ಫಿನ್‌ಲ್ಯಾಂಡ್‌ನ ತುರ್ಕುನಲ್ಲಿ ಮಂಗಳವಾರ ನಡೆದ ಪಾವೊ ನೂರ್ಮಿ ಅಥ್ಲೆಟಿಕ್ಸ್ ಕೂಟದಲ್ಲಿ ವಿಶ್ವ ಚಾಂಪಿಯನ್ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ತಮ್ಮ ಚೊಚ್ಚಲ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಈ ಹಿಂದೆ 2022ರಲ್ಲಿ ಪಾವೊ ನೂರ್ಮಿ ಅಥ್ಲೆಟಿಕ್ಸ್‌ನಲ್ಲಿ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದರು. ಆದರೆ ಈ ವರ್ಷ ನಡೆದ ಭಾರೀ ಪೈಪೋಟಿಯ ಸ್ಪರ್ಧೆಯಲ್ಲಿ ಕೊನೆಯಲ್ಲಿ 85.97 ಮೀಟರ್ ಎಸೆತದ ಮೂಲಕ ನೀರಜ್ ಚೋಪ್ರಾ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ.
ಆರಂಭದಲ್ಲಿ 83. 62 ಮೀ ಎಸೆದ ನೀರಜ್ ಮುನ್ನಡೆಯಲ್ಲಿದ್ದರು. ಆದರೆ ಎರಡನೇ ಸುತ್ತಿನ ನಂತರ ಫಿನ್‌ಲ್ಯಾಂಡ್‌ನ ಆಲಿವರ್ ಹೆಲಾಂಡರ್ 83.96 ಮೀಟರ್ ಎಸೆದು ಮೊದಲ ಸ್ಥಾನಕ್ಕೆ ಏರಿದ್ದರು.
ಇದನ್ನು ಓದಿದ್ದೀರಾ? ಏಷ್ಯನ್ ಗೇಮ್ಸ್ | ಜಾವೆಲಿನ್‌ನಲ್ಲಿ ಚಿನ್ನಕ್ಕೆ ಗುರಿ ಇಟ್ಟ ನೀರಜ್ ಚೋಪ್ರಾ, ಕಿಶೋರ್ ಜೆನಾಗೆ ಬೆಳ್ಳಿ
ಮೂರನೇ ಪ್ರಯತ್ನದಲ್ಲಿ 85.97 ಮೀಟರ್ ಎಸೆಯುವ ಮೂಲಕ ಚೋಪ್ರಾ ಮುನ್ನಡೆ ಸಾಧಿಸಿದ್ದಾರೆ. ಮೂರನೇ ಪ್ರಯತ್ನದಲ್ಲಿ ಇತರ ಏಳು ಸ್ಪರ್ಧಿಗಳು ಕೂಡಾ ಚೋಪ್ರಾರನ್ನು ಹಿಂದಿಕ್ಕುವುದರಲ್ಲಿ ವಿಫಲರಾದರು.
Neeraj Chopra strikes gold again!
With a stunning throw of 85.97m, he clinches victory at the Paavo Nurmi Games 2024 in Finland.
Congratulations Champ✌️ pic.twitter.com/Fnq34bZRxV
— Anurag Thakur (@ianuragthakur) June 18, 2024
ಇನ್ನು 84.19 ಮೀಟರ್ ಎಸೆದ ಟೋನಿ ಕೆರಾನೆನ್ ಬೆಳ್ಳಿ ಪದಕ ಪಡೆದಿದ್ದರೆ, 2022ರಲ್ಲಿ ಚಿನ್ನದ ಪದಕಕ್ಕೆ ತನ್ನ ಕೊರಳೊಡ್ಡಿದ್ದ ಒಲಿವರ್ ಹೆಲಾಂಡರ್ 83.96 ಮೀಟರ್ ಎಸೆದು ಮೂರನೇ ಸ್ಥಾನ ಗಳಿಸಿದ್ದಾರೆ.
ಪಾವೊ ನೂರ್ಮಿ ಗೇಮ್ಸ್ ನಂತರ ಮುಂದಿನ ಜುಲೈ 7ರಂದು ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ ಕಾಣಿಸಿಕೊಳ್ಳಲಿದ್ದಾರೆ.