ಎಕ್ಸಿಟ್ ಪೋಲ್‌ಗಳ (ಚುನಾವಣೋತ್ತರ ಸಮೀಕ್ಷೆ) ಕುರಿತು ಅನುಮಾನ ವ್ಯಕ್ತಪಡಿಸಿದ್ದ ಈದಿನ.ಕಾಮ್, ಎಲ್ಲ ಸಮೀಕ್ಷೆಗಳ ಸತ್ಯಾಸತ್ಯತೆ ಬಗ್ಗೆ ಸವಾಲೆಸೆದಿತ್ತು. ಎಲ್ಲರಲ್ಲೂ ಕುತೂಹಲ ಕೆರಳಿಸಿದ್ದ ಗೋದಿ ಮೀಡಿಯಾಗಳ ಚುನಾವಣೋತ್ತರ ಎಕ್ಸಿಟ್ ಪೋಲ್ ಅಂಕಿ ಅಂಶಗಳು ಈಗ ಹುಸಿಯಾಗಿವೆ.
ನ್ಯೂಸ್ 18, ಆಕ್ಸಿಸ್ ಮೈ ಇಂಡಿಯಾ, ಸಿ ವೋಟರ್, ಟುಡೇಸ್ ಚಾಣಕ್ಯ, ಪಿ ಮಾರ್ಕ್, ಜನ್ ಕಿ ಬಾತ್, ಡಿ ಡೈನಾಮಿಕ್, ಸಿಎನ್‌ಎಕ್ಸ್ ಸೇರಿದಂತೆ ಹಲವು ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು ವಿವರಗಳು ‘ಎನ್‌ಡಿಎಗೆ ಬಹುಮತ, I.N.D.I.A.ಗೆ ಆಘಾತ!’ ಎಂದು ವರದಿ ಮಾಡಿದ್ದು, ಎನ್‌ಡಿಎ ಮೈತ್ರಿಕೂಟಕ್ಕೆ 355ರಿಂದ 370 ಸ್ಥಾನ ಬರಲಿದೆ. I.N.D.I.A.ಗೆ 125ರಿಂದ 140 ಸ್ಥಾನಗಳಷ್ಟೇ ದೊರೆಯಲಿವೆ. ಇತರ ಪಕ್ಷಗಳು 42ರಿಂದ 52 ಸ್ಥಾನ ಪಡೆಯಲಿವೆ ಎಂದಿದ್ದವು. ಆದರೆ, ಲೆಕ್ಕಾಚಾರ ಸಂಪೂರ್ಣ ತಲೆಕೆಗಳಗಾಗಿದೆ.
ದೇಶಾದ್ಯಂತ ಮತ ಎಣಿಕೆ ಕಾರ್ಯ ಮುಗಿಯುವ ಮುನ್ನವೇ ಎನ್‌ಡಿಎ 290 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಇಂಡಿಯಾ ಮೈತ್ರಿ ಕೂಟ 234 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎಲ್ಲರಲ್ಲೂ ಕುತೂಹಲ ಕೆರಳಿಸಿದ್ದ ಗೋದಿ ಮೀಡಿಯಾಗಳ ಚುನಾವಣೋತ್ತರ ಎಕ್ಸಿಟ್ ಪೋಲ್ ಅಂಕಿ ಅಂಶಗಳು ಈಗ ಹುಸಿಯಾಗಿವೆ.
ಚುನಾವಣೆಯ ಮೊದಲ ಹಂತ ಮುಗಿದ ಕೂಡಲೇ ಬಿಜೆಪಿ ಸಹಜವಾಗಿಯೇ ಕೋಮು ಧ್ರುವೀಕರಣಕ್ಕೆ ಮುಂದಾಗಿತ್ತು. ನಾಲ್ಕನೇ ಹಂತದ ಚುನಾವಣೆ ನಡೆಯುವಷ್ಟರಲ್ಲಿ ಚುನಾವಣಾ ತಜ್ಞರು ಚುನಾವಣೆಯಲ್ಲಿ ಯಾರಿಗೆ ಗದ್ದುಗೆ ಸಿಗಲಿದೆ ಎಂಬ ಅಭಿಪ್ರಾಯವನ್ನು ಹೇಳಲು ಆರಂಭಿಸಿದರು.
ಜನರ ಆಕ್ರೋಶ, ಬೆಲೆ ಏರಿಕೆ, ನಿರುದ್ಯೋಗ ಎಲ್ಲೆಡೆ ಕಂಡುಬರುತ್ತಿತ್ತು. ಅಂದರೆ ಈ ಬಾರಿಯ ಚುನಾವಣೆ ಈ ಹಿಂದೆ ನಡೆದ ಎರಡು ಲೋಕಸಭೆ ಚುನಾವಣೆಯಂತಲ್ಲ. ಮೋದಿ ಅಲೆ, ಹೈಪರ್ ನ್ಯಾಷನಲಿಸಂ ಕೂಡಾ ಇರಲಿಲ್ಲ. ಮೋದಿ ಮ್ಯಾಜಿಕ್ ಇಲ್ಲ ಮತ್ತು ಬಿಜೆಪಿ ತನ್ನ ಬಲವನ್ನು ಕಳೆದುಕೊಳ್ಳುತ್ತಿದೆ ಎಂಬ ಸ್ಪಷ್ಟವಾದ ಸೂಚನೆ ಇದ್ದರೂ ಕೂಡಾ ಎಲ್ಲ ಎಕ್ಸಿಟ್ ಪೋಲ್‌ಗಳು ಒಂದೇ ರೀತಿಯ ಫಲಿತಾಂಶವನ್ನು ನೀಡಿದ್ದವು.
