ಅಮೆರಿಕಾದ ನ್ಯೂಯಾರ್ಕ್ನಲ್ಲಿ ಭಾನುವಾರ ನಡೆದ 2024ರ ಐಸಿಸಿ ಟಿ20 ವಿಶ್ವಕಪ್ನ 19ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನದ ವಿರುದ್ಧ 6 ರನ್ಗಳ ರೋಚಕ ಜಯ ಗಳಿಸಿದೆ.
ಇಂದು ನಸ್ಸೌ ಕೌಂಟಿ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ, ಪಾಕಿಸ್ತಾನದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿ 119 ರನ್ಗಳಿಸುವಷ್ಟರಲ್ಲಿ ಆಲೌಟ್ ಆಗಿತ್ತು. ಆದರೆ ಟೀಮ್ ಇಂಡಿಯಾ ನೀಡಿದ್ದ 120 ರನ್ಗಳ ಅಲ್ಪಮೊತ್ತದ ಗುರಿಯನ್ನು ಬೆನ್ನಟ್ಟುವಲ್ಲಿ ಎಡವಿದ ಬಾಬರ್ ಆಝಂ ನೇತೃತ್ವದ ಪಾಕಿಸ್ತಾನ ತಂಡ, 6 ರನ್ಗಳಿಂದ ಸೋತಿದೆ.
INDIA DEFENDS THEIR LOWEST TOTAL EVER IN A T20I MATCH. 🤯🇮🇳 pic.twitter.com/DfUvg3I6Ad
— Mufaddal Vohra (@mufaddal_vohra) June 9, 2024
ಉತ್ತಮ ಆರಂಭ ಪಡೆದಿದ್ದ ಪಾಕಿಸ್ತಾನವು ಕೊನೆಯ ಐದು ಓವರ್ಗಳಲ್ಲಿ ಎಡವಿದ ಪರಿಣಾಮ, 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 113 ರನ್ಗಳನ್ನಷ್ಟೇ ಗಳಿಸಿ, ಈ ಸೋಲು ಅನುಭವಿಸಿದೆ.
ಟೀಮ್ ಇಂಡಿಯಾ ಪರ ಉತ್ತಮ ಬೌಲಿಂಗ್ ನಡೆಸಿದ ಜಸ್ಪ್ರೀತ್ ಬುಮ್ರಾ ಕೇವಲ 14 ರನ್ ನೀಡಿ ಮೂರು ವಿಕೆಟ್ ಗಳಿಸಿದರು. ಹಾರ್ದಿಕ್ ಪಾಂಡ್ಯಾ 2 ವಿಕೆಟ್ ಗಳಿಸಿದರೆ, ಅಕ್ಷರ್ ಪಟೇಲ್ ಹಾಗೂ ಅರ್ಷ್ದೀಪ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
𝙒𝙃𝘼𝙏. 𝘼. 𝙒𝙄𝙉! 🙌 🙌
Make that 2⃣ in 2⃣! 👌 👌
Simply outstanding from #TeamIndia to seal a superb 6⃣-run win in New York! 👏 👏
Scorecard ▶️ https://t.co/M81mEjp20F#T20WorldCup | #INDvPAK pic.twitter.com/VNoS6QbAei
— BCCI (@BCCI) June 9, 2024
ಪಾಕಿಸ್ತಾನವು ಒಂದು ಹಂತದಲ್ಲಿ 80 ರನ್ ಗಳಿಸಿದ್ದ ವೇಳೆ ಕೇವಲ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಆದರೆ ಕೈಯ್ಯಲ್ಲಿ ವಿಕೆಟ್ ಇದ್ದರೂ ಕೂಡ ಕೊನೆಯ ಘಳಿಗೆಯಲ್ಲಿ ಅದೃಷ್ಟ ಪಾಕಿಸ್ತಾನದ ಕೈ ಹಿಡಿಯದೆ, ಟೀಮ್ ಇಂಡಿಯಾ ಪಾಲಾಯಿತು.
ಬ್ಯಾಟಿಂಗ್ನಲ್ಲಿ ಪಾಕಿಸ್ತಾನದ ಪರ ಮೊಹಮ್ಮದ್ ರಿಝ್ವಾನ್ 31 ರನ್, ಇಮಾದ್ ವಾಸೀಮ್ 15, ಬಾಬರ್ ಆಝಂ 13, ಉಸ್ಮಾನ್ 13, ಫಖರ್ ಝಮಾನ್ 13 ರನ್ ಗಳಿಸಿದರು.
ಪಾಕಿಸ್ತಾನವು ಈ ಸೋಲಿನೊಂದಿಗೆ ಸೂಪರ್ 8ರ ಘಟ್ಟ ಪ್ರವೇಶಿಸುವುದು ಕಷ್ಟವೆನಿಸಿದೆ. ಅಮೆರಿಕ ವಿರುದ್ಧ ಮೊದಲ ಪಂದ್ಯವನ್ನಾಡಿದ್ದ ಪಾಕಿಸ್ತಾನವು ತಂಡವು, ಸೂಪರ್ ಓವರ್ನಲ್ಲಿ ಸೋತಿತ್ತು.
