ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿಯ ವಿವಾಹದ ಪ್ರೀ ವೆಡ್ಡಿಂಗ್ ಪಾರ್ಟಿಗಳು ನಡೆಯುತ್ತಲೇ ಇದೆ. ಬೇರೆ ಬೇರೆ ರೀತಿಯಲ್ಲಿ ಪಾರ್ಟಿಗಳನ್ನು ಆಯೋಜಿಸಲಾಗುತ್ತಿದ್ದು ಇತ್ತೀಚೆಗೆ ಕ್ರೂಸ್ ಪಾರ್ಟಿಯನ್ನು ಕೂಡಾ ಅದ್ದೂರಿಯಾಗಿ ನಡೆಸಿದ್ದಾರೆ. ಆದರೆ ಈ ಪಾರ್ಟಿಯ ವಿರುದ್ಧ ಇಟಲಿಯ ಜಿನೋವಾದ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದ ಶ್ರೀಮಂತ ಅಂಬಾನಿ ಕುಟುಂಬದ ಪಾರ್ಟಿಗಾಗಿ ಇಟಲಿಯ ಪೋರ್ಟೊಫಿನೊ ಮತ್ತು ಜಿನೋವಾಯ ನಗರವನ್ನೇ ಮುಚ್ಚಲಾಗಿತ್ತು. ಇದರಿಂದಾಗಿ ಸ್ಥಳೀಯ ವ್ಯಾಪಾರಿಗಳಿಗೆ ಭಾರೀ ನಷ್ಟವಾಗಿದೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿದೆ. ಅಷ್ಟು ಮಾತ್ರವಲ್ಲದೆ ಅತೀ ಜೋರಾದ ಹಾಡು, ಗದ್ದಲ, ಕಿರುಚಾಟ ಇದ್ದ ಕಾರಣ ಜಿನೋವಾದ ಅರ್ಧದಷ್ಟು ನಿವಾಸಿಗಳಿಗೆ ನಿದ್ದೆ ಮಾಡಲು ಕೂಡ ಸಾಧ್ಯವಾಗಿಲ್ಲ.
The cruise costs Rs 1,260 crore. What kind of obscenity is this in one of the developing world’s poorest countries? https://t.co/fWSJ7hUGdH
— Samar Halarnkar (@samar11) June 5, 2024
ಮುಕೇಶ್ ಅಂಬಾನಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥವನ್ನು ಪಲೆರ್ಮೊದಿಂದ ದಕ್ಷಿಣ ಫ್ರಾನ್ಸ್ವರೆಗೆ ನಾಲ್ಕು ದಿನಗಳ ಐಷಾರಾಮಿ ಕ್ರೂಸ್ ಪಾರ್ಟಿ ಮೂಲಕ ನಡೆಸಲಾಗಿದೆ. ಈ ಕ್ರೂಸ್ ಅನ್ನು ರೋಮ್, ಪೋರ್ಟೋಫಿನೋ, ಜಿನೋವಾ ಮತ್ತು ಕೇನ್ಸ್ಗಳಲ್ಲಿ ಪಾರ್ಟಿಗಾಗಿ ನಿಲ್ಲಿಸಲಾಗಿದೆ.
