ಬೀದರ್‌ | ಕನ್ನಡವೆಂಬುದು ಅನ್ನ ಮತ್ತು ಅರಿವಿನ ಮಾರ್ಗ : ಭೀಮಶಂಕರ ಬಿರಾದರ್

Date:

ಕನ್ನಡ ಎಂಬುದು ಏಕಕಾಲದಲ್ಲಿ ಜ್ಞಾನ ಮಾರ್ಗ, ಅರಿವಿನ ಮಾರ್ಗ ಮತ್ತು ಅನ್ನದ ಮಾರ್ಗವಾಗುತ್ತದೆ. ಲೋಕಜ್ಞಾನ ಮೂಡಿಸುವ ಕನ್ನಡ ಸಾಹಿತ್ಯ ಬದುಕಿನ ಅಸ್ತಿತ್ವವನ್ನು ಹಾಗೂ ಸಾಂಸ್ಕೃತಿಕ ಪ್ರಜ್ಞೆಯನ್ನು ರೂಪಿಸುತ್ತದೆ ಎಂದು ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಹೇಳಿದರು.

- Advertisement -

ಬಸವಕಲ್ಯಾಣ ನಗರದ ಎಸ್.ಎಸ್.ಕೆ. ಬಸವೇಶ್ವರ ಪದವಿ ಕಾಲೇಜಿನಲ್ಲಿ ಬೀದರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ʼಕನ್ನಡ ಸಾಹಿತ್ಯ ಮತ್ತು ಉದ್ಯೋಗಾವಕಾಶಗಳುʼ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, “ವಸಾಹತುಶಾಹಿ ಮತ್ತು ಜಾಗತೀಕರಣ ನಮ್ಮ ನೆಲದ ಜ್ಞಾನ ಪರಂಪರೆಯನ್ನು ವಿಸ್ಮೃತಿಗೆ ತಳ್ಳುತಿವೆ. ತಾಯ್ನುಡಿ ಉಳಿದರೆ ಈ ನೆಲಕ್ಕೊಂದು ಅಸ್ತಿತ್ವ ಮತ್ತ ಅಸ್ಮಿತೆ ಇದೆ” ಎಂದು ಕಳವಳ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

“ಕನ್ನಡ ಭಾಷೆಯನ್ನು ಸಮಾಜೋ-ಸಾಂಸ್ಕೃತಿಕ ಮತ್ತು ಆರ್ಥಿಕ ನೆಲೆಯಲ್ಲಿ ಕಾಣುವ ಅಗತ್ಯ ಈ ಕಾಲದ್ದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ, ಕೆ.ಎ.ಎಸ್., ಐಎಎಸ್ ಗಳಲ್ಲಿ ಕನ್ನಡ ಸಾಹಿತ್ಯಕ್ಕೆ ನೀಡಿದ ಮಹತ್ವವನ್ನು ವಿದ್ಯಾರ್ಥಿಗಳು ಅರಿಯಬೇಕಿದೆ. ತಾಯ್ನುಡಿಯನ್ನು ಅನ್ನದ ಹಾಗೂ ಬದುಕಿನ ಮಾತಾಗಿಸುವ ಹೊಣೆಗಾರಿಕೆ ಸರಕಾರದ ಮೇಲಿದೆ. ಕನ್ನಡ ಒಂದು ಕಡೆಗೆ ಅನ್ನಕ್ಕೆ ಮೂಲವಾದರೆ, ಇನ್ನೊಂದು ಕಡೆಗೆ ವೈಚಾರಿಕ, ಬೌದ್ಧಿಕ, ಸಂಶೋಧನಾತ್ಮಕ, ವಿಮರ್ಶಾತ್ಮಕ ನಿಲುವುಗಳಿಗೆ ದಾರಿಯಾಗಿದೆ. ಲೋಕದ ಗ್ರಹಿಕೆಗೆ ಸಾಹಿತ್ಯದ ಅಗತ್ಯವಿದೆ. ವ್ಯಕ್ತಿಯ ಅಸ್ತಿತ್ವ, ಸಾಮಾಜಿಕ ಆಯಾಮ, ಬದುಕಿನ ಆತಂಕಗಳನ್ನು ಅರ್ಥೈಸಿಕೊಳ್ಳಲು ಕನ್ನಡ ಸಾಹಿತ್ಯ ಹಲವು ಒಳನೋಟಗಳು ರೂಪಿಸುತ್ತದೆ” ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಪ್ರೊ. ಆರ್. ಡಿ. ಬಾಲಕಿಲೆ ಅವರು ಮಾತನಾಡಿ, “ಪ್ರತಿಯೊಂದು ಕೋರ್ಸ್‌ಗೂ ಅದರದೇ ಆದ ಅಸ್ತಿತ್ವವಿರುತ್ತದೆ. ಯಾವುದೇ ಕೋರ್ಸುಗಳ ಬಗೆಗೆ ಸಿನಿಕತೆ, ತಾತ್ಸಾರಗಳು ಇರಬಾರದು. ವಿದ್ಯಾರ್ಜನೆಗಾಗಿ
ಆಧುನಿಕ ತಂತ್ರಜ್ಞಾನಗಳ ಬಳಕೆಯಾಗಲಿ. ಬರೀ ಮನರಂಜನೆಯ ಪರಿಕರಗಳಾಗಿ ಮೊಬೈಲ್‌ ಬಳಕೆಯಾಗದಿರಲಿ. ಪ್ರತಿಯೊಂದು ಕೋರ್ಸಿನಲ್ಲಿ ಕೌಶಲ್ಯ ಪಡೆಯುವ ಮೂಲಕ ಜೀವನ ಸುಧಾರಿಸುತ್ತದೆ. ಧನಾತ್ಮಕ ಚಿಂತನೆಗಳು ಬದುಕು ರೂಪಿಸುವ ಶಕ್ತಿ ಪಡೆದಿವೆ” ಎಂದರು.

