ರಾಜ್ಯ ರಾಜಧಾನಿ ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ 15 ದಿನದ ಎಳೆ ಮಗುವಿಗೆ ವೈದ್ಯರು ‘ಹಾರ್ಟ್ ಆಪರೇಷನ್’ (ಹೃದಯ ಶಸ್ತ್ರಚಿಕಿತ್ಸೆ) ಮಾಡಿದ್ದು, ಚಿಕಿತ್ಸೆ ಯಶಸ್ವಿಯಾಗಿದೆ.
15 ದಿನದ ಎಳೆಯ ಕಂದ ಹೃದಯ ಸಮಸ್ಯೆಯಿಂದ ಬಳಲುತ್ತಿತ್ತು. ಈ ಹಿನ್ನೆಲೆ, ಪೋಷಕರು ಮಗುವನ್ನು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಆರು ತಿಂಗಳಿಗೆ ಮಗುವಿನ ಜನನವಾಗಿತ್ತು. ಅಲ್ಲದೇ, ಮಗುವಿನ ಹೃದಯದಲ್ಲಿ ರಂಧ್ರವಿದ್ದ ಕಾರಣ ಉಸಿರಾಟಕ್ಕೆ ತೊಂದರೆಯಾಗಿತ್ತು. ಮಗುವನ್ನು ಹುಟ್ಟಿದಾಗಿನಿಂದಲೇ ವೆಂಟಿಲೇಶನ್‌ನಲ್ಲಿ ಇರಿಸಲಾಗಿತ್ತು. ಮಗು ಬದುಕುವುದೇ ಕಷ್ಟಕರ ಎಂದು ಪೋಷಕರು ಹೆದರಿದ್ದರು. ಮಗುವನ್ನು ಉಳಿಸಿಕೊಳ್ಳಲು ಪೋಷಕರು ಹಲವು ಆಸ್ಪತ್ರೆಗಳಿಗೆ ಸುತ್ತಾಟ ನಡೆಸಿ, ಕೊನೆಗೆ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಸದ್ಯ, ಮಗುವಿನ ಹೃದಯ ಸಮಸ್ಯೆಗೆ ಪಿಡಿಎ ಲೈಗೇಷನ್ ಸರ್ಜರಿ ಮಾಡಿರುವ ವೈದ್ಯರು, ಮಗುವಿನ ಜೀವ ಉಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದರ್ಶನ್ ಪ್ರಕರಣ | ತನಿಖಾಧಿಕಾರಿಯಾಗಿ ಗಿರೀಶ್ ನಾಯ್ಕ್ ಮರು ನೇಮಕ
“ಮಗುವಿನ ಸಮಸ್ಯೆ ಬಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಕೇಳಿದಾಗ ₹30 ಲಕ್ಷ ಖರ್ಚಾಗುತ್ತದೆ ಎಂದಿದ್ದರು. ಈಗ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಕೇವಲ ₹7 ಸಾವಿರಕ್ಕೆ ಸರ್ಜರಿ ಮಾಡಿದ್ದಾರೆ. ಈ ಹಿಂದೆ ಸರ್ಕಾರಿ ಆಸ್ಪತ್ರೆ ಮೇಲೆ ಅಷ್ಟೊಂದು ನಂಬಿಕೆ ಇರಲಿಲ್ಲ. ಇದೀಗ, ತುಂಬಾ ಖುಷಿಯಾಯಿತು. ಮಗುವನ್ನ ಆಸ್ಪತ್ರೆಯ ಕರೆದುಕೊಂಡು ಬಂದಾಗ 800 ಗ್ರಾಂ ಇತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಬಡವರ ಜೀವ ಉಳಿಯುತ್ತೆ ಎನ್ನುವ ನಂಬಿಕೆ ಜಾಸ್ತಿಯಾಗಿದೆ” ಎಂದು ಮಗುವಿನ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.