ಗಯಾನಾದಲ್ಲಿ ಜೂನ್ 8ರಂದು ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ ರೋಚಕ ಪಂದ್ಯದಲ್ಲಿ ಬಲಿಷ್ಠ ನ್ಯೂಝಿಲ್ಯಾಂಡ್ ತಂಡಕ್ಕೆ ಆಘಾತಕಾರಿ ಸೋಲುಣಿಸಿರುವ ಅಫ್ಘಾನಿಸ್ತಾನ ತಂಡ, ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ನ್ಯೂಝಿಲ್ಯಾಂಡ್ ಅನ್ನು ಸೋಲಿಸಿದ್ದು, ಇತಿಹಾಸ ಬರೆದಿದೆ.
ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ರಹ್ಮಾನುಲ್ಲಾ ಗುರ್ಬಾಝ್(80) ಅವರ ಅರ್ಧಶತಕದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಝಿಲ್ಯಾಂಡ್ ತಂಡ, ನಾಟಕೀಯ ಕುಸಿತ ಕಂಡು 15.2 ಓವರ್ ಗಳಲ್ಲಿ ಕೇವಲ 75 ರನ್‌ಗಳಿಗೆ ಆಲೌಟಾ ಆಗಿ, 84 ರನ್‌ಗಳ ಹೀನಾಯ ಸೋಲು ಅನುಭವಿಸಿತು.
Afghanistan put on a clinic with bat and ball against New Zealand to continue their winning momentum 🙌#T20WorldCup | #NZvAFG | 📝 https://t.co/BuSb84vwPX pic.twitter.com/MbUFFuTyBm
— T20 World Cup (@T20WorldCup) June 8, 2024
ಗುರ್ಬಾಝ್ ಅವರ ಅಮೋಘ ಅರ್ಧಶತಕವಲ್ಲದೇ, ಬೌಲಿಂಗ್‌ನಲ್ಲಿ ಅಫ್ಘಾನಿಸ್ತಾನ ತಂಡದ ಪ್ರಮುಖ ಬೌಲರ್ ರಶೀದ್ ಖಾನ್ ಮತ್ತು ಫಝಲುಲ್ ಹಕ್ ಫಾರೂಕಿ ಅವರ ನಾಲ್ಕು ವಿಕೆಟ್‌ಗಳ ಗಳಿಕೆಯ ನೆರವಿನಿಂದ ಅಫ್ಘಾನಿಸ್ತಾನ ತಂಡವು ತಮ್ಮ ‘ಸಿ’ ಗುಂಪಿನ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿತು.
The skipper @RashidKhan_19 returned with incredible numbers of 4/17 to his name against New Zealand. These are the best bowling figures by a captain in #T20WorldCup history. 👏#AfghanAtalan | #T20WorldCup | #AFGvNZ | #GloriousNationVictoriousTeam pic.twitter.com/O9SsuSiBhJ
— Afghanistan Cricket Board (@ACBofficials) June 8, 2024
ಅಫ್ಘಾನಿಸ್ತಾನ ನೀಡಿದ್ದ 160 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಝಿಲ್ಯಾಂಡ್ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಹೋಯಿತು ಮತ್ತು ಅಂತಿಮವಾಗಿ 15.2 ಓವರ್‌ಗಳಲ್ಲಿ ಕೇವಲ 76 ರನ್‌ಗಳಿಗೆ ಸರ್ವಪತನ ಕಂಡಿತು. ನ್ಯೂಝಿಲ್ಯಾಂಡ್ ಪರ ಗ್ಲೆನ್ ಫಿಲಿಪ್ಸ್ 18 ರನ್ ಮತ್ತು ಮ್ಯಾಟ್ ಹೆನ್ರಿ 12 ರನ್ ಗಳಿಸಿದ್ದು ಬಿಟ್ಟರೆ, ಉಳಿದ ಯಾವ ಬ್ಯಾಟರ್‌ಗಳೂ ಎರಡಂಕಿ ಮೊತ್ತ ದಾಟಲು ವಿಫಲರಾದರು. ಇದು ಕೇನ್ ವಿಲಿಯಮ್ಸನ್ ನಾಯಕತ್ವದ ಕಿವೀಸ್ ತಂಡದ ಸೋಲಿಗೆ ಕಾರಣವಾಯಿತು.