ಎನ್‌ಎಸ್‌ಎಸ್  ಶಿಬಿರಾಧಿಕಾರಿ ಪ್ರೊ. ವಿಠೋಬಾ ದೊಣ್ಣೆಗೌಡರು ಮಾತನಾಡಿ, “ಕನ್ನಡ ಭಾಷೆಯ ಜೀವಂತಿಕೆ ಇರುವುದೇ ಅದು ತಿಳಿಸಿದ ಮೌಲ್ಯಗಳಲ್ಲಿ. ಕನ್ನಡ ಪರಂಪರೆ ಎಂದಿಗೂ ಆತ್ಮವಿಶ್ವಾಸ, ಆತಂಕಗಳನ್ನು ಎದುರಿಸುವ ಸ್ಥೈರ್ಯ ಬೆಳೆಸಿದೆ. ಭಾಷೆ ಅನ್ನಕೊಡುವ ಗುಣದಿಂದ ಶ್ರೇಷ್ಠತೆ ಪಡೆದಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಆದೇಶ ಪಾಲಿಸದ ಕಲ್ಯಾಣ ಮಂಡಳಿ; ಹೈಕೋರ್ಟ್‌ ಅಸಮಾಧಾನ

ಕಾರ್ಯಕ್ರಮದಲ್ಲಿ ಎಸ್.ಎಸ್.ಕೆ.ಬಿ ಕಾಲೇಜು ಪ್ರಾಚಾರ್ಯ ಡಾ. ಬಸವರಾಜ ಎವಲೆ, ಪ್ರೊ. ಶಾಂತಕುಮಾರ ಬಾಬನಗೋಳ್, ಡಾ. ಸುರೇಶ ಎಚ್. ಆರ್, ಡಾ. ಶಿವಕುಮಾರ ಪಾಟೀಲ, ಶಾಂತಕುಮಾರ ಭುರೆ, ವಿನಾಯಕ ಮುಳ್ಳೂರು, ಲಕ್ಷ್ಮಿಬಾಯಿ ಭಂಕೂರ, ಕಲ್ಯಾಣಪ್ಪ ನಾವದಗಿ ಇದ್ದರು. ನೇತ್ರಾ ನಿರೂಪಿಸಿದರು, ಅಜಯ ಸ್ವಾಗತಿಸಿದರು, ಭಾಗ್ಯಶ್ರೀ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ನಾಳೆ ಜಿಲ್ಲಾ ಮಟ್ಟದ ಕಾರ್ಯಾಗಾರ

ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧತಿಯನ್ನು ಉತ್ತೇಜಿಸುವ ಜೊತೆಗೆ ರೈತರು ಬೆಳೆಯುವ...

ಬೀದರ್‌ | ಪಿಸ್ತೂಲ್‌ ಮಾರಾಟ ಜಾಲ ಪತ್ತೆ ಹಚ್ಚಿದ ಪೊಲೀಸರು: ಮುಖ್ಯ ಆರೋಪಿ ಸೇರಿ ನಾಲ್ವರ ಬಂಧನ

ಅಕ್ರಮವಾಗಿ ಪಿಸ್ತೂಲ್‌ ಹಾಗೂ ಜೀವಂತ ಗುಂಡುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ದಂಧೆಕೋರರನ್ನು...

ಶಿರಸಿ | ರಾಜೇಂದ್ರ ಸಿರ್ಸಿಕರ್‌ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವ

ಶಿರಸಿ: ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರಸಿಯ ರಾಜೇಂದ್ರ...

ಧಾರವಾಡ | ಪೊಲೀಸ್ ಹೆಸರೇಳಿ ರೂ. 15,700 ವಂಚನೆ: ನಾಲ್ಕು ಬೈಕ್‍ಗಳು ನಗದು ವಶ

ಪೊಲೀಸ್ ಹೆಸರೇಳಿ ವ್ಯಕ್ತಿಯೊಬ್ಬರಿಂದ ₹15,700 ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...