ಜೂನ್ 9ರಂದು ಹರಿಹರದ ಪ್ರೊ.ಕೃಷ್ಣಪ್ಪ ಭವನ ಮೈತ್ರಿವನದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ 133ನೇ, ಪ್ರೊ.ಬಿ.ಕೃಷ್ಣಪ್ಪನವರ 86ನೇ ಜನ್ಮ ದಿನಾಚರಣೆ ಹಾಗೂ ದಸಂಸ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಆಯೋಜಿಸಲಾಗಿದೆ ಎಂದು ದಾವಣಗೆರೆ ದಸಂಸ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್ ತಿಳಿಸಿದರು.
ದಾವಣಗೆರೆ ಜಿಲ್ಲೆಯ ಹರಿಹರ ನಗರದ ಪ್ರತಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಸಾಹಿತಿಗಳು ಹಾಗೂ ಪ್ರಗತಿಪರ ಚಿಂತಕ ಪ್ರೊ.ಕೆ ಎಸ್ ಭಗವಾನ್ ಉದ್ಘಾಟಿಸಲಿದ್ದು, ಹರಿಹರ ಆರೋಗ್ಯ ಮಾತೆಯ ಬಸಿಲಿಕ ಚರ್ಚ್‌ನ ಫಾದರ್ ಜಾರ್ಜ್ ಕೆ ಎ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ” ಎಂದು ತಿಳಿಸಿದರು.
“ನ್ಯಾಯಾಲಯದಲ್ಲಿ ಅಧಿಕೃತ ದಸಂಸ ನಮ್ಮದೇ ಎಂದು ಆದೇಶವಿದ್ದರೂ ಆನೇಕರು ನಮ್ಮ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಪ್ರೊ ಕೃಷ್ಣಪ್ಪನವರಿಗೆ ಮಾಡಿದ ದ್ರೋಹ ಎಂದ ಅವರು ಎಲ್ಲ ಸಂಘಟನೆಗಳು ಒಗ್ಗಾಟ್ಟಾಗಿ ಹೋರಾಟ ಮಾಡಬೇಕು ಎನ್ನುವುದು ನಮ್ಮ ಸಂಘಟನೆಯ ಆಶಯವಾಗಿದೆ. ಈಗಲೂ ಅದಕ್ಕೆ ನಾವು ಬದ್ಧರಾಗಿದ್ದೇವೆ” ಎಂದರು.
ದಸಂಸನ ರಾಜ್ಯ ಸಂಘಟನಾ ಸಂಚಾಲಕ ನಾಗರಾಜ್ ಮುಂಡರಗಿ ಮಾತನಾಡಿ, “ಎಸ್ ಫಕೀರಪ್ಪ ಮುಂಡಗೋಡ, ಬಿ ಎಸ್ ಗಂಗಾಧರಪ್ಪ, ಬಸವರಾಜ್ ನಾಗಮಂಗಲ, ವೇಂಕಟೇಶ್ ನಾಗಮಂಗಲ, ರಮೇಶ್ ಎಸ್ ಮಾದರ್, ದಸಂಸನ ರಾಜ್ಯ ಖಜಾಂಚಿ ಬಿ ಎ ಕಾಟ್ಟೆ, ರಾಜ್ಯ ಮಹಿಳಾ ಸಂಚಾಲಕಿ ರತ್ನಮ್ಮ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶಾರ್ಟ್ ಸರ್ಕ್ಯೂಟ್; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ
ಪತ್ರಿಕಾಗೋಷ್ಟಿಯಲ್ಲಿ ತಾಲೂಕು ಸಂಚಾಲಕ ಪಿ ಜೆ ಮಹಾಂತೇಶ್, ಐರಣಿ ಹನುಮಂತಪ್ಪ, ತಿಪ್ಪಣ್ಣಕಡ್ಲೆಗೊಂದಿ, ಚೌಡಪ್ಪ ಬಾನುವಳ್ಳಿ ಸೇರಿದಂತೆ ಇತರರು ಇದ್ದರು.
