ʼಟೆಲಿಗ್ರಾಂʼನಂತೆ ʼಚಾನಲ್‌ʼ ಮಾದರಿ ಪರಿಚಯಿಸಲು ಸಜ್ಜಾದ ʼವಾಟ್ಸಪ್‌ʼ

Date:

Advertisements

ಸದ್ಯದಲ್ಲೇ ಬದಲಾಗಲಿದೆ ʼವಾಟ್ಸ್‌ಪ್‌ ಸ್ಟೇಟಸ್‌ʼ ಹೆಸರು

ʼಬ್ರಾಡ್‌ ಕಾಸ್ಟ್‌ʼಗೆ ನೆರವಾಗಲಿದೆ ʼವಾಟ್ಸಪ್‌ ಚಾನಲ್‌ʼ

ಇತ್ತೀಚೆಗೆಷ್ಟೇ ʼಕಮ್ಯುನಿಟಿʼ ಎಂಬ ಹೊಸ ಫೀಚರ್‌ ಪರಿಚಯಿಸಿದ್ದ ʼಮೆಟಾʼ ಮಾಲೀಕತ್ವದ ʼವಾಟ್ಸಪ್‌ʼ ಸಂಸ್ಥೆ, ಇದೀಗ ʼಟೆಲಿಗ್ರಾಂʼ ಮಾದರಿಯ ʼಬ್ರಾಡ್‌ಕಾಸ್ಟ್‌ ಚಾನಲ್‌ʼಗಳನ್ನು ಪರಿಚಯಿಸಿಲು ಸಜ್ಜಾಗಿದೆ. ಅಷ್ಟೇ ಅಲ್ಲ, ʼವಾಟ್ಸಪ್‌ ಸ್ಟೇಟಸ್‌ʼನ ಹೆಸರನ್ನು ಕೂಡ ಬದಲಿಸಲಿದೆ ಎಂದು ವರದಿಯಾಗಿದೆ.

Advertisements

ʼವಾಟ್ಸಪ್‌ʼನಲ್ಲಿ ಈಗಾಗಲೇ ʼಬ್ರಾಡ್‌ ಕಾಸ್ಟ್‌ʼ ಮಾದರಿ ಬಳಕೆಯಲ್ಲಿದೆ. ʼವಾಟ್ಸಪ್‌ ಗ್ರೂಪ್‌ʼ ಮಾದರಿಯಲ್ಲಿ ಗರಿಷ್ಠ 256 ಜನರನ್ನು ಒಂದು ʼಬ್ರಾಡ್‌ಕಾಸ್ಟ್‌ʼ ಗುಂಪಿಗೆ ಸೇರಿಸಿ, ಆ ಗುಂಪಿನ ಸದಸ್ಯರೆಲ್ಲರಿಗೂ ಏಕಕಾಲಕ್ಕೆ ವ್ಯಕ್ತಿಯೋರ್ವ ಸಂದೇಶ ರವಾನಿಸುವ ಮಾಧ್ಯಮವಾಗಿ ʼಬ್ರಾಡ್‌ ಕಾಸ್ಟ್‌ʼ ಮಾದರಿ ಕಾರ್ಯ ನಿರ್ವಹಿಸುತ್ತದೆ. ʼಬ್ರಾಡ್‌ ಕಾಸ್ಟ್‌ʼ ಗುಂಪಿಗೆ ತನ್ನದೇ ಆದ ಮಿತಿಗಳಿವೆ. 256ಕ್ಕಿಂತ ಹೆಚ್ಚಿನ ಸದಸ್ಯರನ್ನು ಈ ಗುಂಪಿಗೆ ಸೇರಿಸಲು ಸಾಧ್ಯವಿಲ್ಲ. ಇದಕ್ಕಿಂತ ಹೆಚ್ಚಿನ ಸಂಖ್ಯೆಯ ಜನರನ್ನು ತಲುಪಲು ಮತ್ತೊಂದು ʼಬ್ರಾಡ್‌ ಕಾಸ್ಟ್‌ʼ ಶುರು ಮಾಡಬೇಕು, ಆ ಗುಂಪಿಗೆ ಮತ್ತೊಮ್ಮೆ ಪ್ರತ್ಯೇಕವಾಗಿ ಸಂದೇಶ ರವಾನಿಸಬೇಕು.

ಟೆಲಿಗ್ರಾಂ ಚಾನಲ್‌

ಆದರೆ, ‘ಟೆಲಿಗ್ರಾಂ’ನಲ್ಲಿ ಹಾಗಲ್ಲ. ಈ ವೇದಿಕೆಯಲ್ಲಿರುವ ʼಚಾನಲ್‌ʼ ಮಾದರಿ ʼವಾಟ್ಸಪ್‌ʼಗಿಂತ ಭಿನ್ನವಾಗಿದೆ. ʼಟೆಲಿಗ್ರಾಂ ಚಾನಲ್‌ʼ ಸೇರುವ ಸದಸ್ಯರ ಸಂಖ್ಯೆಗೆ ಯಾವುದೇ ಮಿತಿಗಳಿಲ್ಲ. ಫೇಸ್‌ಬುಕ್‌ ಪೇಜ್‌, ಯುಟ್ಯೂಬ್‌ ಅಥವಾ ಇನ್‌ಸ್ಟಾಗ್ರಾಂ ಪೇಜ್‌ಗಳನ್ನು ಫಾಲೋ ಅಥವಾ ಸಬ್‌ಸ್ಕ್ರೈಬ್‌ ಮಾಡುವ ರೀತಿಯಲ್ಲೇ ಈ ʼಟೆಲಿಗ್ರಾಂ ಚಾನಲ್‌ʼ ಅನ್ನು ಕೂಡ ಸೇರಿಕೊಳ್ಳಬಹುದು.

