2024ರ ಲೋಕಸಭಾ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟ ತೀವ್ರ ಪೈಪೋಟಿಯಲ್ಲಿವೆ. 9 ರಾಜ್ಯಗಳಲ್ಲಿ ಎನ್‌ಡಿಎ ಒಂದೂ ಸ್ಥಾನವನ್ನೂ ಗೆಲ್ಲದೆ ಶೂನ್ಯ ಸಾಧನೆ ಮಾಡಿದ್ದರೆ, 10 ರಾಜ್ಯಗಳಲ್ಲಿ ಬಿಜೆಪಿ ಸೊನ್ನೆ ಸುತ್ತಿದೆ. ರಾಜ್ಯಗಳ ರಾಜಕಾರಣದಲ್ಲಿ ನೆಲೆ ಕಳೆದುಕೊಂಡಿದೆ.
ಪಂಜಾಬ್, ಮಣಿಪುರ, ಮೇಘಾಲಯ, ಚಂಡೀಘಡ, ಲಡಾಖ್, ಲಕ್ಷದ್ವೀಪ, ಪುದುಚೇರಿ, ಮಿಜೋರಾಂ, ನಾಗಾಲ್ಯಾಂಡ್ ಹಾಗೂ ತಮಿಳುನಾಡಿನಲ್ಲಿ ಬಿಜೆಪಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ತಮಿಳುನಾಡಿನಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಪಕ್ಷ ಪಿಎಂಕೆ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಒಂದು ವೇಳೆ, ಅದೂ ಸೋತರೆ, ಬಿಜೆಪಿ ಮತ್ತು ಎನ್‌ಡಿಎ 10 ರಾಜ್ಯಗಳಲ್ಲಿ ಶೂನ್ಯ ಸಾಧನೆ ಮಾಡಲಿವೆ.
ಈ ಸುದ್ದಿ ಓದಿದ್ದೀರಾ? ಡಿ.ಕೆ ಸುರೇಶ್ ಹೀನಾಯ ಸೋಲು; ರಾಜಕೀಯ ಭವಿಷ್ಯಕ್ಕಾಗಿ ‘ಚನ್ನಪಟ್ಟಣ’ಕ್ಕೆ ಕಾಲಿಡುವ ಸಾಧ್ಯತೆ?
ಪಂಜಾನ್‌ನ 13 ಸ್ಥಾನಗಳ ಪೈಕಿ 7 ಕಾಂಗ್ರೆಸ್ ಪಾಲಾಗಿದೆ. ಉಳಿದ ಆರರಲ್ಲಿ ಎಎಪಿ 3 ಮತ್ತು ಎಸ್‌ಎಡಿ 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ತಮಿಳುನಾಡಿನ 39 ಸ್ಥಾನಗಳ ಪೈಕಿ, 38 ಸ್ಥಾನಗಳಲ್ಲಿ ಇಂಡಿಯಾ ಮೈತ್ರಿಕೂಟ ಮುನ್ನಡೆಯಲ್ಲಿದೆ. ಉಳಿದ 8 ರಾಜ್ಯಗಳು ಕೇವಲ ಒಂದು ಅಥವಾ ಎರಡು ಲೋಕಸಭಾ ಕ್ಷೇತ್ರಗಳನ್ನು ಹೊಂದಿದ್ದು, ಬಹುತೇಕ ಎಲ್ಲ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ.