ಉತ್ತರ ಪ್ರದೇಶದ ಲಕ್ನೋದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ಕಾರ್ಯಕರ್ತರ ನಡುವೆ ಮಂಗಳವಾರ ಘರ್ಷಣೆ ಉಂಟಾಗಿದ್ದು ಹಲವರು ತೀವ್ರ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವ ಲಕ್ನೋದ ರಮಾಬಾಯಿ ಅಂಬೇಡ್ಕರ್ ಬೂತ್‌ನ ಹೊರಗೆ ಮಾರಾಮಾರಿ ನಡೆದಿದೆ.
Lucknow: BJP workers and Samajwadi Party workers clashed with each other outside the Lucknow Ramabai Ambedkar counting venue. Police reached the spot as soon as they received the information pic.twitter.com/CtpCRhdUpq
— IANS (@ians_india) June 4, 2024
ಘರ್ಷಣೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸುಡು ಬಿಸಿಲಿನಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮತ ಎಣಿಕೆ ಬೂತ್‌ನ ಹೊರಗೆ ಘರ್ಷಣೆ ನಡೆದಿರುವುದು ಕಂಡುಬಂದಿದೆ.
ಇದನ್ನು ಓದಿದ್ದೀರಾ? 10 ರಾಜ್ಯಗಳಲ್ಲಿ ಬಿಜೆಪಿ ‘ಶೂನ್ಯ’ ಸಾಧನೆ
ಆರಂಭದಲ್ಲಿ ಉಭಯ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು ಬಳಿಕ ಅದು ಹಿಂಸಾಚಾರಕ್ಕೆ ತಿರುಗಿದೆ. ಘರ್ಷಣೆಯಲ್ಲಿ ಸಮಾಜವಾದಿ ಪಕ್ಷದ ಒಬ್ಬ ಕಾರ್ಯಕರ್ತನ ತಲೆಗೆ ತೀವ್ರ ಏಟಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಘರ್ಷಣೆಯನ್ನು ತಡೆದಿದ್ದಾರೆ. ನಂತರ ಇಂತಹ ಅಹಿತಕರ ಘಟನೆಗಳು ನಡೆಯದಂತೆ ಮತದಾನ ಕೇಂದ್ರದ ಹೊರಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಭಾರೀ ಮುಖಭಂಗವಾಗಿದ್ದು, ಇಂಡಿಯಾ ಒಕ್ಕೂಟ 44 ಲೋಕಸಭಾ ಸ್ಥಾನಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ. ಸಮಾಜವಾದಿ ಪಕ್ಷ 37, ಕಾಂಗ್ರೆಸ್ 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.