ಮೆಕ್ಕಾಗೆ ಈ ವರ್ಷ ಹಜ್ ಯಾತ್ರೆಗೆ ತೆರಳಿದ್ದ 550 ಯಾರ್ತಾರ್ಥಿಗಳು ತೀವ್ರ ಬಿಸಿಲಾಘಾತದಿಂದ ಮೃತಪಟ್ಟಿದ್ದಾರೆ ಎಂದು ರಾಯಭಾರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರಲ್ಲಿ 323 ಮಂದಿ ಈಜಿಫ್ಟ್‌ನವರಾಗಿದ್ದು, ಇಬ್ಬರು ಅರಬ್ ರಾಯಭಾರಿ ಕಚೇರಿಯ ಅಧಿಕಾರಿಗಳು ಮೃತಪಟ್ಟ ಆಯಾ ದೇಶದ ಸಂತ್ರಸ್ತರೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ.
“ಈಜಿಫ್ಟ್ ಪ್ರಜೆಗಳು ಬಿಸಿಲಿನ ಆಘಾತದಿಂದ ಮೃತಪಟ್ಟಿದ್ದು, ಜನಸಂದಣಿಯಿಂದ ಗಾಯಗೊಂಡ ಒಬ್ಬರು ಚೇತರಿಕೊಂಡಿದ್ದಾರೆ. ಮೃತಪಟ್ಟವರ ಬಗೆಗಿನ ಒಟ್ಟಾರೆ ವಿವರಗಳು ಮೆಕ್ಕಾ ಆಸ್ಪತ್ರೆಯಿಂದ ಪಡೆದುಕೊಳ್ಳಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
60 ಮಂದಿ ಜೋರ್ಡಾನ್ ದೇಶದ ಪ್ರಜೆಗಳು ಬಿಸಿಲ ಝಳದಿಂದ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇವದಾರಿ ಗಣಿಗಾರಿಕೆಯ ಹಿಂದೆ ಇರುವುದು ಅಭಿವೃದ್ಧಿಯೋ, ಅಧ್ವಾನವೋ?
ಮೆಕ್ಕಾದಲ್ಲಿ ಕಳೆದ ಒಂದು ದಶಕದಿಂದ ಉಂಟಾಗುತ್ತಿರುವ ತಾಪಮಾನ ಬದಲಾವಣೆಯು ಯಾತ್ರಿಕರ ಮೇಲೂ ಪರಿಣಾಮ ಬೀರುತ್ತಿದ್ದು,ಮಂಗಳವಾರ ತಾಪಮಾನ 51.8 ಡಿಗ್ರಿ ಸೆಲ್ಷಿಯಸ್ ಇತ್ತು ಎಂದು ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ.
ಬಿಸಿಲ ಶಾಖದಿಂದ ಕಳೆದ ವರ್ಷ 240 ಯಾತ್ರಿಕರು ಮೃತಪಟ್ಟಿದ್ದು, ಇದರಲ್ಲಿ ಬಹುತೇಕರು ಇಂಡೋನೇಷ್ಯಾದವರಾಗಿದ್ದರು.
ಮೆಕ್ಕಾಗೆ ಬರುವ ಯಾತ್ರಿಕರಿಗೆ ಕೊಡೆಗಳು ಬಳಕೆ, ಅತ್ಯಂತ ಹೆಚ್ಚು ನೀರು ಸೇವಿಸುವುದರ ಜೊತೆ ಬಿಸಿಲಿನ ಅವಧಿಯಲ್ಲಿ ದೂರವಿರುವಂತೆ ಸೌದಿ ಅಧಿಕಾರಿಗಳು ಸಲಹೆಗಳನ್ನು ನೀಡುತ್ತಿದ್ದಾರೆ.
ಮುಸ್ಲಿಂ ಸಮುದಾಯದ ಪ್ರವಿತ್ರ ಧಾರ್ಮಿಕ ಸ್ಥಳವಾದ ಮೆಕ್ಕಾಕ್ಕೆ ಈ ವರ್ಷ 18 ಲಕ್ಷ ಯಾರ್ತಾರ್ಥಿಗಳು ಭೇಟಿ ಕೊಟ್ಟಿದ್ದು, ಇದರಲ್ಲಿ 16 ಲಕ್ಷ ವಿದೇಶದವರು ಎಂದು ಸೌದಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
