ವಿಶ್ವವಿದ್ಯಾಲಯ ಅನುದಾನ ಆಯೋಗ – ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಪರೀಕ್ಷೆಯನ್ನು ರದ್ದುಗೊಳಿಸಿದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡರು, “ಅಜೈವಿಕ ಪ್ರಧಾನಿ ಪೇಪರ್ ಲೀಕ್ ಬಗ್ಗೆ ಚರ್ಚೆ ನಡೆಸೋದು ಯಾವಾಗ” ಎಂದು ಲೇವಡಿ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಪ್ರತಿ ವರ್ಷ ಅಜೈವಿಕ ಪ್ರಧಾನಮಂತ್ರಿ ಅವರು ‘ಪರೀಕ್ಷಾ ಪೆ ಚರ್ಚಾ’ ಎಂದು ಕರೆಯುವ ಭವ್ಯವಾದ ತಮಾಷೆಯನ್ನು ನಡೆಸುತ್ತಾರೆ. ಆದರೆ ಅವರಿಗೆ ಸೋರಿಕೆ, ವಂಚನೆಗಳಿಲ್ಲದೆ ಪರೀಕ್ಷೆಗಳನ್ನು ನಡೆಸಲು ಮಾತ್ರ ಸಾಧ್ಯವಾಗುವುದಿಲ್ಲ” ಎಂದು ಟೀಕಿಸಿದ್ದಾರೆ.
“ನೀಟ್ ಯುಜಿ ಪರೀಕ್ಷೆ ಬಗ್ಗೆ ಹಲವಾರು ಗಂಭೀರ ಪ್ರಶ್ನೆಗಳಿದೆ. ಅದನ್ನು ಶಿಕ್ಷಣ ಸಚಿವರು ಸಹ ಒಪ್ಪಿಕೊಳ್ಳುವಂತಾಗಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಸಮಗ್ರತೆಯ ಮೇಲೆ ಅನುಮಾನ ಹುಟ್ಟಿದೆ. ಈ ನಡುವೆ ಯುಜಿಸಿ-ನೆಟ್ ಪರೀಕ್ಷೆ ನಡೆದ ಮರುದಿನವೇ ಆ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
Every year the non-biological PM conducts a grand tamasha of what he calls ‘Pareeksha pe Charcha.’ Yet, his government cannot even conduct an examination without leaks and frauds –
• The NEET UG 2024 Examination faces very serious questions that even the Education Minister has…
— Jairam Ramesh (@Jairam_Ramesh) June 20, 2024
“ವಾಸ್ತವವಾಗಿ, ಜೈವಿಕವಲ್ಲದ ಪ್ರಧಾನಿ ಮೋದಿ ಸರ್ಕಾರವು ಭಾರತದ ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡಿದೆ. ಸಿಯುಇಟಿ ಪರೀಕ್ಷೆಯ ಅಪಹಾಸ್ಯ ಮಾಡಿದೆ. ಎನ್‌ಸಿಇಆರ್‌ಟಿ, ಯುಜಿಸಿ, ಸಿಬಿಎಸ್‌ಇಯ ವೃತ್ತಿಪರತೆ ನಾಶವಾಗಿದೆ” ಎಂದು ದೂರಿದರು.
“2020ರ ಹೊಸ ಶಿಕ್ಷಣ ನೀತಿಯು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಭವಿಷ್ಯಕ್ಕಾಗಿ ಸಿದ್ಧಪಡಿಸುವ ಬದಲಾಗಿ ನಾಗ್ಪುರ ಶಿಕ್ಷಣ ನೀತಿ 2020ನಂತೆ ಕಾರ್ಯನಿರ್ವಹಿಸುತ್ತಿದೆ. ಇದು ರಾಜಕೀಯ ವಿಜ್ಞಾನದಲ್ಲಿ ಎಂಎ ಮಾಡಿದವರ (ಮೋದಿ ಶಿಕ್ಷಣ) ಪರಂಪರೆಯಾಗಿದೆ. ಈ ಪೇಪರ್ ಲೀಕ್ ಬಗ್ಗೆ ಚರ್ಚೆ ಮಾಡಬಹುದೇ” ಎಂದು ಪ್ರಶ್ನಿಸಿದ್ದಾರೆ.
.@narendramodi जी,
आप “परीक्षा पर चर्चा” तो बहुत करते हैं, “NEET परीक्षा पर चर्चा” कब करेंगे?
UGC-NET परीक्षा को रद्द करना लाखों छात्र-छात्राओं के जज़्बे की जीत है।
ये मोदी सरकार के अहंकार की हार है जिसके चलते उन्होंने हमारे युवाओं के भविष्य को रौंदने का कुत्सित प्रयास…
— Mallikarjun Kharge (@kharge) June 19, 2024
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ನೀವು ಪರೀಕ್ಷಾ ಪೆ ಚರ್ಚಾ ನಡೆಸುತ್ತೀರಿ, ನೀಟ್ ಪರೀಕ್ಷೆಯ ಚರ್ಚೆ ಯಾವಾಗ” ಎಂದು ಪ್ರಧಾನಿ ಮೋದಿಯನ್ನು ಕೇಳಿದ್ದಾರೆ.
“ನೀಟ್‌ನಲ್ಲಿ ಯಾವುದೇ ಪೇಪರ್ ಸೋರಿಕೆಯಾಗಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವರು ಮೊದಲು ಹೇಳಿದ್ದಾರೆ. ಬಿಹಾರ, ಗುಜರಾತ್ ಮತ್ತು ಹರಿಯಾಣದಲ್ಲಿ ಶಿಕ್ಷಣ ಮಾಫಿಯಾ ಬಹಿರಂಗವಾದ ಬಳಿಕ ಶಿಕ್ಷಣ ಸಚಿವರು ಏನೋ ತಪ್ಪಾಗಿದೆ ಎಂದು ನಂಬಲು ಆರಂಭಿಸಿದ್ದಾರೆ. ನೀಟ್ ಪರೀಕ್ಷೆ ರದ್ದಾಗುವುದು ಯಾವಾಗ” ಎಂದು ಪ್ರಶ್ನಿಸಿದ್ದಾರೆ.