ಇದನ್ನು ಓದಿದ್ದೀರಾ? ಅದಾನಿ, ಅಂಬಾನಿಗೆ ಸಹಾಯ ಮಾಡಲು ಮೋದಿಯವರನ್ನು ಆ ಪರಮಾತ್ಮನೇ ಕಳುಹಿಸಿದ್ದು: ರಾಹುಲ್ ಲೇವಡಿ
ಮದುವೆಯು ಜುಲೈ 12ರಂದು ನಡೆಯಲಿದೆ. ಆದರೆ ಮಾರ್ಚ್ನಲ್ಲಿಯೇ ಔತಣಕೂಟಗಳು ನಡೆಯುತ್ತಿದೆ. ಗುಜರಾತ್ನ ಜಾಮ್ನಗರದಲ್ಲಿ ಮೊದಲು ಪಾರ್ಟಿ ನಡೆಸಲಾಗಿದ್ದು 1,200ಕ್ಕೂ ಹೆಚ್ಚು ಅತಿಥಿಗಳಿಗಾಗಿ ಮೂರು ದಿನದಲ್ಲಿ ನಡೆಸಲಾಗಿದೆ. ಅಮೇರಿಕನ್ ಗಾಯಲಿ ರಿಹಾನ್ನಾ ಪ್ರದರ್ಶನವೂ ಇದ್ದ ಈ ಪಾರ್ಟಿಗಾಗಿ 150 ಮಿಲಿಯನ್ ಡಾಲರ್ ಖರ್ಚು ಮಾಡಿದ್ದಾರೆ.
ಮೇ 29ರಂದು ಆರಂಭವಾದ ಅಂಬಾನಿ ಕುಟುಂಬದ ಕ್ರೂಸ್ ಪಾರ್ಟಿ ಜೂನ್ 1ರಂದು ಪೋರ್ಟೊಫಿನೊದಲ್ಲಿ ಕೊನೆಗೊಂಡಿದೆ. ಫೋನ್ಗೆ ನಿರ್ಬಂಧವಿದ್ದರೂ ಕೂಡಾ ವಿಡಿಯೋಗಳು ಹರಿದಾಡುತ್ತಿದೆ. ಅದರಲ್ಲೂ ಮುಖ್ಯವಾಗಿ ಅಂಬಾನಿ ಕುಟುಂಬದ ಈ ಕ್ರೂಸ್ ತಂಗಿದ್ದಲೆಲ್ಲ ಸ್ಥಳೀಯರಿಗೆ ತೀವ್ರ ತೊಂದರೆ ಉಂಟಾಗಿದೆ ಎಂದು ವರದಿಯಾಗಿದೆ.
ಇತರೆ ಪ್ರವಾಸಿಗರು, ಸ್ಥಳೀಯ ವ್ಯಾಪಾರಿಗಳಿಗೆ ನಿರ್ಬಂಧ, ನಷ್ಟ!
ಅಂಬಾನಿ ಕುಟುಂಬವು ಪ್ರವಾಸ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದು ಈ ಸ್ಥಳಗಳು ಆಸ್ಟ್ರೇಲಿಯನ್ ಗಾಯಕ ಸಿಯಾ, ರಿಯಾಲಿಟಿ ಟಿವಿ ತಾರೆ ಕೌರ್ಟ್ನಿ ಕಾರ್ಡಶಿಯಾನ್ ಸೇರಿದಂತೆ ಹಲವಾರು ವಿವಾಹವಾದ ಸುಂದರ, ರಮಣೀಯ ಸ್ಥಳಗಳಾಗಿದೆ. ಆದರೆ ಹಿಂದೆಂದೂ ಕೂಡಾ ವಿವಾಹ ಕಾರ್ಯಕ್ರಮಕ್ಕಾಗಿ ಇಲ್ಲಿ ಸ್ಥಳೀಯ ವ್ಯಾಪಾರಿಗಳನ್ನು, ಪ್ರವಾಸಿಗರನ್ನು ನಿರ್ಬಂಧಿಸಿರಲಿಲ್ಲ. ಆದರೆ ಅಂಬಾನಿ ಕುಟುಂಬದ ಪಾರ್ಟಿಗಾಗಿ ಸಂಪೂರ್ಣವಾಗಿ ನಿರ್ಬಂಧ ವಿಧಿಸಲಾಗಿತ್ತು.
Offensive bad mannered wedding party.