ವಾಟ್ಸಪ್‌ ಚಾನಲ್‌ ವಿಶೇಷತೆ

ಕೆಲವು ಮಿತಿಗಳನ್ನು ಹೊಂದಿದ್ದ ʼಬ್ರಾಡ್‌ ಕಾಸ್ಟ್‌ʼ ಮಾದರಿಯನ್ನೇ ಇದೀಗ ʼವಾಟ್ಸಪ್‌ ಚಾನಲ್‌ʼ ಆಗಿ ಪರಿವರ್ತಿಸಲು ಸಂಸ್ಥೆ ಮುಂದಾದಂತಿದೆ. ವಾಟ್ಸಪ್‌ನ ಹೊಸ ಚಾನಲ್‌ನಲ್ಲಿ 256ಕ್ಕಿಂತ ಹೆಚ್ಚಿನ ಸದಸ್ಯರು, ಅಂದರೆ ಸಾವಿರ ಅಥವಾ ಲಕ್ಷಗಟ್ಟಲೇ ಮಂದಿಗೆ ಏಕಕಾಲಕ್ಕೆ ಸಂದೇಶ ರವಾನಿಸಬಹುದಾಗಿದೆ. ʼವಾಟ್ಸಪ್‌ ಚಾನಲ್‌ʼ ಅನ್ನು ಫಾಲೋ ಮಾಡುವ ಎಲ್ಲ ಸದಸ್ಯರ ಮೊಬೈಲ್‌ ನಂಬರ್‌ ಸೇರಿದಂತೆ ಖಾಸಗಿ ಮಾಹಿತಿಗಳು ಗೌಪ್ಯವಾಗಿರಲಿದೆ. ಯುಟ್ಯೂಬ್‌ ಅಥವಾ ಫೇಸ್‌ಬುಕ್‌ನಂತೆ ವಾಟ್ಸಪ್‌ ಬಳಕೆದಾರರು ತಮ್ಮ ಇಷ್ಟದ ಅಥವಾ ನಿರ್ದಿಷ್ಟ ಚಾನಲ್‌ಗಳನ್ನು ಹುಡುಕಿಕೊಂಡು ಫಾಲೋ ಮಾಡುವ ಅವಕಾಶ ಹೊಸ ಚಾನಲ್‌ ಮಾದರಿಯಲ್ಲಿ ಇರಲಿದೆ. ಸದ್ಯ ವಾಟ್ಸಪ್‌ ಚಾನಲ್‌ ಮಾದರಿ ಅಭಿವೃದ್ಧಿಯ ಹಂತದಲ್ಲಿದ್ದು, ಸದ್ಯದಲ್ಲೇ ಬಳಕೆಗೆ ಲಭ್ಯವಾಗಲಿದೆ ಎನ್ನಲಾಗುತ್ತಿದೆ.

ವಾಟ್ಸಪ್‌ ಅಪ್‌ಡೇಟ್‌

ಇಷ್ಟು ದಿನಗಳ ಕಾಲ ವಾಟ್ಸಪ್‌ ಬಳಕೆದಾರರು ಬಳಸುತ್ತಿದ್ದ ʼಸ್ಟೇಟಸ್‌ʼ ಫೀಚರ್‌ಗೆ ಮರುನಾಮಕರಣ ಮಾಡಲು ಸಂಸ್ಥೆ ಚಿಂತನೆ ನಡೆಸಿದೆ. ʼವಾಟ್ಸಪ್‌ ಸ್ಟೇಟಸ್‌ʼ ಹೆಸರನ್ನು ಇನ್ನು ಕೆಲವೇ ದಿನಗಳಲ್ಲಿ ʼಅಪ್‌ಡೇಟ್‌ʼ ಎಂದು ಬದಲಿಸಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

c6d189e709d010a95cabcbe8c5246c21
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯ ಮೂಲದ ಸಬೀಹ್ ಖಾನ್ ಆ್ಯಪಲ್ ಕಂಪನಿಯ ಸಿಒಒ ಆಗಿ ನೇಮಕ

ದುಬಾರಿ ಬೆಲೆಯ ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಆ್ಯಪಲ್ ಕಂಪನಿಯು ತನ್ನ...

ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ: ಬಾಹ್ಯಾಕಾಶ ನಿಲ್ದಾಣ ತಲುಪಿದ ಗಗನಯಾತ್ರಿಗಳು

ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿರುವ ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳಿದ್ದ...

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ಗಳನ್ನು ತಯಾರಿಸಿದ ಚೀನಾ

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ʼಗಳನ್ನು ಚೀನಾದ ವಿಜ್ಞಾನಿಗಳು ತಯಾರಿಸಿದ್ದಾರೆ. ಸೊಳ್ಳೆ ಗಾತ್ರದ...

ಬೆಂಗಳೂರು | ಡಿಜಿಟಲ್ ಅರೆಸ್ಟ್ ಮೂಲಕ ವೃದ್ಧ ದಂಪತಿಗೆ 4.79 ಕೋಟಿ ರೂ. ವಂಚನೆ

ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮೂಲಕ ಸುಮಾರು 4.79 ಕೋಟಿ ರೂಪಾಯಿ...

Download Eedina App Android / iOS

X