ತುಮಕೂರು ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ 70ರ ಇಳಿವಯಸ್ಸಿನಲ್ಲಿ ಗುದ್ದಲಿ ಹಿಡಿದು ರೈತರೊಬ್ಬರು ರಾಜಕಾಲುವೆ ಹೂಳು ತೆಗೆದಿದ್ದು, ಇವರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದಿದೆ.
ತುಮಕೂರು ನಗರದ ಹೊರವಲಯದ ಗಣೇಶ ನಗರದ ರೈತ ಲಕ್ಷ್ಮಯ್ಯ ಗುದ್ದಲಿ ಹಿಡಿದು ಹೂಳು ತೆಗೆಯುವ ಕಾರ್ಯ ಮಾಡಿದ್ದಾರೆ. ಕಳೆದ ಮೂರು ವರ್ಷದಿಂದ ಜಿಲ್ಲಾಡಳಿತ ರಾಜಕಾಲುವೆ ಹೂಳು ತೆಗೆದಿರಲಿಲ್ಲ. ಇದರಿಂದ ಭಾರೀ ಮಳೆಗೆ ರಾಜಕಾಲುವೆ ತುಂಬಿ ಬಡಾವಣೆಗೆ ನೀರು ನುಗ್ಗಿತ್ತು. ಇದರಿಂದ ಬೇಸತ್ತು ಸ್ವತಃ ತಾನೇ ಗುದ್ದಲಿ ಹಿಡಿದು ತಮ್ಮ ತೋಟದ ಪಕ್ಕದಲ್ಲಿ ಹಾದು ಹೋಗಿರುವ ರಾಜಕಾಲುವೆ ಸ್ವಚ್ಛತೆ ಮಾಡಿದ್ದಾರೆ. ಕಳೆದ ಎರಡು ದಿನದಿಂದ ಏಕಾಂಗಿಯಾಗಿ ರಾಜಕಾಲುವೆ ಅಗೆಯುತ್ತಿದ್ದಾರೆ. ಮಳೆ ನೀರು ಸರಾಗವಾಗಿ ಹರಿಯಲು ಶ್ರಮಿಸಿದ್ದಾರೆ.