ಹಲವು ಮಾಧ್ಯಮಗಳು ಎನ್‌ಡಿಎಗೆ 350ರಿಂದ 400 ಸೀಟುಗಳು ಲಭಿಸುತ್ತದೆ ಎಂದು ಅಂದಾಜಿಸಿದ್ದು, ಕರ್ನಾಟಕದಲ್ಲಿ 3ರಿಂದ 8 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿದ್ದವು. ಆದರೆ, ಈದಿನ.ಕಾಮ್ ಸಂಗ್ರಹಿಸಿದ್ದ ಅಂಶಅಂಶಗಳ ಪ್ರಕಾರ, ಬಿಜೆಪಿ ನೇತೃತ್ವದ ಎನ್‌ಡಿಎ 300 ಸ್ಥಾನಗಳನ್ನು ದಾಟುವುದಿಲ್ಲ ಎಂಬುದು ಸ್ಪಷ್ಟವಾಗಿತ್ತು.
ಇದೀಗ, ಫಲಿತಾಂಶ ಕೂಡ ಹೊರಬರುತ್ತಿದ್ದು, ಎನ್‌ಡಿಎ 290ರ ಆಸುಪಾಸಿನಲ್ಲಿ ಜಗ್ಗಾಡುತ್ತಿದೆ. ಇಂಡಿಯಾ ಮೈತ್ರಿಕೂಟ 230 ಸ್ಥಾನಗಳನ್ನು ದಾಟಲು ಹರಸಾಹಸ ಪಡುತ್ತಿದೆ. ಅಂತಿಮವಾಗಿ ಯಾರಿಗೆ ಎಷ್ಟು ಸ್ಥಾನಗಳು ಲಭಿಸಲಿವೆ ಎಂಬುದು ಮಂಗಳವಾರ ಸಂಜೆಯ ವೇಳೆಗೆ ಖಚಿತವಾಗಿ ತಿಳಿಯಲಿದೆ.
ಈ ಸುದ್ದಿ ಓದಿದ್ದೀರಾ? ರಾಮಮಂದಿರ ಇರುವ ಫೈಜಾಬಾದ್‌ನಲ್ಲಿ ಬಿಜೆಪಿಗೆ ಹಿನ್ನಡೆ: ಅಯೋಧ್ಯೆಯಲ್ಲಿ ಕೇಸರಿ ಪಕ್ಷಕ್ಕೆ ಆಘಾತ
ಡಿ ಕೆ ಸುರೇಶ ರವರು ಖಂಡಿತ ಹೀನಾಯ ಸೋಲಲಿಲ್ಲ anti-incumbany ಆಗಿದೆ. ಅವರು ಕ್ಷೇತ್ರದ ಅಭಿವೃದ್ಧಿಯನ್ನೂ ಮಾಡಿದ್ದಾರೆ
ಪ್ರಜಾಪ್ರಭುತ್ವ ದಲ್ಲಿ ಒಬ್ಬ ರೇ ಗಲುವು ಸಾಧಿಸುವುದು ಯಾವಾಗ ಲೂ ಸಾಧ್ಯವಿಲ್ಲ, ಮೋದಿಯ lead ಕೂಡ ಕಡಿಮೆಯಾಗಿದೆ
ಕೈಯಲ್ಲಿ ಅಧಿಕಾರ ಇರುವಾಗ ಏನು ಮಾಡಬೇಕೆಂಬ ಆಸೆ ಯಿದೆಯೋ ( ಜನ ಕಲ್ಯಾಣ) ಅದನ್ನೆಲ್ಲ ಮಾಡಿಬಿಡಬೇಕು, ಹತ್ತು ವರ್ಷಗಳಿಂದ ಬರೀ ಟ್ರೈಲರನ್ನೇ ತೋರಿಸುವುದಾದರೆ ಆಯಪ್ಪನಿಗೆ ಪೂರ್ಣ ಫಿಲಂ ತೋರಿಸಬೇಕಾದರೆ ನೂರು ವರ್ಷ ಬೇಕಾಗಬಹುದು ಅಂತಹ ಮಾತೇ ಹಾಸ್ಯಾಸ್ಪದ
ಖಂಡಿತ ಇವನನ್ನು ಇಳಿಸಿ ಬೇರೆಯವರನ್ನು ತರುವುದು ಉಚಿತ