ಟಿ20 ವಿಶ್ವಕಪ್ನ ಆತಿಥ್ಯ ವಹಿಸಿಕೊಂಡಿರುವ ಅಮೆರಿಕ ತಮ್ಮ ಲೀಗ್ ಹಂತದ ಎರಡನೇ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ ತಂಡವನ್ನು ಸೂಪರ್ ಓವರ್ನಲ್ಲಿ 5 ರನ್ಗಳಿಂದ ರೋಚಕವಾಗಿ ಸೋಲಿಸುವ ಮೂಲಕ ಇತಿಹಾಸ ಬರೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ್ದ ಕ್ರಿಕೆಟ್ ಶಿಶು ಅಮೆರಿಕ, ಸಂಘಟಿತ ಬೌಲಿಂಗ್ನ ನೆರವಿನಿಂದ ಪಾಕಿಸ್ತಾನವನ್ನು 159 ರನ್ಗಳಿಗೆ ನಿಯಂತ್ರಿಸಿತ್ತು. ಈ ಗುರಿಯನ್ನು ಬೆನ್ನತ್ತಿದ ಯುಎಸ್ಎ, ಕೇವಲ 3 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿದ್ದರಿಂದ ಕೊನೆಯ ಓವರ್ನಲ್ಲಿ ಪಂದ್ಯವನ್ನು ಟೈ ಮಾಡಿಕೊಂಡಿತ್ತು.
After 20 overs, we are TIED!!!
Super over begins now with Aaron Jones and Harmeet
Singh batting!!Can our players get the win? 👀#T20WorldCup | #WeAreUSACricket | #USAvPK pic.twitter.com/PEVxlojQjS
— USA Cricket (@usacricket) June 6, 2024
ಆ ಬಳಿಕ ನಡೆದ ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಮೆರಿಕ, 18 ರನ್ ಗಳಿಸಿತ್ತಲ್ಲದೇ, 6 ಎಸೆತಗಳಲ್ಲಿ ಪಾಕ್ ಗೆಲುವಿಗೆ 19 ರನ್ಗಳ ಗುರಿ ನೀಡಿತ್ತು.
ಅಮೆರಿಕ ಪರ ಸೂಪರ್ ಓವರ್ ಎಸೆದ ಭಾರತೀಯ ಮೂಲದ ಆಟಗಾರ ಸೌರಭ್ ನೇತ್ರವಾಕರ್, ಪಾಕಿಸ್ತಾನದ ಒಂದು ವಿಕೆಟ್ ಕಬಳಿಸಿದ್ದಲ್ಲದೇ ಕೇವಲ 13 ರನ್ಗಳಿಗೆ ನಿಯಂತ್ರಿಸುವ ಮೂಲಕ ಐತಿಹಾಸಿಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.
WHAT. A. FINISH!!!! 🤩🤩#TeamUSA wins their second match of the @ICC @T20WorldCup against Pakistan by 5 runs! 🔥#T20WorldCup | #USAvPK | #WeAreUSACricket 🇺🇸 pic.twitter.com/hYuDW0zvTj
— USA Cricket (@usacricket) June 6, 2024
ಅಮೆರಿಕ ವಿರುದ್ಧದ ಈ ಅನಿರೀಕ್ಷಿತ ಸೋಲಿನೊಂದಿಗೆ ಬಾಬರ್ ಆಝಂ ನೇತೃತ್ವದ ಪಾಕಿಸ್ತಾನ ತಂಡವು 2024 ಟಿ20 ವಿಶ್ವಕಪ್ ಅಭಿಯಾನ ಆರಂಭಿಸಿದ್ದು, ಪಾಕ್ನ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ.
ಕೆನಡಾ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಅಮೆರಿಕ ಭರ್ಜರಿ ಗೆಲುವು ಸಾಧಿಸಿತ್ತು. ಟೀಮ್ ಇಂಡಿಯಾ, ಪಾಕಿಸ್ತಾನ, ಅಮೆರಿಕ ಹಾಗೂ ಐರ್ಲ್ಯಾಂಡ್ ತಂಡಗಳು ಎ ಗುಂಪಿನಲ್ಲಿ ಆಡುತ್ತಿವೆ.
ಈಗಾಗಲೇ ಆಡಿರುವ ಎರಡೂ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಆತಿಥೇಯ ಅಮೆರಿಕ ತಂಡ, ಗುಂಪಿನಲ್ಲಿ ಮೊದಲ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದೆ.
