ಅಸ್ಸಾಂ ನಲ್ಲಿ ಮೇ 28ರಿಂದ ಉಂಟಾದ ಪ್ರವಾಹ, ಮಳೆ ಹಾಗೂ ಚಂಡ ಮಾರುತದಿಂದ ಇಲ್ಲಿಯವರೆಗೂ 26 ಮಂದಿ ಮೃತಪಟ್ಟಿದ್ದಾರೆ. 15 ಜಿಲ್ಲೆಗಳ 1.61 ಲಕ್ಷ ಮಂದಿಗೂ ಹೆಚ್ಚು ಮಂದಿಗೆ ತೊಂದರೆಯುಂಟಾಗಿದ್ದು, ಪ್ರವಾಹದ ಭೀಕರತೆಗೆ ಹಲವು ಪ್ರದೇಶಗಳು ಮುಳುಗಡೆಯಾಗಿವೆ ಎಂದು ಸರ್ಕಾರಿ ವರದಿಗಳು ತಿಳಿಸಿವೆ.
ಕರೀಂಗಂಜ್ ಅತ್ಯಂತ ಹೆಚ್ಚು ಅನಾಹುತವಾಗಿರುವ ಜಿಲ್ಲೆಯಾಗಿದ್ದು, ಪ್ರವಾಹದ ನೀರಿನಿಂದಾಗಿ ಈ ಪ್ರದೇಶದಲ್ಲಿ ಸಾವಿರಾರು ಮಂದಿಗೆ ತೊಂದರೆಯಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣ ಅಧಿಕಾರಿಗಳು ತಿಳಿಸಿದ್ದಾರೆ.
1378.64 ಹೆಕ್ಟೇರ್ ಕೃಷಿ ಭೂಮಿ ಹಾಳಾಗಿದ್ದು, 54, 877 ಪ್ರಾಣಿಗಳು ತೊಂದರೆಗೊಳಗಾಗಿವೆ. ಒಟ್ಟಾರೆ ಅಪಾಯದ ಸ್ಥಿತಿಯಲ್ಲಿದ್ದ 5114 ಮಂದಿಯನ್ನು 43 ಪರಿಹಾರ ಶಿಬಿರಗಳಿಗೆ ಕರೆದೊಯ್ಯಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇವದಾರಿ ಗಣಿಗಾರಿಕೆಯ ಹಿಂದೆ ಇರುವುದು ಅಭಿವೃದ್ಧಿಯೋ, ಅಧ್ವಾನವೋ?
ಪ್ರಸ್ತುತ 24 ಕಂದಾಯ ವೃತ್ತಗಳ 470 ಗ್ರಾಮಗಳು ಮುಳುಗಿದ್ದು, ಕಾಂಪುರ್‌ನ ಕೋಪಿಲಿ ನದಿ ಅಪಾಯದ ಮಟ್ಟವನ್ನು ತಲುಪಿದೆ.
ಹಲವು ಜಿಲ್ಲೆಗಳಲ್ಲಿ ಪ್ರವಾಹದಿಂದ ಒಡ್ಡುಗಳು, ರಸ್ತೆಗಳು, ಸೇತುವೆಗಳು ಹಾಗೂ ಇತರ ಮೂಲಸೌಕರ್ಯಗಳು ಹಾನಿಗೊಳಗಾಗಿವೆ.
ಬಿಸ್ವಂತ್ ಲಕೀಮ್‌ಪುರ, ನಲ್‌ಬರಿ, ತಪುಲ್‌ಪುರ, ಉದಲ್‌ಗುರಿ ದಾರಂಗ್, ಹೈಲ್‌ಕಂಡಿ, ಕರೀಂಗಂಜ್, ಗೋಲಾಪಾರ, ನಗೋನ್, ಚಿರಾಂಗ್ ಹಾಗೂ ಕೋಕ್ರಾಜಾರ್ ಹಾನಿಗೊಳಗಾದ ಜಿಲ್ಲೆಗಳು.
