ಎಕ್ಸಿಟ್ ಪೋಲ್‌ಗಳಲ್ಲಿ ಊಹಿಸಿದ್ದಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ ಷೇರುಗಳು ಭಾರೀ ಕುಸಿತ ಕಂಡಿದೆ. ಗೌತಮ್ ಅದಾನಿ ಮಾಲೀಕತ್ವದ ಅದಾನಿ ಗ್ರೂಪ್‌ನ ಎಲ್ಲ ಷೇರುಗಳು ಮಂಗಳವಾರು ಇಳಿಕೆಯಾಗಿದೆ.
ಅದಾನಿ ಪೋರ್ಟ್ಸ್ ಷೇರು ಶೇ.20ರಷ್ಟು, ಅದಾನಿ ಎನರ್ಜಿ ಸಲ್ಯೂಷನ್ಸ್ ಶೇ.19.80ರಷ್ಟು, ಅದಾನಿ ಪವರ್ ಶೇ.19.76ರಷ್ಟು, ಅದಾನಿ ಪವರ್ ಶೇ.19.76ರಷ್ಟು, ಅಂಬುಜಾ ಸಿಮೆಂಟ್ಸ್ ಶೇ.19.20ರಷ್ಟು, ಅದಾನಿ ಎಂಟರ್‌ಪ್ರೈಸಸ್ ಶೇ.19.13ರಷ್ಟು ಕುಸಿದಿದೆ.
ಅದಾನಿ ಟೋಟಲ್ ಗ್ಯಾಸ್ ಶೇ.18.55, ಅದಾನಿ ಗ್ರೀನ್ ಎನರ್ಜಿ ಶೇ.18.31, ಎನ್‌ಡಿಟಿವಿ ಶೇ.15.65, ಎಸಿಸಿ ಶೇ.14.49 ಮತ್ತು ಅದಾನಿ ವಿಲ್ಮಾರ್ ಶೇ.9.81ರಷ್ಟು ಕುಸಿದಿದೆ.
ಇದನ್ನು ಓದಿದ್ದೀರಾ? ರಾಹುಲ್ ಗಾಂಧಿ ದೇಶ ಮುನ್ನಡೆಸಬೇಕು ಎಂಬುವುದು ರಾಷ್ಟ್ರದ ಆಶಯ: ಸಂಜಯ್ ರಾವತ್
ಈ ಹಿಂದಿನ ಸೆಷನ್‌ನಲ್ಲಿ ಭಾರೀ ಲಾಭವನ್ನು ದಾಖಲಿಸಿದ್ದ ಬಿಎಸ್‌ಇ ಸೆನ್ಸೆಕ್ಸ್ ಮಂಗಳವಾರ ಭಾರೀ ನಷ್ಟ ಅನುಭವಿಸಿದೆ. ಸೆನ್ಸೆಕ್ಸ್ 4,131.44 ಅಂಕ ಅಥವಾ ಶೇಕಡ 5.40ರಷ್ಟು ಕುಸಿದು 72,337.34ಕ್ಕೆ ತಲುಪಿದರೆ, ನಿಫ್ಟಿ 1,263.3 ಅಂಕ ಅಥವಾ ಶೇಕಡ 5.43ರಷ್ಟು ಇಳಿದು 22,000.60ರಲ್ಲಿ ವಹಿವಾಟು ನಡೆಸುತ್ತಿದೆ.
Adani Group stocks butchered pic.twitter.com/kVy3HBJl1O
— Vibhor Varshney (@nakulvibhor) June 4, 2024
ಸೋಮವಾರ ಅದಾನಿ ಗ್ರೂಪ್‌ನ ಎಲ್ಲಾ ಷೇರುಗಳು ಸೋಮವಾರ ಭಾರೀ ಏರಿಕೆ ಕಂಡಿದ್ದವು. ಅದಾನಿ ಪವರ್ ಸುಮಾರು ಶೇಕಡ 16ರಷ್ಟು ಜಿಗಿದು ಅದಾನಿ ಗ್ರೂಪ್‌ನ ಹತ್ತು ಸಂಸ್ಥೆಗಳ ಒಟ್ಟು ಮಾರುಕಟ್ಟೆ ಮೌಲ್ಯ 19.42 ಲಕ್ಷ ಕೋಟಿ ರೂಪಾಯಿಗೆ ತಲುಪಿತ್ತು.
ಇದನ್ನು ಓದಿದ್ದೀರಾ? ಚುನಾವನಾ ಫಲಿತಾಂಶ | ಮತ ಎಣಿಕೆಯ ನಡುವೆಯೇ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ
ಷೇರು ಮಾರುಕಟ್ಟೆಯಲ್ಲಿ ಅದಾನಿ ಸಂಸ್ಥೆ ವಂಚನೆ ಮಾಡಿದೆ ಎಂದು ಹಿಂಡನ್‌ಬರ್ಗ್ ವರದಿ ಮಾಡುವುದಕ್ಕೂ ಮುನ್ನ ಇದ್ದ ಮಾರುಕಟ್ಟೆ ಮೌಲ್ಯಕ್ಕೆ ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್, ಅದಾನಿ ಪವರ್ ಮತ್ತು ಅದಾನಿ ಗ್ರೀನ್ ಸೇರಿದಂತೆ ಹಲವಾರು ಷೇರುಗಳು ತಲುಪಿದ್ದವು.
ಬಿಜೆಪಿ ನೇತೃತ್ವದ ಎನ್‌ಡಿಎ 296 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಇಂಡಿಯಾ ಒಕ್ಕೂಟ ಎಕ್ಸಿಟ್ ಪೋಲ್ ಅನ್ನು ಹುಸಿಗೊಳಿಸಿ 227 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 542 ಸ್ಥಾನಗಳಲ್ಲಿ 236ರಲ್ಲಿ ಮುಂದಿದ್ದರೆ, ಕಾಂಗ್ರೆಸ್ 97ರಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಹಲವಾರು ಕ್ಷೇತ್ರಗಳನ್ನು ಕಳೆದುಕೊಂಡರೆ ಕಾಂಗ್ರೆಸ್‌ಗೆ ಖಾತೆಗೆ 52 ಕ್ಷೇತ್ರಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ.