ಅದಾನಿ, ಅಂಬಾನಿಗೆ ಸಹಾಯ ಮಾಡಲು ಮೋದಿಯವರನ್ನು ಆ ಪರಮಾತ್ಮನೇ ಕಳುಹಿಸಿದ್ದು: ರಾಹುಲ್ ಲೇವಡಿ

Date:

ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿಯಂತಹ ಕೈಗಾರಿಕೋದ್ಯಮಿಗಳಿಗೆ ಸಹಾಯ ಮಾಡಲು ನರೇಂದ್ರ ಮೋದಿ ಅವರನ್ನು ಪರಮಾತ್ಮನೇ ಕಳುಹಿಸಿದ್ದಾರೆ. ಬಡವರಿಗೆ ಸಹಾಯ ಮಾಡಲು ಕಳುಹಿಸಿಲ್ಲ ಎಂದು ‘ನಾನು ಜೈವಿಕವಾಗಿ ಜನಿಸಿಲ್ಲ, ಪರಮಾತ್ಮನೇ ನನ್ನನ್ನು ಕಳುಹಿಸಿದ್ದು’ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ಯಾಂಗ್ ನೀಡಿದ್ದಾರೆ.

ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಚುನಾವಣಾ ಪ್ರಚಾರವನ್ನು ನಡೆಸಿದ ರಾಹುಲ್ ಗಾಂಧಿ ಅವರು, “ಎಲ್ಲರೂ ಜೈವಿಕವಾಗಿ ಜನಿಸುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಜೈವಿಕವಾಗಿ ಜನಿಸಿಲ್ಲ. ಅಂಬಾನಿ ಮತ್ತು ಅದಾನಿಗೆ ಸಹಾಯ ಮಾಡಲು ಅವರ ಪರಮಾತ್ಮನೇ ಅವರನ್ನು ಕಳುಹಿಸಿದ್ದಾರೆ. ರೈತರು ಮತ್ತು ಕಾರ್ಮಿಕರಿಗೆ ಸಹಾಯ ಮಾಡಲು ಕಳುಹಿಸಲ್ಲ” ಎಂದು ಲೇವಡಿ ಮಾಡಿದ್ದಾರೆ.

ಇದನ್ನು ಓದಿದ್ದೀರಾ?  ‘ನಾನು ಜೈವಿಕವಾಗಿ ಜನಿಸಿಲ್ಲ, ಪರಮಾತ್ಮನೇ ನನ್ನನ್ನು ಕಳುಹಿಸಿದ್ದು’ ಎಂದ ಪ್ರಧಾನಿ ಮೋದಿ!

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಪರಮಾತ್ಮ ಅವರನ್ನು ಕಳುಹಿಸಿದ್ದರೆ ಅವರು ಬಡವರಿಗೆ ಮತ್ತು ರೈತರಿಗೆ ಸಹಾಯ ಮಾಡುತ್ತಿದ್ದರು. ಆದರೆ ಇದು ಯಾವ ರೀತಿಯ ದೇವರು? ಇದು ಪ್ರಧಾನಿ ಮೋದಿಯ ದೇವರು ಆಗಿರಬಹುದು” ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು.

ದ್ವೇಷ ಭಾಷಣಗಳ ಮೂಲಕವೇ ಸುದ್ದಿಯಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ “ನಾನು ಜೈವಿಕವಾಗಿ ಜನಿಸಿಲ್ಲ, ದೇವರೇ ನನ್ನನ್ನು ಕಳುಹಿಸಿದ್ದು” ಎಂದು ಹೇಳುವ ಮೂಲಕ ಟ್ರೋಲ್ ಆಗಿದ್ದಾರೆ. ವಿಪಕ್ಷಗಳು ಕೂಡಾ ಪ್ರಧಾನಿಯವರ ಈ ಹೇಳಿಕೆಯನ್ನು ಲೇವಡಿ ಮಾಡುತ್ತಿದ್ದಾರೆ.

ನ್ಯೂಸ್‌18ನ ರುಬಿಕಾ ಲಿಯಾಖತ್ ಜೊತೆ ಸಂದರ್ಶನದಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ಈ ಹೇಳಿಕೆಯನ್ನು ನೀಡಿದ್ದಾರೆ. ರುಬಿಕಾ ಲಿಯಾಖತ್ “ನಿಮಗೆ ಸುಸ್ತು ಅನ್ನೋದೆ ಆಗುದಿಲ್ವೆ” ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಮೋದಿ, ತನ್ನನ್ನು ದೇವರೇ ಕಳುಹಿಸಿದ್ದು ಎಂದಿದ್ದಾರೆ.

ಇದನ್ನು ಓದಿದ್ದೀರಾ?  ಮೋದಿ ಸುಳ್ಳುಗಳು | ಶೋಷಣೆಯಿಂದ ಮುಕ್ತಿ ನೀಡದ ಮೋದಿ, ಬುಡಕಟ್ಟುಗಳ ಅಭಿವೃದ್ಧಿಗೆ ನಿಲ್ಲುತ್ತಾರೆಯೇ?  

“ನನ್ನ ತಾಯಿ ಜೀವಂತವಾಗಿರುವವರೆಗೂ ನಾನು ಜೈವಿಕವಾಗಿ ಜನಿಸಿದ್ದೇನೆ ಎಂದು ನಾವು ನಂಬಿದ್ದೆ. ನನ್ನ ತಾಯಿ ಮರಣ ಹೊಂದಿದ ಬಳಿಕ ನಾನು ನನ್ನ ಎಲ್ಲಾ ಅನುಭವಗಳನ್ನು ಜೊತೆಗೂಡಿಸಿ ನೋಡುತ್ತೇನೆ. ನನ್ನನ್ನು ಪರಮಾತ್ಮನೇ ಕಳುಹಿಸಿದ್ದು ಎಂದು ನನಗೆ ಮನವರಿಕೆಯಾಗಿದೆ” ಎಂದು ಮೋದಿ ಹೇಳಿದ್ದಾರೆ.

“ಈ ಶಕ್ತಿ ನನಗೆ ಜೈವಿಕ ದೇಹದಿಂದ ಸಿಗುವುದಲ್ಲ. ಈ ಶಕ್ತಿ ನನಗೆ ದೇವರಿಂದ ನನಗೆ ದಯಪಾಲಿಸಲಾಗಿದೆ. ದೇವರು ತನ್ನ ಕೆಲಸವನ್ನು ನನ್ನ ಮೂಲಕ ಮಾಡಿಸಲು ನನಗೆ ಶಕ್ತಿ, ಸಾಮರ್ಥ್ಯ, ಉದ್ದೇಶವನ್ನು, ಪ್ರೇರಣೆಯನ್ನು ನನಗೆ ನೀಡಿದ್ದಾನೆ” ಎಂದಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಹಿತಿಗಳೂ ರಾಜಕಾರಣಿಗಳೇ, ಸರ್ಕಾರದಿಂದ ನೇಮಕವಾಗಿದ್ದಾರೆ, ಸಭೆ ಮಾಡಿದ್ದೇನೆ: ಡಿ ಕೆ ಶಿವಕುಮಾರ್

ಇತ್ತೀಚೆಗೆ ಕೆಪಿಸಿಸಿ ಕಚೇರಿಗೆ ಸಾಹಿತ್ಯ, ಸಂಸ್ಕೃತಿ ಹಾಗೂ ಇತರ ಅಕಾಡೆಮಿಗಳ ಅಧ್ಯಕ್ಷರ...

ವಿನೀತ ಮೋದಿಗೆ ಜಾಗತಿಕ ಒತ್ತಡ; ದುರ್ಬಲಗೊಳ್ಳುತ್ತಿದೆ ವಿದೇಶಾಂಗ ಸಂಬಂಧ

ಭಾರತದಲ್ಲಿ ದುರ್ಬಲರಾಗಿ, ವಿನೀತರಾಗಬೇಕಾದ ಒತ್ತಡ ಹೊಂದಿರುವ ಮೋದಿ, ತಮ್ಮ ಮೂರನೇ ಅವಧಿಯಲ್ಲಿ...

ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ‌ ಹೇಳಿಕೆ; ಸಿ.ಟಿ ರವಿ ವಿರುದ್ಧ ದೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ‌ ಹೇಳಿಕೆ ನೀಡಿದ್ದ ಮಾಜಿ ಸಚಿವ, ವಿಧಾನ...