ಕಾಲೇಜು ಶಿಕ್ಷಣ ಇಲಾಖೆ ಕಚೇರಿಯ ಗೇಟ್ ಬಂದ್ ಮಾಡಿದ್ದು, 2021ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಆಯ್ಕೆಯಾದ ಪ್ರತಿಭಟನಾನಿರತ ಅಭ್ಯರ್ಥಿಗಳು ಒಳ ಹೋಗದಂತೆ ತಡೆದಿದ್ದಾರೆ.
ಸಹಾಯಕ ಪ್ರಾಧ್ಯಾಪಕರ ನೇಮಕಾತಿ-2021ರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶಪ್ರತಿಯ ವಿಳಂಬದಿಂದಾಗಿ ಕಂಗಾಲಾದ ಅಭ್ಯರ್ಥಿಗಳು ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ಎದುರು ಸೋಮವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.
“ನೇಮಕಾತಿ ಆದೇಶಪ್ರತಿಯ ವಿಳಂಬದಿಂದಾಗಿ, ಆದೇಶದ ಗೆಜೆಟ್ ಬೇಡಿಕೆಗಾಗಿ ಮೌನವಾಗಿ ಕಚೇರಿಯ ಹೊರಾಂಗಣದಲ್ಲಿ ಕುಳಿತು ಪ್ರತಿಭಟಿಸುತ್ತಿದ್ದ ಅಭ್ಯರ್ಥಿಗಳು ಒಳಗೆ ಹೋಗದಂತೆ ಗೇಟ್ ಮುಚ್ಚಿದ್ದು, ಕಚೇರಿಯ ಮುಖ್ಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಮುಚ್ಚಲಾಗಿರುವುದಾಗಿ ತಿಳಿದುಬಂದಿದೆ” ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.

“ಸೋಮವಾರದಂದು ನೂರಾರು ಅಭ್ಯರ್ಥಿಗಳ ಧರಣಿಯಿಂದ ಮುಜುಗರಕ್ಕೆ ಒಳಗಾದ ಡಿಸಿಇ ಇಂದು ಈ ನಿರ್ಧಾರವನ್ನು ಕೈಗೊಂಡಿದೆ” ಎಂದು ಟೀಕಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳ ನೇಮಕಾತಿ ವಿಳಂಬ; ಆದೇಶಪ್ರತಿ, ಗೆಜೆಟ್‌ಗಾಗಿ ಅಭ್ಯರ್ಥಿಗಳ ಪಟ್ಟು
ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ಗೇಟ್ ಮುಚ್ಚಿದ್ದರೂ ಕೂಡಾ ನೂರಾರು ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳು ರಸ್ತೆಯ ಫೂಟ್‌ಪಾತ್(ಪಾದಾಚಾರಿ ರಸ್ತೆ) ಮೇಲೆಯೇ ಕುಳಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
