ಅಮೆರಿಕದ ಮಹಿಳೆಯೊಬ್ಬರು 6 ಕೋಟಿ ರೂ. ನೀಡಿ 300 ರೂ.ಮೌಲ್ಯದ ನಕಲಿ ಒಡವೆ ಖರೀದಿಸಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಅಮೆರಿಕದ ಮಹಿಳೆಯಾಗಿರುವ ಚೆರಿಶ್ ಅವರು ಜೈಪುರದ ಜೊಹ್ರಿ ಬಜಾರ್‌ನ ಮಳಿಗೆಯೊಂದರಲ್ಲಿ ಬೆಳ್ಳಿಯಿಂದ ಪಾಲೀಶ್ ಮಾಡಿರುವ ನಕಲಿ ಒಡವೆಯನ್ನು ಖರೀದಿಸಿದ್ದಾರೆ.
ಈ ವರ್ಷದ ಏಪ್ರಿಲ್‌ನಲ್ಲಿ ಅಮೆರಿಕದಲ್ಲಿ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನಕ್ಕಿಟ್ಟಾಗ ಒಡವೆ ನಕಲಿ ಎಂದು ತಿಳಿದುಬಂದಿದೆ. ತಕ್ಷಣ ಭಾರತಕ್ಕೆ ಆಗಮಿಸಿದ ಚರಿಶ್ ಅಂಗಡಿ ಮಾಲೀಕರಾದ ಗೌರವ್ ಸೋನಿ ಅವರನ್ನು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಸಂಪುಟದಲ್ಲಿ ಬಲಾಢ್ಯರು ಮುಂದಕ್ಕೆ, ಹಿಂದುಳಿದವರು ಹಿಂದಕ್ಕೆ
ಅಂಗಡಿ ಮಾಲೀಕ ಆರೋಪವನ್ನು ಅಲ್ಲಗೆಳದ ನಂತರ ಅಮೆರಿಕ ಮಹಿಳೆ ಜೈಪುರದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಯು ಅಮೆರಿಕದ ರಾಯಭಾರ ಕಚೇರಿಯನ್ನು ನೆರವಿಗೆ ಕೋರಿದ್ದು, ನಂತರದಲ್ಲಿ ಜೈಪುರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
2022ರಲ್ಲಿ ಇನ್‌ಸ್ಟಾಗ್ರಾಂ ಮೂಲಕ ಗೌರವ್ ಸೋನಿ ಸಂಪರ್ಕಕ್ಕೆ ಬಂದಿದ್ದು, ನಂತರದಲ್ಲಿ 6 ಕೋಟಿ ನೀಡಿ ಒಡವೆ ಖರೀದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರು ದಾಖಲಾದ ನಂತರ ಗೌರವ್ ಹಾಗೂ ಆತನ ತಂದೆ ರಾಜೇಂದ್ರ ಸೋನಿ ತಲೆ ಮರೆಸಿಕೊಂಡಿದ್ದು, ಇಬ್ಬರನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
