ಅಜೈವಿಕ ಪ್ರಧಾನಿ ಪೇಪರ್‌ ಲೀಕ್ ಬಗ್ಗೆ ಚರ್ಚೆ ನಡೆಸೋದು ಯಾವಾಗ: ಕಾಂಗ್ರೆಸ್ ವಾಗ್ದಾಳಿ

Date:

ವಿಶ್ವವಿದ್ಯಾಲಯ ಅನುದಾನ ಆಯೋಗ – ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಪರೀಕ್ಷೆಯನ್ನು ರದ್ದುಗೊಳಿಸಿದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡರು, “ಅಜೈವಿಕ ಪ್ರಧಾನಿ ಪೇಪರ್‌ ಲೀಕ್ ಬಗ್ಗೆ ಚರ್ಚೆ ನಡೆಸೋದು ಯಾವಾಗ” ಎಂದು ಲೇವಡಿ ಮಾಡಿದ್ದಾರೆ.

ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಪ್ರತಿ ವರ್ಷ ಅಜೈವಿಕ ಪ್ರಧಾನಮಂತ್ರಿ ಅವರು ‘ಪರೀಕ್ಷಾ ಪೆ ಚರ್ಚಾ’ ಎಂದು ಕರೆಯುವ ಭವ್ಯವಾದ ತಮಾಷೆಯನ್ನು ನಡೆಸುತ್ತಾರೆ. ಆದರೆ ಅವರಿಗೆ ಸೋರಿಕೆ, ವಂಚನೆಗಳಿಲ್ಲದೆ ಪರೀಕ್ಷೆಗಳನ್ನು ನಡೆಸಲು ಮಾತ್ರ ಸಾಧ್ಯವಾಗುವುದಿಲ್ಲ” ಎಂದು ಟೀಕಿಸಿದ್ದಾರೆ.

“ನೀಟ್ ಯುಜಿ ಪರೀಕ್ಷೆ ಬಗ್ಗೆ ಹಲವಾರು ಗಂಭೀರ ಪ್ರಶ್ನೆಗಳಿದೆ. ಅದನ್ನು ಶಿಕ್ಷಣ ಸಚಿವರು ಸಹ ಒಪ್ಪಿಕೊಳ್ಳುವಂತಾಗಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಸಮಗ್ರತೆಯ ಮೇಲೆ ಅನುಮಾನ ಹುಟ್ಟಿದೆ. ಈ ನಡುವೆ ಯುಜಿಸಿ-ನೆಟ್ ಪರೀಕ್ಷೆ ನಡೆದ ಮರುದಿನವೇ ಆ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ವಾಸ್ತವವಾಗಿ, ಜೈವಿಕವಲ್ಲದ ಪ್ರಧಾನಿ ಮೋದಿ ಸರ್ಕಾರವು ಭಾರತದ ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡಿದೆ. ಸಿಯುಇಟಿ ಪರೀಕ್ಷೆಯ ಅಪಹಾಸ್ಯ ಮಾಡಿದೆ. ಎನ್‌ಸಿಇಆರ್‌ಟಿ, ಯುಜಿಸಿ, ಸಿಬಿಎಸ್‌ಇಯ ವೃತ್ತಿಪರತೆ ನಾಶವಾಗಿದೆ” ಎಂದು ದೂರಿದರು.

“2020ರ ಹೊಸ ಶಿಕ್ಷಣ ನೀತಿಯು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಭವಿಷ್ಯಕ್ಕಾಗಿ ಸಿದ್ಧಪಡಿಸುವ ಬದಲಾಗಿ ನಾಗ್ಪುರ ಶಿಕ್ಷಣ ನೀತಿ 2020ನಂತೆ ಕಾರ್ಯನಿರ್ವಹಿಸುತ್ತಿದೆ. ಇದು ರಾಜಕೀಯ ವಿಜ್ಞಾನದಲ್ಲಿ ಎಂಎ ಮಾಡಿದವರ (ಮೋದಿ ಶಿಕ್ಷಣ) ಪರಂಪರೆಯಾಗಿದೆ. ಈ ಪೇಪರ್‌ ಲೀಕ್ ಬಗ್ಗೆ ಚರ್ಚೆ ಮಾಡಬಹುದೇ” ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ನೀವು ಪರೀಕ್ಷಾ ಪೆ ಚರ್ಚಾ ನಡೆಸುತ್ತೀರಿ, ನೀಟ್ ಪರೀಕ್ಷೆಯ ಚರ್ಚೆ ಯಾವಾಗ” ಎಂದು ಪ್ರಧಾನಿ ಮೋದಿಯನ್ನು ಕೇಳಿದ್ದಾರೆ.

“ನೀಟ್‌ನಲ್ಲಿ ಯಾವುದೇ ಪೇಪರ್ ಸೋರಿಕೆಯಾಗಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವರು ಮೊದಲು ಹೇಳಿದ್ದಾರೆ. ಬಿಹಾರ, ಗುಜರಾತ್ ಮತ್ತು ಹರಿಯಾಣದಲ್ಲಿ ಶಿಕ್ಷಣ ಮಾಫಿಯಾ ಬಹಿರಂಗವಾದ ಬಳಿಕ ಶಿಕ್ಷಣ ಸಚಿವರು ಏನೋ ತಪ್ಪಾಗಿದೆ ಎಂದು ನಂಬಲು ಆರಂಭಿಸಿದ್ದಾರೆ. ನೀಟ್ ಪರೀಕ್ಷೆ ರದ್ದಾಗುವುದು ಯಾವಾಗ” ಎಂದು ಪ್ರಶ್ನಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಳೆದ ಮೂರ್ನಾಲ್ಕು ವರ್ಷಗಳಲ್ಲಿ 8 ಕೋಟಿ ಹೊಸ ಉದ್ಯೋಗ ಸೃಷ್ಟಿಸಿದ್ದೇವೆ: ಪ್ರಧಾನಿ ಮೋದಿ

ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಎಂಟು ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ....

ನದಿಗೆ ಹಾರಿದ್ದ ಜಮ್ಮು ಯುವಕನ ಮೃತದೇಹ ಪಾಕಿಸ್ತಾನದಲ್ಲಿ ಪತ್ತೆ

ಜಮ್ಮು ಮತ್ತು ಕಾಶ್ಮೀರದ ಜಮ್ಮುವಿನಲ್ಲಿ ಕಳೆದ ತಿಂಗಳು ಚೆನಾಬ್ ನದಿಗೆ ಹಾರಿ...

ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ; ‘ಚಾನ್ಸೇ ಇಲ್ಲ’ ಎಂದ ಕೇಂದ್ರ ಸಚಿವ ಮಾಂಝಿ

ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಎನ್‌ಡಿಎ ಸರ್ಕಾರದ ಪಾಲುದಾರ ಜೆಡಿಯು ಕೇಂದ್ರ...

ಅಕ್ರಮವಾಗಿ ‘ಕೆಂಪು ಬೀಕನ್’ ಅಳವಡಿಸಿದ್ದ ಐಎಎಸ್ ಅಧಿಕಾರಿಯ ಆಡಿ ಕಾರು ವಶ

ತಮ್ಮ ಐಷಾರಾಮಿ ಕಾರಿಗೆ ಅಕ್ರಮವಾಗಿ 'ಕೆಂಪು ಬೀಕನ್' ದೀಪವನ್ನು ಅಳವಡಿಸಿದ ಆರೋಪದ...