“ಲೋಕಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ವಹಿಸಿಕೊಳ್ಳುವಂತೆ ಸರ್ವಾನುಮತದಿಂದ ರಾಹುಲ್ ಗಾಂಧಿಯವರಿಗೆ ಮನವಿ ಮಾಡಲಾಗಿದೆ” ಎಂದು ಎಐಸಿಸಿ ಸಂಘಟನಾ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಇಂದು ಕಾಂಗ್ರೆಸ್ನ ನೀತಿ ನಿರ್ಧಾರಗಳನ್ನು ಕೈಗೊಳ್ಳುವ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಗಿದ್ದು, ಈ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಈ ವಿಚಾರ ತಿಳಿಸಿದ್ದಾರೆ.
“ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ವಹಿಸಿಕೊಳ್ಳುವಂತೆ ಸಿಡಬ್ಲ್ಯುಸಿ ಸರ್ವಾನುಮತದಿಂದ ರಾಹುಲ್ ಗಾಂಧಿಯವರಿಗೆ ಮನವಿ ಮಾಡಿದೆ. ಚುನಾವಣೆಯ ಸಮಯದಲ್ಲಿ, ನಾವು ನಿರುದ್ಯೋಗ, ಹಣದುಬ್ಬರ, ಮಹಿಳೆಯರ ಸಮಸ್ಯೆಗಳು ಮತ್ತು ಸಾಮಾಜಿಕ ನ್ಯಾಯದಂತಹ ಹಲವಾರು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದ್ದೇವೆ. ಈ ಸಮಸ್ಯೆಗಳನ್ನು ಈಗ ಸಂಸತ್ತಿನೊಳಗೆ ಹೆಚ್ಚು ಪರಿಣಾಮಕಾರಿಯಾಗಿ ಚರ್ಚೆ ನಡೆಸಬೇಕಾಗಿದೆ. ಸಂಸತ್ತಿನಲ್ಲಿ ಈ ಅಭಿಯಾನವನ್ನು ಮುನ್ನಡೆಸಲು ರಾಹುಲ್ ಗಾಂಧಿ ಅತ್ಯುತ್ತಮ ವ್ಯಕ್ತಿ. ಹಾಗಾಗಿ ಅವರ ಹೆಸರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ” ಎಂದು ತಿಳಿಸಿದರು.
The CWC unanimously requested Shri Rahul Gandhi to take the position of the Leader of Opposition in the Lok Sabha.
During the elections, we raised several important issues such as unemployment, inflation, women’s issues, and social justice. These issues now need to be addressed… pic.twitter.com/3np9zMdmnn
— Congress (@INCIndia) June 8, 2024
“ಸಿಡಬ್ಲ್ಯುಸಿಯಲ್ಲಿ ನಾಲ್ಕು ತಿಂಗಳ ಹಿಂದೆ ಇದ್ದ ವಾತಾವರಣಕ್ಕಿಂತ ಈಗ ಸಂಪೂರ್ಣವಾಗಿ ಭಿನ್ನವಾಗಿದೆ. ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ನಾಯಕರಿಂದ ಹಿಡಿದು ಕಾರ್ಯಕರ್ತರವರೆಗೆ ಎಲ್ಲರಿಗೂ ಹೊಸ ಚೈತನ್ಯ ಬಂದಿದೆ. ಕಾಂಗ್ರೆಸ್ ಅನ್ನು ಮುಗಿಸಲು ಹಲವಾರು ಪ್ರಯತ್ನಗಳು ನಡೆದವು, ಆದರೆ ನಾವು ಬಲವಾಗಿ ನಿಂತಿದ್ದೇವೆ. ಬಿಜೆಪಿಯದ್ದು ಒಂದೇ ಅಜೆಂಡಾ. ಜನರನ್ನು ವಿಭಜಿಸುವುದು. ಆದಾಗ್ಯೂ, ಕಾಂಗ್ರೆಸ್ ಪಕ್ಷ ಮತ್ತು ಇಂಡಿಯಾ ಮೈತ್ರಿಯು ನಮ್ಮ ನಿರೂಪಣೆ ಮತ್ತು ಗ್ಯಾರಂಟಿಗಳೊಂದಿಗೆ ದೃಢವಾಗಿ ನಿಂತಿದೆ” ಎಂದು ತಿಳಿಸಿದರು.
Congress President Shri @kharge, Congress Parliamentary Party Chairperson Smt. Sonia Gandhi ji, Shri @RahulGandhi and other senior leaders attended the Extended Congress Working Committee meeting in Delhi today. pic.twitter.com/BEH7hVKtCe
— Congress (@INCIndia) June 8, 2024
“ರಾಷ್ಟ್ರದ ರಾಜಕೀಯದಲ್ಲಿ ಕಾಂಗ್ರೆಸ್ ಪಕ್ಷವು ಒಮ್ಮೆ ಹೊಂದಿದ್ದ ಅತ್ಯುನ್ನತ ಸ್ಥಾನವನ್ನು ಪಡೆದುಕೊಳ್ಳಲು ನಾವು ಇನ್ನೂ ಬಹಳ ದೂರ ಹೋಗಬೇಕಾಗಿದೆ. ದೇಶದ ಜನರು ಮಾತನಾಡಿ ಕಾಂಗ್ರೆಸ್ಗೆ ಮತ್ತೊಂದು ಅವಕಾಶ ನೀಡಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಮತ್ತು ಸಂವಿಧಾನ ಮತ್ತು ಅದರ ತತ್ವಗಳು, ಮೌಲ್ಯಗಳು ಮತ್ತು ನಿಬಂಧನೆಗಳನ್ನು ರಕ್ಷಿಸುವಲ್ಲಿ ಅದರ ಬದ್ಧತೆಯಲ್ಲಿ ದೃಢವಾಗಿ ಮುಂದುವರಿಸಲಿದೆ” ಎಂದು ಕೆ ಸಿ ವೇಣುಗೋಪಾಲ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮೋದಿ 3.0 ಸರ್ಕಾರದಲ್ಲಿ ನಿತೀಶ್ ಪಕ್ಷಕ್ಕೆ 2 ಮಂತ್ರಿಗಿರಿ
ಬಳಿಕ ಮಾತನಾಡಿದ ಕಾಂಗ್ರೆಸ್ನ ಹಿರಿಯ ಮುಖಂಡ ಜೈರಾಮ್ ರಮೇಶ್, “2024ರ ಲೋಕಸಭಾ ಚುನಾವಣೆಯ ಫಲಿತಾಂಶವು ಕೇವಲ ಬಿಜೆಪಿಯ ಸೋಲಲ್ಲ. ನರೇಂದ್ರ ಮೋದಿಯವರ ವ್ಯಕ್ತಿಗತ, ರಾಜಕೀಯ ಮತ್ತು ನೈತಿಕ ಸೋಲಾಗಿದೆ. ಈ ಗೆಲುವು ದೇಶದ ಜನಸಾಮಾನ್ಯರ ಗೆಲುವು. ಸಂವಿಧಾನವನ್ನು ಸುರಕ್ಷಿತವಾಗಿಡುವುದಕ್ಕೆ ಗೆಲುವು. ಇಂಡಿಯಾ ಮೈತ್ರಿಕೂಟಕ್ಕೆ ಮತ ನೀಡಿದ ಜನರಿಗೆ ಧನ್ಯವಾದ ಅರ್ಪಿಸುತ್ತೇವೆ” ಎಂದು ಹೇಳಿದರು.
