ಒಡಿಶಾ ನೂತನ ಸಿಎಂ ಆಗಿ ಮೋಹನ್ ಚರಣ್ ಮಾಝಿ ಆವರನ್ನು ಬಿಜೆಪಿ ಹೈಕಮಾಂಡ್ ನೇಮಕ ಮಾಡಿದೆ. ಉಪ ಮುಖ್ಯಮಂತ್ರಿಯಾಗಿ ಕೆ ವಿ ಸಿಂಗ್ ದೇವ್ ನೇಮಕವಾಗಿದ್ದಾರೆ.
52 ವರ್ಷದ ಮೋಹನ್ ಚರಣ್ ಮಾಝಿ ಬುಡಕಟ್ಟು ಸಮುದಾಯದ ನಾಯಕರಾಗಿದ್ದು, ಕೊಹನ್‌ಜೋರ್ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅವರು ಒಡಿಶಾದ 15ನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೂನ್ 12 ರಂದು ಸಂಜೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಸಂಪುಟದಲ್ಲಿ ಬಲಾಢ್ಯರು ಮುಂದಕ್ಕೆ, ಹಿಂದುಳಿದವರು ಹಿಂದಕ್ಕೆ
67 ವರ್ಷದ ಕೆವಿ ಸಿಂಗ್ ದೇವ್ ಬೋಲಾಂಗೀರ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಮೇ 13 ರಂದು ಒಟ್ಟು 147 ಕ್ಷೇತ್ರಗಳಿಗೆ ನಡೆದ ವಿದಾನಸಭೆ ಚುನಾವಣೆಯಲ್ಲಿ ಬಿಜೆಪಿ 78 ಸ್ಥಾನಗಳಿಸಿ ಮೊದಲ ಬಾರಿಗೆ ಅಧಿಕಾರ ರಚಿಸಲು ಹೊರಟಿದೆ. 25 ವರ್ಷ ಆಳ್ವಿಕೆ ನಡೆಸಿದ ಬಿಜೆಡಿ 51 ಸ್ಥಾನ ಗಳಿಸಿತ್ತು.