By people from a country that is witnessing economic inequality that is worse than the colonial era. pic.twitter.com/1UPzTKJi3p
— Neha Dixit (@nehadixit123) June 5, 2024
ಪೋರ್ಟೊಫಿನೊದಲ್ಲಿನ ಪ್ರದೇಶಗಳನ್ನು ಪ್ರವೇಶಿಸಲು ಸಾಧ್ಯವಾಗದ ಬಗ್ಗೆ ನಿವಾಸಿಗಳು ಮತ್ತು ಪ್ರವಾಸಿಗರು ಸಾಮಾಜಿಕ ಮಾಧ್ಯಮದಲ್ಲಿ ದೂರಿದ್ದಾರೆ. “ಇತರ ಅನೇಕ ಸೆಲೆಬ್ರಿಟಿಗಳು ಮತ್ತು ಬಿಲಿಯನೇರ್ಗಳು ಪೋರ್ಟೊಫಿನೊದಲ್ಲಿ ವಿವಾಹ, ಇತರೆ ಕಾರ್ಯಕ್ರಮ ಆಚರಿಸಿದ್ದಾರೆ. ಆದರೆ ಯಾರೂ ಕೂಡಾ ಇತರರಿಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿರಲಿಲ್ಲ” ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿದೆ.
View this post on Instagram
“ಅನೇಕ ಬಿಲಿಯನೇರ್ಗಳು ಇಲ್ಲಿ ಪಾರ್ಟಿ ಮಾಡಲು ಬಂದಿದ್ದಾರೆ, ಆದರೆ ಯಾರೂ ನಗರದ ಮುಖ್ಯ ಭಾಗಕ್ಕೆ ಪ್ರವೇಶವನ್ನು ನಿರ್ಬಂಧಿಸಿಲ್ಲ. ಅವರು ಯಾರೆಂದು ಭಾವಿಸುತ್ತಾರೆ? ಅವರು ದಿಡೀರ್ ಆಗಿ ಬಂದು ಪಾರ್ಟಿ ಮಾಡಲು ಸಾಧ್ಯವಿಲ್ಲ, ಜನರು ತಮ್ಮ ದೈನಂದಿನ ಕೆಲಸಗಳನ್ನು ಮಾಡಲು ಕಷ್ಟಪಡುವಂತಾಗಿದೆ” ಎಂದು ಎಕ್ಸ್ ಪೋಸ್ಟ್ನಲ್ಲಿ ಸ್ಥಳೀಯರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಅದಾನಿ-ಅಂಬಾನಿಯನ್ನ ರಾಹುಲ್ ಗಾಂಧಿ ಬೈಯುತ್ತಿಲ್ಲವೇ? ಮೋದಿಯವ್ರ ಮಾತಿನಲ್ಲಿ ಸತ್ಯ ಇದ್ಯಾ?
“ಭಾರತೀಯ ಅಥವಾ ಪಾಕಿಸ್ತಾನಿ ಬಿಲಿಯನೇರ್ ತನ್ನ ಹಾಳಾದ ಮಗನಿಗಾಗಿ ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮದಿಂದಾಗಿ ಈ ವಾರಾಂತ್ಯದಲ್ಲಿ ಪೋರ್ಟೊಫಿನೊದ ಪ್ರಮುಖ ಆಕರ್ಷಣೆಗಳನ್ನು ನೋಡಲು ನನಗೆ ಸಾಧ್ಯವಾಗಲಿಲ್ಲ. ಈ ಹಿಂದೆ ಕೋಟ್ಯಾಧಿಪತಿಗಳು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಆದರೆ ಎಂದಿಗೂ ಪ್ರವಾಸ ಸ್ಥಳಕ್ಕೆ ನಿರ್ಬಂಧವಿರಲಿಲ್ಲ” ಎಂದು ಪ್ರವಾಸಿಯೊಬ್ಬರು ಪೋಸ್ಟ್ ಮಾಡಿದ್ದಾರೆ.
