ವಾಹನ ಸವಾರರಿಗೆ ಮತ್ತೆ ಬೆಲೆ ಏರಿಕೆ ಬಿಸಿ; ಪೆಟ್ರೋಲ್, ಡೀಸೆಲ್ ದರ ಹೆಚ್ಚಳ

Date:

Advertisements

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪೆಟ್ರೋಲ್‌ಗೆ ₹3, ಡೀಸೆಲ್‌ಗೆ ₹3.5 ಏರಿಕೆ ಮಾಡಲಾಗಿದ್ದು, ತಕ್ಷಣದಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ಸರ್ಕಾರ ಹೇಳಿದೆ.

ಶನಿವಾರ ಹೊರಡಿಸಲಾದ ಕರ್ನಾಟಕ ರಾಜ್ಯ ಪತ್ರದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಬಗ್ಗೆ ತಿಳಿಸಲಾಗಿದೆ. ಪೆಟ್ರೋಲ್‌ ಮೇಲಿನ ವ್ಯಾಟ್‌ಅನ್ನು ಶೇ.25.92ರಿಂದ ಶೇ.29.84ಕ್ಕೆ ಹೆಚ್ಚಿಸಲಾಗಿದೆ. ಇದೇ ರೀತಿ ಡೀಸೆಲ್‌ ಮೇಲಿನ ವ್ಯಾಟ್‌ಅನ್ನು ಶೇ.14.34ರಿಂದ ಶೇ.18.44ಕ್ಕೆ ಏರಿಕೆ ಮಾಡಲಾಗಿದೆ.

ತೆರಿಗೆ ಹೆಚ್ಚಳ ಹಿನ್ನೆಲೆ, ರಾಜ್ಯದಲ್ಲಿ ಪೆಟ್ರೋಲ್ ಬೆಲೆ ₹3 ಹಾಗೂ ಡೀಸೆಲ್ ಬೆಲೆ ₹3.50 ಹೆಚ್ಚಳ‌ವಾಗಿದೆ. ಈ ಮೂಲಕ, ಪೆಟ್ರೋಲ್‌ ದರದಲ್ಲಿ 3.9% ಹಾಗೂ ಡೀಸೆಲ್ ದರದಲ್ಲಿ 4.1% ಏರಿಕೆಯಾಗಿದೆ.

Advertisements

ತೆರಿಗೆ ಹೆಚ್ಚಳ ಹಿನ್ನೆಲೆ, ರಾಜ್ಯದಲ್ಲಿ ಪೆಟ್ರೋಲ್‌ ದರ ₹100 ದಾಟಲಿದೆ. ಈಗ ಪೆಟ್ರೋಲ್‌ ದರ ₹99.54 ಇದ್ದು, ಮುಂದೆ ₹102ಗೆ ಏರಿಕೆಯಾಗಲಿದೆ. ಡೀಸೆಲ್‌ ದರ ₹85.93 ಇದ್ದು, ₹89.43ಗೆ ತಲುಪಲಿದೆ.

ನೂತನ ದರ ಏರಿಕೆಯಿಂದ ಬೆಂಗಳೂರಿನಲ್ಲಿ ಪೆಟ್ರೋಲ್ ದರ ₹99.84ಯಿಂದ ₹103ಗೆ ಏರಿಕೆಯಾಗಿದೆ. ಇತ್ತ ₹85.93ಯಿದ್ದ ಡೀಸೆಲ್ ಬೆಲೆ ₹89.20ಗೆ ಏರಿಕೆ ಕಂಡಿದೆ.

ತೈಲ ಮಾರುಕಟ್ಟೆ ಕಂಪನಿಗಳು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಹೊಸ ಭಾರತೀಯ ತೈಲ ಬೆಲೆಗಳನ್ನು ಬಿಡುಗಡೆ ಮಾಡುತ್ತವೆ. ಆದರೂ ರಾಜ್ಯ ಸರ್ಕಾರಗಳು ವಿಧಿಸುವ ವ್ಯಾಟ್‌ನಿಂದ ರಾಜ್ಯಗಳಿಗೆ ಅನುಗುಣವಾಗಿ ಇಂಧನ ಬೆಲೆಗಳು ಬದಲಾಗುತ್ತವೆ.

ಪ್ರಸ್ತುತ, ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿವೆ. ಆದಾಗ್ಯೂ, ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಬೆಲೆ ಸ್ಥಿರವಾಗಿದೆ.

ಕಚ್ಚಾ ತೈಲ ಬೆಲೆಗಳಲ್ಲಿನ ಏರಿಳಿತಗಳು ಭಾರತದಲ್ಲಿ ಇಂಧನ ಬೆಲೆಗಳಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತವೆ. ಲೋಕಸಭಾ ಚುನಾವಣೆ ಪೂರ್ವದಲ್ಲಿ, ಅಂದರೆ, ಕಳೆದ ಮಾರ್ಚ್‌ನಲ್ಲಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 2 ರೂಪಾಯಿ ಇಳಿಕೆಯಾಗಿತ್ತು. ಇದೀಗ, ಮತ್ತೆ ಬೆಲೆ ಏರಿಕೆ ಮಾಡಲಾಗಿದೆ.

ಈ ಸುದ್ದಿ ಓದಿದ್ದೀರಾ? ದರ್ಶನ್ ಪ್ರಕರಣ | ವಿಶೇಷ ಪ್ರಾಸಿಕ್ಯೂಟ‌ರ್ ಆಗಿ ಪಿ ಪ್ರಸನ್ನ ಕುಮಾರ್‌ ನೇಮಕ

ಮೆಟ್ರೋ ನಗರಗಳಲ್ಲಿ ಪ್ರಸ್ತುತ ಪೆಟ್ರೋಲ್ಡೀಸೆಲ್ ದರ ಹೇಗಿದೆ?

  • ದೆಹಲಿ: ಪೆಟ್ರೋಲ್ ಲೀಟರ್‌ಗೆ ರೂ 94.76 ಮತ್ತು ಡೀಸೆಲ್ 87.66.
  • ಮುಂಬೈ: ಪೆಟ್ರೋಲ್ 104.19 ರೂ ಮತ್ತು ಡೀಸೆಲ್ 92.13 ರೂ
  • ಬೆಂಗಳೂರು: ಲೀಟರ್ ಪೆಟ್ರೋಲ್ 99.82 ಮತ್ತು ಡೀಸೆಲ್ 85.92 ರೂ
  • ಚೆನ್ನೈ: ಪೆಟ್ರೋಲ್ ಬೆಲೆ 100.73 ರೂ ಮತ್ತು ಡೀಸೆಲ್ ಬೆಲೆ 92.32 ರೂ.
  • ಕೋಲ್ಕತ್ತಾ: ಪೆಟ್ರೋಲ್ ರೂಪಾಯಿ 103.93 ಮತ್ತು ಡೀಸೆಲ್ 90.74 ರೂಪಾಯಿ.

ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಏರಿಕೆ ಮಾಡಿರುವುದರಿಂದ ತೈಲ ದರದಲ್ಲಿ ಹೆಚ್ಚಳವಾಗಿದೆ. ಸದ್ಯದ ಬೆಲೆ ಏರಿಕೆಯಿಂದ ಅಗತ್ಯವಸ್ತುಗಳ ಬೆಲೆಯೂ ಏರಿಕೆಯಾಗಲಿದೆ. ಇದೀಗ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ನೇರವಾಗಿ ಜನಸಾಮಾನ್ಯರಿಗೆ ತಟ್ಟಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X