ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸೋಲಿನ ನಂತರ ಅಯೋಧ್ಯೆಯ ಜನರನ್ನು ನಿಂದಿಸುವವರನ್ನು ಬಂಧಿಸುವಂತೆ ಅಯೋಧ್ಯೆಯ ಸಮಾಜವಾದಿ ಪಕ್ಷದ ಮಾಜಿ ಶಾಸಕ ತೇಜ್ ನಾರಾಯಣ್ ಪಾಂಡೆ ಅವರು ಶನಿವಾರ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪಾಂಡೆ, “ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದಾಗಿನಿಂದ ಅನೇಕ ಜನರು ಅಯೋಧ್ಯೆಯ ಮತದಾರರ ವಿರುದ್ಧ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಿಂದನೀಯ ಪದಗಳನ್ನು ಬಳಸಿದ್ದಾರೆ” ಎಂದು ಹೇಳಿದ್ದಾರೆ.
I’ve become a big fan of Unfiltered by @Samdish YT videos, where he becomes mischievous, child-like & sometimes crazy just to make his guests comfortable, to unsettle & uncover them.
But his videos on the plight of people in Ayodhya & other places make you cry. I just hope our… pic.twitter.com/ipwtwx6PD6— Satish Acharya (@satishacharya) June 8, 2024
ಇದನ್ನು ಓದಿದ್ದೀರಾ? ಅಯೋಧ್ಯೆಯ ಜನರ ಅಳಲು ಮತ್ತು ಅಚ್ಚರಿಗೊಳಿಸದ ಚುನಾವಣಾ ಫಲಿತಾಂಶ
“ಅಯೋಧ್ಯೆಯ ನಾಗರಿಕರನ್ನು ನಿಂದಿಸುವವರನ್ನು ಗುರುತಿಸಿ ಮತ್ತು ಅವರ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಎಸ್‌ಪಿ ನಾಯಕ ಆಗ್ರಹಿಸಿದ್ದಾರೆ.
“ಬಿಜೆಪಿ ಸರ್ಕಾರದಿಂದ ಅಯೋಧ್ಯೆಯ ಜನರು ಪ್ರತಿ ಹಂತದಲ್ಲೂ ವಂಚನೆಗೆ ಒಳಗಾಗಿದ್ದಾರೆ” ಎಂದು ಆರೋಪಿಸಿದ ಅವರು, “ಅಯೋಧ್ಯೆಯ ಜನರ ಮನೆ, ಅಂಗಡಿಗಳನ್ನು ಧ್ವಂಸಗೊಳಿಸಿದ್ದು, ಸೂಕ್ತ ಪರಿಹಾರವನ್ನೂ ನೀಡಿಲ್ಲ. ಸರಕಾರದ ಆದೇಶದ ಮೇರೆಗೆ ಪೊಲೀಸ್ ಆಡಳಿತವು ಬೆದರಿಕೆ ಹಾಕಿದೆ, ಲೂಟಿ ಮಾಡಿದೆ” ಎಂದು ದೂರಿದರು.
ಇದನ್ನು ಓದಿದ್ದೀರಾ? ಅಯೋಧ್ಯೆಯಲ್ಲಿ ಬಿಜೆಪಿಗೆ ಸೋಲಿನ ಮುಖಭಂಗ; ದಲಿತ ಅಭ್ಯರ್ಥಿಯ ಗೆಲ್ಲಿಸಿಕೊಂಡ ಸಮಾಜವಾದಿ ಪಕ್ಷ
“ನೊಂದ ಸಾರ್ವಜನಿಕರು ದೂರು ನೀಡಿದರೂ ಕೂಡಾ ಯಾರೂ ಅದಕ್ಕೆ ಕಿವಿಕೊಟ್ಟಿಲ್ಲ. ಸಾರ್ವಜನಿಕರು ಲೋಕಸಭೆ ಚುನಾವಣೆಯಲ್ಲಿ ಅವಕಾಶ ಸಿಕ್ಕಾಗ ಬಿಜೆಪಿಯನ್ನು ಸೋಲಿಸಿ ಸಮಾಜವಾದಿ ಪಕ್ಷವನ್ನು ಆಯ್ಕೆ ಮಾಡಿದರು” ಎಂದು ಹೇಳಿದರು.
This is becoming a worrying trend – online anti-social elements are abusing & intimidating Hindus because they didn’t vote as ‘instructed’.
2 days ago anonymous account @randomsena had called Ayodhya Hindus Hin***a, @ayodhya_police had assured action but nothing happened ….Now… pic.twitter.com/v9p1HxQ3Np— The DeshBhakt 🇮🇳 (@TheDeshBhakt) June 8, 2024
“ಅಯೋಧ್ಯೆಯಲ್ಲಿ ಬಿಜೆಪಿಗಿದ್ದ ದುರಹಂಕಾರವನ್ನು ಇಲ್ಲಿನ ಜನ ಒಡೆದು ಹಾಕಿದ್ದಾರೆ. ಇಂದು ಪ್ರಧಾನಿ ಮೋದಿ ಪ್ರಧಾನಿಯಾಗುವುದಕ್ಕಿಂತ ಬಿಜೆಪಿ ಅಯೋಧ್ಯೆ ಸೋತಿರುವ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ. ಇದರಿಂದಾಗಿ ಬಿಜೆಪಿ ಏಜೆಂಟರು ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಟೀಕೆ ಮಾಡುತ್ತಿದ್ದಾರೆ” ಎಂದು ಎಸ್‌ಪಿ ನಾಯಕ ತೇಜ್ ನಾರಾಯಣ್ ಪಾಂಡೆ ಆರೋಪಿಸಿದರು.
ಇದನ್ನು ಓದಿದ್ದೀರಾ? ಬಿಜೆಪಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ ‘ಅಯೋಧ್ಯೆ’ಯ ಸೋಲು: ರಾಮನೂರಿನಲ್ಲಿ ಮೋದಿಯ ಹಿನ್ನಡೆಗೆ ಕಾರಣವೇನು?
ಈ ವರ್ಷದ ಲೋಕಸಭೆ ಚುನಾವಣೆಯಲ್ಲಿ ಫೈಜಾಬಾದ್‌ನ ಹಾಲಿ ಬಿಜೆಪಿ ಸಂಸದ ಲಲ್ಲು ಸಿಂಗ್ ಅವರನ್ನು ಎಸ್‌ಪಿಯ ಅವಧೇಶ್ ಪ್ರಸಾದ್ ಸೋಲಿಸಿದ್ದಾರೆ. ಅಯೋಧ್ಯೆ ಫೈಜಾಬಾದ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ರಾಮಮಂದಿರ ರಾಜಕಾರಣ ಮಾಡಿದ ಬಳಿಕವೂ ಬಿಜೆಪಿ ಅಯೋಧ್ಯೆಯಲ್ಲಿ ಸೋತಿರುವುದಕ್ಕೆ ಬಿಜೆಪಿ ಬೆಂಬಲಿಗರು ಅಯೋಧ್ಯೆಯ ಜನರನ್ನು ನಿರಂತರವಾಗಿ ಸಾಮಾಜಿಕ ಜಾಲತಾಣದಲ್ಲಿ ನಿಂದಿಸುತ್ತಿದ್ದಾರೆ.