ಚುನಾವಣೋತ್ತರ ಎಕ್ಸಿಟ್‌ ಪೋಲ್‌ | ಹುಸಿಯಾದ ಗೋದಿ ಮೀಡಿಯಾಗಳ ಅಂಕಿಅಂಶ

Date:

ಎಕ್ಸಿಟ್ ಪೋಲ್‌ಗಳ (ಚುನಾವಣೋತ್ತರ ಸಮೀಕ್ಷೆ) ಕುರಿತು ಅನುಮಾನ ವ್ಯಕ್ತಪಡಿಸಿದ್ದ ಈದಿನ.ಕಾಮ್, ಎಲ್ಲ ಸಮೀಕ್ಷೆಗಳ ಸತ್ಯಾಸತ್ಯತೆ ಬಗ್ಗೆ ಸವಾಲೆಸೆದಿತ್ತು. ಎಲ್ಲರಲ್ಲೂ ಕುತೂಹಲ ಕೆರಳಿಸಿದ್ದ ಗೋದಿ ಮೀಡಿಯಾಗಳ ಚುನಾವಣೋತ್ತರ ಎಕ್ಸಿಟ್‌ ಪೋಲ್‌ ಅಂಕಿ ಅಂಶಗಳು ಈಗ ಹುಸಿಯಾಗಿವೆ. 

- Advertisement -

ನ್ಯೂಸ್ 18, ಆಕ್ಸಿಸ್ ಮೈ ಇಂಡಿಯಾ, ಸಿ ವೋಟರ್, ಟುಡೇಸ್ ಚಾಣಕ್ಯ, ಪಿ ಮಾರ್ಕ್, ಜನ್ ಕಿ ಬಾತ್, ಡಿ ಡೈನಾಮಿಕ್, ಸಿಎನ್‌ಎಕ್ಸ್ ಸೇರಿದಂತೆ ಹಲವು ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು ವಿವರಗಳು ‘ಎನ್‌ಡಿಎಗೆ ಬಹುಮತ, I.N.D.I.A.ಗೆ ಆಘಾತ!’ ಎಂದು ವರದಿ ಮಾಡಿದ್ದು, ಎನ್‌ಡಿಎ ಮೈತ್ರಿಕೂಟಕ್ಕೆ 355ರಿಂದ 370 ಸ್ಥಾನ ಬರಲಿದೆ. I.N.D.I.A.ಗೆ 125ರಿಂದ 140 ಸ್ಥಾನಗಳಷ್ಟೇ ದೊರೆಯಲಿವೆ. ಇತರ ಪಕ್ಷಗಳು 42ರಿಂದ 52 ಸ್ಥಾನ ಪಡೆಯಲಿವೆ ಎಂದಿದ್ದವು. ಆದರೆ, ಲೆಕ್ಕಾಚಾರ ಸಂಪೂರ್ಣ ತಲೆಕೆಗಳಗಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ದೇಶಾದ್ಯಂತ ಮತ ಎಣಿಕೆ ಕಾರ್ಯ ಮುಗಿಯುವ ಮುನ್ನವೇ ಎನ್‌ಡಿಎ 290 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಇಂಡಿಯಾ ಮೈತ್ರಿ ಕೂಟ 234 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎಲ್ಲರಲ್ಲೂ ಕುತೂಹಲ ಕೆರಳಿಸಿದ್ದ ಗೋದಿ ಮೀಡಿಯಾಗಳ ಚುನಾವಣೋತ್ತರ ಎಕ್ಸಿಟ್‌ ಪೋಲ್‌ ಅಂಕಿ ಅಂಶಗಳು ಈಗ ಹುಸಿಯಾಗಿವೆ.

ಚುನಾವಣೆಯ ಮೊದಲ ಹಂತ ಮುಗಿದ ಕೂಡಲೇ ಬಿಜೆಪಿ ಸಹಜವಾಗಿಯೇ ಕೋಮು ಧ್ರುವೀಕರಣಕ್ಕೆ ಮುಂದಾಗಿತ್ತು. ನಾಲ್ಕನೇ ಹಂತದ ಚುನಾವಣೆ ನಡೆಯುವಷ್ಟರಲ್ಲಿ ಚುನಾವಣಾ ತಜ್ಞರು ಚುನಾವಣೆಯಲ್ಲಿ ಯಾರಿಗೆ ಗದ್ದುಗೆ ಸಿಗಲಿದೆ ಎಂಬ ಅಭಿಪ್ರಾಯವನ್ನು ಹೇಳಲು ಆರಂಭಿಸಿದರು.

