ಕನಿಷ್ಠ 14 ಕೋಟಿ ಜನರು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಪ್ರಯೋಜನದಿಂದ ವಂಚಿತರಾಗಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಹಾಗೆಯೇ ಮತ್ತೆ ಜನಗಣತಿಯನ್ನು ಯಾವಾಗ ನಡೆಸಲಾಗುತ್ತದೆ ಎಂದು ಪ್ರಧಾನಿಯನ್ನು ಪ್ರಶ್ನಿಸಿದೆ.
ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಆರಂಭಿಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಮತ್ತು ಜನಗಣತಿ ಕುರಿತಾಗಿ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ನೂತನ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
A comprehensive Census essential for socioeconomic development is carried out by the Union Govt every ten years. The last one was to be completed in 2021. But Mr. Modi didnt get it done.
One immediate consequence of not having Census 2021 conducted is that at least 14 crore…
— Jairam Ramesh (@Jairam_Ramesh) June 10, 2024
“ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಅಗತ್ಯವಾದ ಸಮಗ್ರ ಜನಗಣತಿಯನ್ನು ಕೇಂದ್ರ ಸರ್ಕಾರವು ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಸುತ್ತದೆ. ನಮ್ಮ ದೇಶದಲ್ಲಿ ಕೊನೆಯದಾಗಿ 2021ರಲ್ಲಿ ಜನಗಣತಿಯನ್ನು ಪೂರ್ಣಗೊಳಿಸಬೇಕಿತ್ತು. ಆದರೆ ಪ್ರಧಾನಿ ಮೋದಿಯವರು ಜನಗಣತಿಯನ್ನು ಪೂರ್ಣಗೊಳಿಸಿಲ್ಲ” ಎಂದು ಕಾಂಗ್ರೆಸ್ ಮುಖಂಡ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಉದ್ದೇಶಪೂರ್ವಕವಾಗಿ ಬಿಹಾರದ ಜನಗಣತಿಯಲ್ಲಿ ಮುಸ್ಲಿಂ, ಯಾದವರ ಸಂಖ್ಯೆ ಹೆಚ್ಚಳ: ಅಮಿತ್ ಶಾ
“2021ರ ಜನಗಣತಿಯನ್ನು ನಡೆಸದಿರುವ ಕಾರಣದಿಂದಾಗಿ ಕನಿಷ್ಠ 14 ಕೋಟಿ ಭಾರತೀಯರು 2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅಡಿಯಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಎಂದು ಮರು ನಾಮಕರಣಗೊಂಡಿರುವ ಪ್ರಯೋಜನಗಳಿಂದ ವಂಚಿತರಾಗುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
“ಮತ್ತೆ ಜನಗಣತಿಯನ್ನು ಯಾವಾಗ ನಡೆಸಲಾಗುವುದು ಎಂದು ಪ್ರಧಾನಿ ಶೀಘ್ರದಲ್ಲೇ ದೇಶಕ್ಕೆ ತಿಳಿಸಬೇಕಾಗಿದೆ. ದಶವಾರ್ಷಿಕ ಜನಗಣತಿಯು 1951ರಿಂದ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಯ ಡೇಟಾವನ್ನು ಒದಗಿಸಿದೆ. ನವೀಕರಿಸಿದ ಜನಗಣತಿಯು ಒಬಿಸಿ ಎಂದು ವರ್ಗೀಕರಿಸಲಾದ ಸಮುದಾಯಗಳ ಜನಸಂಖ್ಯೆಯ ಡೇಟಾವನ್ನು ಒದಗಿಸಬೇಕು” ಎಂದು ಎಕ್ಸ್ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಜಾತಿ ಜನಗಣತಿ | ಪಕ್ಷಾತೀತವಾಗಿ ಲಿಂಗಾಯತ ಶಾಸಕರ ವಿರೋಧವಿದೆ: ಸಿ ಸಿ ಪಾಟೀಲ್
“ಇದು ನಮ್ಮ ಗಣರಾಜ್ಯದ ಸಂವಿಧಾನದಲ್ಲಿ ಪ್ರತಿಪಾದಿಸಲ್ಪಟ್ಟಿರುವ, ಪ್ರಸ್ತುತ ಮೋದಿ ಮತ್ತು ಚೀರ್‌ಲೀಡರ್‌ಗಳ ಆಕ್ರಮಣಕ್ಕೆ ಒಳಗಾಗಿರುವ ಸಾಮಾಜಿಕ ನ್ಯಾಯಕ್ಕೆ ನಿಜವಾದ ಅರ್ಥವನ್ನು ನೀಡುತ್ತದೆ” ಎಂದು ಹೇಳಿದರು.
ಕಾಂಗ್ರೆಸ್ ತನ್ನ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ರಾಷ್ಟ್ರವ್ಯಾಪಿ ಜಾತಿ ಸಮೀಕ್ಷೆ ನಡೆಸುವುದಾಗಿ ಭರವಸೆ ನೀಡಿತ್ತು.