ್ದಾರೆ.

ಪಂಜಾಬ್‌ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) 6 ಸ್ಥಾನಗಳನ್ನು ಪಡೆದುಕೊಂಡಿದೆ. ಆಮ್ ಆದ್ಮಿ ಪಕ್ಷ (ಎಎಪಿ) 3 ಸ್ಥಾನಗಳನ್ನು ಮುನ್ನಡೆಯಿದೆ. ಶಿರೋಮಣಿ ಅಕಾಲಿದಳ (ಎಸ್‌ಎಡಿ) 1 ಸ್ಥಾನವನ್ನು ಪಡೆದುಕೊಂಡಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಸಹ 1 ಸ್ಥಾನ ಮುನ್ನಡೆಯಲ್ಲಿದೆ.

ಈ ಸುದ್ದಿ ಓದಿದ್ದೀರಾ? ಒಡಿಶಾ ವಿಧಾನಸಭೆ ಚುನಾವಣೆ | ಬಿಜೆಪಿ ಮುನ್ನಡೆ; ಆಡಳಿತಾರೂಢ ಬಿಜೆಡಿಗೆ ಭಾರೀ ಹಿನ್ನಡೆ

ಕರಮ್‌ಜಿತ್ ಸಿಂಗ್ ಅನ್ಮೋಲ್ ಅವರ ಜನಪ್ರಿಯತೆಯು ಫರೀದ್‌ಕೋಟ್‌ನಲ್ಲಿ ಮತಗಳಾಗಿ ಪರಿವರ್ತನೆಯಾಗಿಲ್ಲ. ಏಕೆಂದರೆ, ಸರಬ್ಜೀತ್ ಸಿಂಗ್ ಖಾಲ್ಸಾ ಅವರು 28,818 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಬಟಿಂಡಾದಲ್ಲಿ ಎಸ್‌ಎಡಿಯ ಹರ್‌ಸಿಮ್ರತ್ ಕೌರ್ ಬಾದಲ್ ಅವರು 22,334 ಮತಗಳಿಗೆ ಮುನ್ನಡೆ ಸಾಧಿಸಿದ್ದಾರೆ.

ಪಂಜಾಬ್‌ನ ಲೂಧಿಯಾನ, ಗುರುದಾಸ್‌ಪುರ, ಪಟಿಯಾಲ ಮತ್ತು ಅಮೃತಸರ ಈ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಪ್ರಬಲ ಪೈಪೋಟಿಯನ್ನು ತೋರಿಸುತ್ತಿದೆ. ಎಸ್‌ಎಡಿ ಬಟಿಂಡಾ ಮತ್ತು ಫಿರೋಜ್‌ಪುರ ಎರಡು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X