ಬೌಲಿಂಗ್‌ನಲ್ಲಿ ಅಫ್ಘಾನಿಸ್ತಾನ ತಂಡದ ಪರ ರಶೀದ್ ಖಾನ್ 4 ಓವರ್‌ಗಳಲ್ಲಿ 17 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಫಝಲುಲ್ ಹಕ್ ಫಾರೂಕಿ 3.2 ಓವರ್‌ಗಳಲ್ಲಿ 17 ರನ್ ನೀಡಿ 4 ವಿಕೆಟ್ ಪಡೆದರು. ಅಲ್ಲದೇ, ಆಲ್‌ರೌಂಡರ್ ಮೊಹಮ್ಮದ್ ನಬಿ ಕೂಡ ಎರಡು ವಿಕೆಟ್ ಪಡೆದು ಮಿಂಚಿದರು.
#AfghanAtalan‘s formidable opening duo, @RGurbaz_21 and @IZadran18 shared two successive 100+ run opening partnerships in their first two games. This achievement makes them the only pair to bring up back-to-back 100+ run partnerships in #T20WorldCup cricket. 👏🤩#AFGvNZ pic.twitter.com/CahqcwncdM
— Afghanistan Cricket Board (@ACBofficials) June 8, 2024
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ತಂಡದ ಬ್ಯಾಟಿಂಗ್ ಆರಂಭಿಸಿದ ರಹ್ಮಾನುಲ್ಲಾ ಗುರ್ಬಾಝ್ ಮತ್ತು ಇಬ್ರಾಹಿಂ ಝದ್ರಾನ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 14.3 ಓವರ್‌ಗಳಲ್ಲಿ 103 ರನ್‌ಗಳ ಜೊತೆಯಾಟ ನಡೆಸಿದರು.
ಇದನ್ನು ಓದಿದ್ದೀರಾ? ಟಿ20 ವಿಶ್ವಕಪ್ | ಪಾಕ್‌ಗೆ ಶಾಕ್ ನೀಡಿದ ಅಮೆರಿಕ: ಸೂಪರ್ ಓವರ್‌ನಲ್ಲಿ ಐತಿಹಾಸಿಕ ಗೆಲುವು
ಗುರ್ಬಾಝ್ 56 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಬೌಂಡರಿಗಳ ಸಮೇತ 80 ರನ್ ಬಾರಿಸಿದರೆ, ಇಬ್ರಾಹಿಂ ಝದ್ರಾನ್ 41 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಮೂಲಕ 44 ರನ್ ಗಳಿಸಿದರು. ಅಝ್ಮತುಲ್ಲಾ ಓಮರ್‌ಝಾಯ್ 22 ರನ್ ಗಳಿಸಿ ತಂಡದ ಮೊತ್ತವನ್ನು 6 ವಿಕೆಟ್‌ಗೆ 159 ರನ್‌ಗಳಿಗೆ ಕೊಂಡೊಯ್ದರು. ಬೌಲಿಂಗ್‌ನಲ್ಲಿ ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ 4 ಓವರ್‌ಗಳಲ್ಲಿ 22 ರನ್ ನೀಡಿ 2 ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ 4 ಓವರ್‌ಗಳಲ್ಲಿ 37 ರನ್ ನೀಡಿ 2 ವಿಕೆಟ್ ಕಬಳಿಸಿದರು. ಉಳಿದಂತೆ ಲಾಕಿ ಫರ್ಗ್ಯುಸನ್ ಒಂದು ವಿಕೆಟ್ ಕಬಳಿಸಿದರು.
Well played, @ACBofficials
Our focus shifts to Game 2 against @windiescricket in Trinidad on Thursday (NZT). Catch up on all scores | https://t.co/pcI2SDQIzS📲#T20WorldCup #CricketNation pic.twitter.com/U6Z1pRUSzx
— BLACKCAPS (@BLACKCAPS) June 8, 2024
