ಮೋದಿ ಸರ್ಕಾರದ 28 ಸಚಿವರ ಮೇಲಿದೆ ಕ್ರಿಮಿನಲ್ ಕೇಸ್!

Date:

Advertisements

ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿಯ ಸರ್ಕಾರದ ಇಪ್ಪತ್ತೆಂಟು ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 19 ಮಂದಿ ಕೊಲೆ ಯತ್ನ, ಮಹಿಳೆಯ ಮೇಲೆ ಅಪರಾಧ, ದ್ವೇಷ ಭಾಷಣದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತಿಳಿಸಿದೆ.

ಅತ್ಯಂತ ತೀವ್ರವಾದ ಆರೋಪಗಳನ್ನು ಎದುರಿಸುತ್ತಿರುವ ಸಚಿವರ ಪೈಕಿ ಇಬ್ಬರು ಭಾರತೀಯ ದಂಡ ಸಂಹಿತೆ ಸೆಕ್ಷನ್ 307ರ ಅಡಿಯಲ್ಲಿ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಹೊಂದಿದ್ದಾರೆ.

ಬಂದರು, ಹಡಗು ಮತ್ತು ಜಲಮಾರ್ಗಗಳ ರಾಜ್ಯ ಸಚಿವ ಶಾಂತನು ಠಾಕೂರ್ ಮತ್ತು ಈಶಾನ್ಯ ಪ್ರದೇಶದ ಶಿಕ್ಷಣ ಮತ್ತು ಅಭಿವೃದ್ಧಿ ರಾಜ್ಯ ಸಚಿವ ಸುಕಾಂತ ಮಜುಂದಾರ್ ವಿರುದ್ಧ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿದೆ ಎಂದು ಎಡಿಆರ್ ವರದಿ ಮಾಡಿದೆ.

Advertisements

ಇದನ್ನು ಓದಿದ್ದೀರಾ?  ಮೋದಿ ಸರ್ಕಾರದ ಅತ್ಯಂತ ಶ್ರೀಮಂತ ಸಂಸದ ಚಂದ್ರಶೇಖರ್ ಪೆಮ್ಮಸಾನಿ ಆದಾಯವೆಷ್ಟು?

ಐವರು ಸಚಿವರ ಮೇಲೆ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಿವೆ ಎಂದು ಎಡಿಆರ್ ವರದಿ ಉಲ್ಲೇಖಿಸಿದೆ. ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್, ಶಾಂತನು ಠಾಕೂರ್, ಸುಕಾಂತ ಮಜುಂದಾರ್, ಸುರೇಶ್ ಗೋಪಿ ಮತ್ತು ಜುಯಲ್ ಓರಾಮ್ ವಿರುದ್ಧ ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದ ಪ್ರಕರಣಗಳಿವೆ.


ಸಂಜಯ್ ಕುಮಾರ್ ವಿರುದ್ಧ ಕನಿಷ್ಠ 30 ಗಂಭೀರ ಆರೋಪಗಳಿರುವ 42 ಪ್ರಕರಣಗಳಿದ್ದರೆ, ಶಾಂತನು ಠಾಕೂರ್ ವಿರುದ್ಧ 23 ಪ್ರಕರಣಗಳು ಮತ್ತು 37 ಗಂಭೀರ ಆರೋಪಗಳಿವೆ. ಸಚಿವ ಸುಕಾಂತ ಮಜುಂದಾರ್ ವಿರುದ್ಧ 16 ಪ್ರಕರಣಗಳಿದ್ದು, 30 ಗಂಭೀರ ಆರೋಪಗಳಿವೆ.

ಇದನ್ನು ಓದಿದ್ದೀರಾ?  ಬಿಜೆಪಿ ಸೋಲು | ಅಯೋಧ್ಯೆ ಜನರನ್ನು ದೂಷಿಸುತ್ತಿರುವ ಮೂರ್ಖರು; ರಾಮನನ್ನೇ ಮರೆತ ಮೋದಿ

ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಹೊಂದಿರುವ ಎಂಟು ಸಚಿವರುಗಳನ್ನು ಎಡಿಆರ್ ಗುರುತಿಸಿದೆ. ಎಂಟು ಸಚಿವರು ದ್ವೇಷ ಭಾಷಣದ ಆರೋಪ ಹೊತ್ತಿದ್ದಾರೆ. ಅಮಿತ್ ಶಾ, ಶೋಭಾ ಕರಂದ್ಲಾಜೆ, ಧರ್ಮೇಂದ್ರ ಪ್ರಧಾನ್, ಗಿರಿರಾಜ್ ಸಿಂಗ್, ನಿತ್ಯಾನಂದ ರೈ, ಬಂಡಿ ಸಂಜಯ್ ಕುಮಾರ್, ಶಾಂತನು ಠಾಕೂರ್ ಮತ್ತು ಸುಕಾಂತ ಮಜುಂದಾರ್ ವಿರುದ್ಧ ದ್ವೇಷ ಭಾಷಣದ ಆರೋಪವಿದೆ.

ಇನ್ನು ಮುಖ್ಯವಾಗಿ ಈ ಸಚಿವರುಗಳು ಜಾಮೀನು ರಹಿತ ಅಪರಾಧಗಳು, ಗರಿಷ್ಠ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಯಿರುವ ಅಪರಾಧಗಳು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಅಪರಾಧ, ಕೊಲೆ, ಆಕ್ರಮಣ, ಅತ್ಯಾಚಾರ, ಅಪಹರಣ ಮೊದಲಾದ ಅಪರಾಧಗಳನ್ನು ಹೊಂದಿದ್ದಾರೆ.

71 ಸಚಿವರಲ್ಲಿ 70 ಮಂದಿ ಕೋಟ್ಯಾಧಿಪತಿಗಳು!

ವರದಿಯ ಪ್ರಕಾರ, 71 ಸಚಿವರಲ್ಲಿ 70 ಮಂದಿ ‘ಕೋಟ್ಯಾಧಿಪತಿಗಳು’ ಅಥವಾ ಕನಿಷ್ಠ 1 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಆರು ಮಂದಿಯಲ್ಲಿ ಅತೀ ಹೆಚ್ಚು ಅಥವಾ ನೂರು ಕೋಟಿ ರೂಪಾಯಿಗಿಂತ ಅಧಿಕ ಆಸ್ತಿಯಿದೆ. ಡಾ ಚಂದ್ರಶೇಖರ್ ಪೆಮ್ಮಸಾನಿ 5,705 ಕೋಟಿ ರೂ, ಜ್ಯೋತಿರಾದಿತ್ಯ ಎಂ. ಸಿಂಧಿಯಾ 424 ಕೋಟಿ ರೂ, ಎಚ್.ಡಿ. ಕುಮಾರಸ್ವಾಮಿ 217 ಕೋಟಿ ರೂ, ಅಶ್ವಿನಿ ವೈಷ್ಣವ್ 144 ಕೋಟಿ ರೂ, ರಾವ್ ಇಂದರ್ ಜಿತ್ ಸಿಂಗ್ 121 ಕೋಟಿ ರೂ ಮತ್ತು ಪಿಯೂಷ್ ಗೋಯಲ್ 110 ಕೋಟಿ ರೂಪಾಯಿ ಆಸ್ತಿಯಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X