ಜನರ ಆಕ್ರೋಶ, ಬೆಲೆ ಏರಿಕೆ, ನಿರುದ್ಯೋಗ ಎಲ್ಲೆಡೆ ಕಂಡುಬರುತ್ತಿತ್ತು. ಅಂದರೆ ಈ ಬಾರಿಯ ಚುನಾವಣೆ ಈ ಹಿಂದೆ ನಡೆದ ಎರಡು ಲೋಕಸಭೆ ಚುನಾವಣೆಯಂತಲ್ಲ. ಮೋದಿ ಅಲೆ, ಹೈಪರ್ ನ್ಯಾಷನಲಿಸಂ ಕೂಡಾ ಇರಲಿಲ್ಲ. ಮೋದಿ ಮ್ಯಾಜಿಕ್ ಇಲ್ಲ ಮತ್ತು ಬಿಜೆಪಿ ತನ್ನ ಬಲವನ್ನು ಕಳೆದುಕೊಳ್ಳುತ್ತಿದೆ ಎಂಬ ಸ್ಪಷ್ಟವಾದ ಸೂಚನೆ ಇದ್ದರೂ ಕೂಡಾ ಎಲ್ಲ ಎಕ್ಸಿಟ್‌ ಪೋಲ್‌ಗಳು ಒಂದೇ ರೀತಿಯ ಫಲಿತಾಂಶವನ್ನು ನೀಡಿದ್ದವು.

ಹಲವು ಮಾಧ್ಯಮಗಳು ಎನ್‌ಡಿಎಗೆ 350ರಿಂದ 400 ಸೀಟುಗಳು ಲಭಿಸುತ್ತದೆ ಎಂದು ಅಂದಾಜಿಸಿದ್ದು, ಕರ್ನಾಟಕದಲ್ಲಿ 3ರಿಂದ 8 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿದ್ದವು. ಆದರೆ, ಈದಿನ.ಕಾಮ್‌ ಸಂಗ್ರಹಿಸಿದ್ದ ಅಂಶಅಂಶಗಳ ಪ್ರಕಾರ, ಬಿಜೆಪಿ ನೇತೃತ್ವದ ಎನ್‌ಡಿಎ 300 ಸ್ಥಾನಗಳನ್ನು ದಾಟುವುದಿಲ್ಲ ಎಂಬುದು ಸ್ಪಷ್ಟವಾಗಿತ್ತು.

ಇದೀಗ, ಫಲಿತಾಂಶ ಕೂಡ ಹೊರಬರುತ್ತಿದ್ದು, ಎನ್‌ಡಿಎ 290ರ ಆಸುಪಾಸಿನಲ್ಲಿ ಜಗ್ಗಾಡುತ್ತಿದೆ. ಇಂಡಿಯಾ ಮೈತ್ರಿಕೂಟ 230 ಸ್ಥಾನಗಳನ್ನು ದಾಟಲು ಹರಸಾಹಸ ಪಡುತ್ತಿದೆ. ಅಂತಿಮವಾಗಿ ಯಾರಿಗೆ ಎಷ್ಟು ಸ್ಥಾನಗಳು ಲಭಿಸಲಿವೆ ಎಂಬುದು ಮಂಗಳವಾರ ಸಂಜೆಯ ವೇಳೆಗೆ ಖಚಿತವಾಗಿ ತಿಳಿಯಲಿದೆ.

ಈ ಸುದ್ದಿ ಓದಿದ್ದೀರಾ? ರಾಮಮಂದಿರ ಇರುವ ಫೈಜಾಬಾದ್‌ನಲ್ಲಿ ಬಿಜೆಪಿಗೆ ಹಿನ್ನಡೆ: ಅಯೋಧ್ಯೆಯಲ್ಲಿ ಕೇಸರಿ ಪಕ್ಷಕ್ಕೆ ಆಘಾತ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಳೆಯ ಪ್ರಕರಣ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ವಿಜಿಲೆನ್ಸ್ ತನಿಖೆಗೆ ಕೇರಳ ಸರ್ಕಾರ ಆದೇಶ

20೦6ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹಾಲಿ ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್...

ಗಣೇಶ ವಿಸರ್ಜನೆ ಮುಗಿಯಿತು, ಇನ್ನು ಸಿಇಸಿ ಗ್ಯಾನೇಶ್ ಕುಮಾರ್ ವಿಸರ್ಜನೆ ಬಾಕಿ: ನಟ ಪ್ರಕಾಶ್ ರಾಜ್

ದೇಶಾದ್ಯಂತ ಗಣೇಶ ವಿಸರ್ಜನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈಗ ಮುಖ್ಯ ಚುನಾವಣಾ ಆಯುಕ್ತ...

ಜಿಎಸ್‌ಟಿ ದಸ್ತಗಿರಿ ಅಧಿಕಾರ ಹಿಂಪಡೆಯುವ ಪ್ರಸ್ತಾಪ: ಆಡಂಬರದ ಜಾರಿಯೂ ಇಂದಿನ ಭ್ರಮನಿರಸನವೂ….

2017ರ ಜೂನ್ 30ರ ಮಧ್ಯರಾತ್ರಿ ಭಾರತದ ಸಂಸತ್ತಿನಲ್ಲಿ ವಿಶೇಷ ಅಧಿವೇಶನ ಕರೆಯಾಗಿತ್ತು....

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ ಕಡೇ ದಿನಗಳು’

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ...