ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆಯ ರಸದೌತಣ. ಸಿಕ್ಸರ್, ಬೌಂಡರಿ ಬಾರಿಸುವುದರಲ್ಲಿ ತಾವು ಪುರುಷರನ್ನು ಮೀರಿಸುತ್ತೇವೆ ಎಂಬುದನ್ನು ಮಹಿಳಾ ಬ್ಯಾಟರುಗಳು ತೋರಿಸಿಕೊಟ್ಟರು. ದಕ್ಷಿಣ ಆಫ್ರಿಕಾ ವಿರುದ್ಧದ ರೋಚಕ ಹಣಾಹಣಿಯ ಪಂದ್ಯದಲ್ಲಿ ಭಾರತದ ವನಿತೆಯರು 4 ರನ್‌ಗಳ ಅಂತರದಲ್ಲಿ ಜಯಗಳಿಸಿದರು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ 2-0 ಮೂಲಕ ಗೆಲುವು ದಾಖಲಿಸಿತು.
ಒಂದೇ ಪಂದ್ಯದಲ್ಲಿ ತಲಾ ಎರಡು ಶತಕಗಳಂತೆ ಉಭಯ ತಂಡಗಳಿಂದ ನಾಲ್ಕು ಶತಕಗಳು ದಾಖಲಾಯಿತು. ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ ಶತಕದ ಮೂಲಕ ಅಬ್ಬರಿಸಿದರೆ, ಪಂದ್ಯ ಸೋತರೂ ದಕ್ಷಿಣ ಆಫ್ರಿಕಾ ಪರ ನಾಯಕಿ ಲೌರಾ ವೋಲ್ವರ್ಡ್ಸ್ ಹಾಗೂ ಮರಿಜಾನ್ನೆ ಕಪ್ ಸ್ಫೋಟಕ ಶತಕ ಬಾರಿಸಿ ಪ್ರೇಕ್ಷಕರ ಗಮನಸೆಳೆದರು.
𝙒𝙃𝘼𝙏. 𝘼. 𝙁𝙄𝙉𝙄𝙎𝙃! 👌 👌
Absolute thriller in Bengaluru! 🔥@Vastrakarp25 & #TeamIndia hold their nerve to overcome the spirited South African side to take an unassailable lead in the ODI series! 👏 👏
Scorecard ▶️ https://t.co/j8UQuA5BhS
#INDvSA | @IDFCFIRSTBank pic.twitter.com/aIV3CkthU5
— BCCI Women (@BCCIWomen) June 19, 2024
ಭಾರತದ ವನಿತೆಯರು ನೀಡಿದ 326 ರನ್‌ಗಳ ಸವಾಲನ್ನು ಬೆನ್ನಟ್ಟಿದ ದಕ್ಷಿಣ ಅಫ್ರಿಕಾ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 321 ರನ್‌ಗಳಿಸಿ ಗೆಲುವನ್ನು ಕೊನೆಯ ಕ್ಷಣದಲ್ಲಿ ಕೈಚೆಲ್ಲಿತು.
ದಕ್ಷಿಣ ಆಫ್ರಿಕಾ ಪರ ನಾಯಕಿ ಲೌರಾ ವೋಲ್ವರ್ಡ್ಸ್ 135 ಚೆಂಡುಗಳಲ್ಲಿ 12 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 135 ಬಾರಿಸಿದರೆ, ಮಧ್ಯಮ ಕ್ರಮಾಂಕದ ಆಟಗಾರ್ತಿ ಮರಿಜಾನ್ನೆ ಕಪ್ 94 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್ ಸಿಡಿಸಿ 114 ರನ್ ಸ್ಫೋಟಿಸಿದರು.
ಈ ಸುದ್ದಿ ಓದಿದ್ದೀರಾ? ಗೌತಮ್ ಗಂಭೀರ್ ಬೇಡಿಕೆಗಳಿಗೆ ಬಿಸಿಸಿಐ ಒಪ್ಪಿಗೆ: ಟೀಂ ಇಂಡಿಯಾ ಕೋಚ್ ಸ್ಥಾನ ಬಹುತೇಕ ಖಚಿತ
ಕೊನೆಯ ಓವರ್‌ನಲ್ಲಿ ಬೌಲಿಂಗ್ ಮಾಡಿ 2 ವಿಕೆಟ್ ಕಬಳಿಸಿದ ಪೂಜಾ ವಸ್ತ್ರಾಕರ್ ಗೆಲುವಿನ ರೂವಾರಿಯಾದರು. ಇನ್ನುಳಿದಂತೆ ದೀಪ್ತಿ ಶರ್ಮಾ 56/2 ಹಾಗೂ ಸ್ಮೃತಿ ಮಂದಾನಾ ಹಾಗೂ ಅರುಂದತಿ ರೆಡ್ಡಿ ತಲಾ ಒಂದು ವಿಕೆಟ್ ಕಿತ್ತರು.
ಸ್ಮೃತಿ ಮಂದಾನ ದಾಖಲೆ
ಭಾರತ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಮಂದಾನ ಜೊತೆಗೆ ನಾಯಕಿ ಹರ್ಮನ್ ಪ್ರೀತ್ ಕೌರ್ ಕೂಡ ಭರ್ಜರಿ ಶತಕ ಸಿಡಿಸಿದರು. ಕೌರ್ 88 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಿತ ಅಜೇಯ 103 ರನ್‌ಗಳಿಸಿದರು. ಇವರಿಗೆ ಜೊತೆ ನೀಡಿದ ರಿಚಾ ಘೋಷ್ ಕೇವಲ 13 ಎಸೆತಗಳಲ್ಲಿ 3 ಬೌಂಡರಿ ಒಂದು ಸಿಕ್ಸರ್ ಸಹಿತ ಅಜೇಯ 25, ಶೆಫಾಲಿ ವರ್ಮಾ 20, ಹೇಮಲತಾ 24 ರನ್ ಬಾರಿಸಿದರು. ಅಂತಿಮವಾಗಿ ಭಾರತ ತಂಡ 50 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 325 ರನ್ ಗಳಿಸಿ ಸವಾಲಿನ ಗುರಿ ನೀಡಿತು.
WHAT A MATCH!
Hundreds from Mandhana and Kaur trump those from Wolvaardt and Kapp as India edge a thriller in Bengaluru! #INDvSA pic.twitter.com/rlaA1hZf2O
— ESPNcricinfo (@ESPNcricinfo) June 19, 2024
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೊದಲ ಎರಡು ಪಂದ್ಯಗಳಲ್ಲೂ ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಸ್ಮೃತಿ ಮಂದಾನ ಸತತ ಎರಡು ಏಕದಿನ ಶತಕ ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಆ ಮೂಲಕ ಭಾರತ ಮಹಿಳಾ ತಂಡದ ಪರ ಅತ್ಯಧಿಕ ಶತಕ ಸಿಡಿಸಿದವರ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರಸ್ಥಾನ ಪಡೆದಿದ್ದಾರೆ.
ಸತತ 2 ಶತಕ ಸಿಡಿಸಿದ ದಾಖಲೆ ಜೊತೆಗೆ ದ್ವಿಪಕ್ಷೀಯ ಸರಣಿಯೊಂದರಲ್ಲಿ 2 ಶತಕ ಸಿಡಿಸಿದ ಮೊದಲ ಭಾರತ ಮಹಿಳಾ ಕ್ರಿಕೆಟರ್ ಎಂಬ ದಾಖಲೆಯನ್ನ ಕೂಡ ಮಂದಾನ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅಲ್ಲದೆ 136 ಮಂದಾನರ ಏಕದಿನ ಕ್ರಿಕೆಟ್‌ನ ಗರಿಷ್ಠ ಸ್ಕೋರ್ ಆಗಿದೆ.
ಎರಡನೇ ಏಕದಿನ ಪಂದ್ಯದಲ್ಲಿ 120 ಎಸೆತಗಳಲ್ಲಿ 18 ಬೌಂಡರಿ, 2 ಸಿಕ್ಸರ್ ಸಹಿತ 136 ರನ್ ಗಳಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ 127 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಸಹಿತ 117 ರನ್ ಗಳಿಸಿದ್ದರು
ದಕ್ಷಿಣ ಆಫ್ರಿಕಾ ಬೌಲರ್‌ಗಳಿಗೆ ಬೆವರಿಳಿಸಿದ ಸ್ಮೃತಿ, ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 7 ಶತಕ ಪೂರೈಸಿ ಮಿಥಾಲಿ ರಾಜ್ ದಾಖಲೆ ಸರಿಗಟ್ಟಿದ್ದಾರೆ. ಮಿಥಾಲಿ ಕೂಡ 7 ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ.
ಮಿಥಾಲಿ 232 ಪಂದ್ಯಗಳಲ್ಲಿ ಏಳು ಶತಕ ಸಿಡಿಸಿದ್ದರು, ಆದರೆ ಸ್ಮೃತಿ 83 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಹೆಚ್ಚು ಶತಕ ಸಿಡಿಸಿದ ದಾಖಲೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ಮೆಗ್ ಲ್ಯಾನಿಂಗ್ ಹೆಸರಿನಲ್ಲಿದೆ. ಲ್ಯಾನಿಂಗ್ 103 ಪಂದ್ಯಗಳಲ್ಲಿ 15 ಶತಕ ಸಿಡಿಸಿದ್ದಾರೆ.
