ದಲಿತ ಮುಖಂಡರ ವಿರುದ್ಧ ದಾಖಲಿಸಿರುವ ದೂರುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಗದಗ ಜಿಲ್ಲಾ ಘಟಕವು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ ವಾದ) ಗದಗ ಜಿಲ್ಲಾ ಘಟಕ ಪ್ರಧಾನ ಸಂಚಾಲಕ ಬಾಲರಾಜ ಅರಬರ ಮಾತನಾಡಿ, “ದಂಡ ಪ್ರಕ್ರಿಯೆ ಸಂಹಿತೆ ಕಲಂ 107ನ್ನು ಗದಗ ಶಹರ ಸಿಪಿಐ ಹಾಗೂ ಪಿಎಸ್‌ಐ ಇವರುಗಳು ದಲಿತ ಮುಖಂಡರುಗಳ ವಿರುದ್ಧ ಜೂನ್ 15ರಂದು ದೂರು ದಾಖಲಿಸಿ ದಲಿತ ದೌರ್ಜನ್ಯ ಎಸಗಿದ್ದಾರೆ. ಕಾರಣ ತೋಂಟದಾರ್ಯ ಮಠ ಗದಗ ಈ ಮಠದ ಜಾಗದಲ್ಲಿ ಟೆಂಡರ್ ಮುಖಾಂತರ ವ್ಯಾಪಾರಸ್ಥರಿಗೆ ಸ್ಥಳವನ್ನು ಒದಗಿಸಿದ್ದಾರೆ” ಎಂದು ಆರೋಪಿಸಿದರು.
“ದಲಿತ ಮುಖಂಡರು ಸೇರಿ ಮಳೆ ಬಂದು ವ್ಯಾಪಾರಸ್ಥರಿಗೆ ತೊಂದರೆಯಾಗಿ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದಾರೆ. ವ್ಯಾಪಾರಸ್ಥರಲ್ಲಿ ಅನೇಕ ದಲಿತ ಕುಟುಂಬಸ್ಥರು. ಅಲ್ಪಸಂಖ್ಯಾತ ಹಾಗೂ ಕಡುಬಡವರು ಇರುವುದರಿಂದ ದಲಿತ ಮುಖಂಡರು ಅವರ ನಷ್ಟದ ಕುರಿತು ಇನ್ನೂ ನಾಲ್ಕು ದಿನ ವ್ಯಾಪಾರ ಮಾಡಲು ಮಂಡಳಿಯವರಿಗೂ ಹಾಗೂ ಪೊಲೀಸ್ ಇಲಾಖೆಯವರಿಗೂ ನಮ್ರತೆಯಿಂದ ವಿನಂತಿಸಿಕೊಂಡಿದ್ದಾರೆ. ಇದೇ ಕಾರಣ ಇಟ್ಟುಕೊಂಡು ಪೊಲೀಸ್ ಇಲಾಖೆಯವರು ದಲಿತರ ವಿರುದ್ಧ ದೂರು ದಾಖಲಿಸಿ ಒತ್ತಾಯಪೂರ್ವಕವಾಗಿ ಪೊಲೀಸ್ ನೋಟಿಸ್‌ಗೆ ಸಹಿಗಳನ್ನು ಮಾಡಿಸಿಕೊಂಡಿದ್ದಾರೆ ಮತ್ತು ದಲಿತ ಚಳುವಳಿಯನ್ನು ಮೊಟಕುಗೊಳಿಸಿ ದಲಿತ ಮುಖಂಡರು ಯಾವುದೇ ರೀತಿ ಅನ್ಯಾಯದ ವಿರುದ್ಧ ಧ್ವನಿ ಎತ್ತದಂತೆ ಹುನ್ನಾರ ನಡೆಸಿದ್ದಾರೆ ಹಾಗೂ ಕೋಮುವಾದಿ ಸಂಘಟನೆಗಳೊಂದಿಗೆ ದಲಿತರಿಗೆ, ಅಲ್ಪಸಂಖ್ಯಾತರಿಗೆ, ಬಡವರಿಗೆ ಅನ್ಯಾಯ ಮಾಡಿ. ಪೊಲೀಸ್ ಇಲಾಖೆಯವರು ದಲಿತರ ಮೇಲೆ ಪದೇಪದೆ ದೌರ್ಜನ್ಯ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಪೆಟ್ರೋಲ್ ಡಿಸೇಲ್ ದರ ಹೆಚ್ಚಳ; ದರ ಇಳಿಕೆಗೆ ಡಿವೈಎಫ್‌ಐ ಆಗ್ರಹ
ಪೊಲೀಸ್ ಇಲಾಖೆಯೇ ದಲಿತ ಮುಖಂಡರ ವಿರುದ್ಧ ದಾಖಲಿಸಿದ ದೂರನ್ನು ಹಿಂಪಡೆಯಬೇಕು. ಒಂದು ವೇಳೆ ಹಿಂಪಡೆಯದೇ ಇದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತ ಹಾಗೂ ಅಲ್ಪಸಂಖ್ಯಾತರ ಸಂಘಟನೆಯ ಮುಖಾಂತರವಾಗಿ ಹೋರಾಟ ಮಾಡುತ್ತೇವೆ” ಎಂದು ಗದಗ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದಾರೆ.
ಈ ಸಂದರ್ಭದಲ್ಲಿ ವಿಜಯ ಕಲ್ಮನಿ, ಗಣೇಶ ಹುಬ್ಬಳ್ಳಿ, ನಾರಾಯಣ ದೊಡ್ಡಮನಿ ಸೇರಿದಂತೆ ಇನ್ನೂ ಮುಂತಾದವರು ಇದ್ದರು.