ಇಂತಹ ಸಮಾರಂಭಗಳು ಸ್ಥಳೀಯ ವ್ಯಾಪಾರಿಗಳಿಗೆ ಲಾಭವನ್ನು ತಂದುಕೊಡುತ್ತದೆ. ಆದರೆ ಸ್ಥಳೀಯ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
“ಪೋರ್ಟೊಫಿನೊದಲ್ಲಿ ಸ್ಥಳೀಯ ಪ್ರವಾಸಿ ಮಾರ್ಗದರ್ಶಿಯಾಗಿರುವ ನನಗೆ ನಮ್ಮ ನಗರವನ್ನು ಖಾಸಗಿ ಕಾರ್ಯಕ್ರಮಕ್ಕಾಗಿ ಬಂದ್ ಮಾಡಿರುವುದು ನೋಡಿ ನನಗೆ ನಿರಾಶೆಯಾಗಿದೆ. ನಮ್ಮ ಜೀವನೋಪಾಯವು ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ. ಈ ವಾರಾಂತ್ಯದಲ್ಲಿ ಭಾರಿ ನಷ್ಟವಾಗಿದೆ” ಎಂದು ಸ್ಥಳೀಯ ಮಾರ್ಗದರ್ಶಿ ಹೇಳಿದ್ದಾರೆ.
Anant Ambani and Radhika Merchant’s pre-wedding enraged locals and police with the loud music and bad manners on display at the wedding party.
To know more, head over to https://t.co/TNHWHNSpDk#thecurrent #ambanis #ambaniprewedding #italyhttps://t.co/XN3EZ8CVTE pic.twitter.com/eT1IvTu9po
— The Current (@TheCurrentPK) June 5, 2024
ರಾತ್ರೋರಾತ್ರಿ ಪೊಲೀಸರಿಗೆ ದೂರು!
ಜೂನ್ 2ರ ಭಾನುವಾರದಂದು ಕ್ರೂಸ್ ಹಡಗು ಬಂದರು ನಗರಕ್ಕೆ ಬಂದಿದ್ದು ಜೋರಾಗಿ ಸ್ಪೀಕರ್ಗಳನ್ನು ಹಾಕಲಾಗಿತ್ತು. ಇದರಿಂದಾಗಿ ರಾತ್ರಿ ಪೂರ್ತಿ ನಿದ್ದೆ ಮಾಡಲು ಸಾಧ್ಯವಾಗದ ಸ್ಥಳೀಯರು ಮುಂಜಾನೆ 4.30ಕ್ಕೆ ಕರೆ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಇಟಾಲಿಯನ್ ವೆಬ್ಸೈಟ್ ಇಲ್ ಸೆಕೊಲೊ ವರದಿ ಮಾಡಿದೆ.
“ಪಾರ್ಟಿ ಸಂಘಟಕರ ವರ್ತನೆಯು ಅಸಂಬದ್ಧವಾಗಿತ್ತು. ಅವರು ಜಿನೋವಾದ ಅರ್ಧದಷ್ಟು ಜಾಗದ ಜನರು ರಾತ್ರಿ ಪೂರ್ತಿ ಮಲಗಲು ಸಾಧ್ಯವಾಗದಂತೆ ಧ್ವನಿವರ್ಧಕವನ್ನು ಬಳಸಿದ್ದಾರೆ. ಮುಂಜಾನೆವರೆಗೂ ಪಾರ್ಟಿ ಮಾಡಲಾಗಿದೆ. ಬೆಳಿಗ್ಗೆ 4.30ಕ್ಕೆ ಕರೆ ಮಾಡಿದರೂ ಕೋಸ್ಟ್ ಗಾರ್ಡ್ ಯಾವ ಕ್ರಮವನ್ನು ಕೈಗೊಳ್ಳದೆ ಇರುವುದು ಕೆಟ್ಟ ಸ್ಥಿತಿ” ಎಂದು ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ ಹೇಳಿದ್ದಾರೆ.