ಐದು ದಿನಗಳ ಕಾಲ ಚಲಿಸುತ್ತಿದ್ದ ರೈಲುಗಳ ಮೇಲೆ ದಾಳಿ ನಡೆಸಿ 65.47ಕೆಜಿ ಗಾಂಜಾವನ್ನು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ವಶಪಡಿಸಿಕೊಂಡಿದ್ದಾರೆ.
ಜೂನ್ 13 ರಿಂದ 18 ರವರೆಗೆ ಜಿಆರ್‌ಪಿಯ ವಿಶೇಷ ಪಡೆ ದಾಳಿ ನಡೆಸಿದೆ. ವಶಪಡಿಸಿಕೊಂಡ ಗಾಂಜಾ ಮೌಲ್ಯ ಬರೋಬ್ಬರಿ ₹65,47,900 ಆಗಿದ್ದು, ಇಬ್ಬರು ಪೆಡ್ಲರ್‌ಗಳನ್ನು ಬಂಧಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಎಚ್‌ಡಿಕೆ ವಿರುದ್ಧ ನಟ ದರ್ಶನ್ ಮಹಿಳಾ ಅಭಿಮಾನಿ ನಿಂದನೆ; ದೂರು ದಾಖಲು
ದಾಳಿಯ ವೇಳೆ ಜಿಆರ್‌ಪಿ ಅಕ್ರಮವಾಗಿ ಗಾಂಜಾ ಸಾಗಾಟಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಪ್ರಕರಣಗಳನ್ನು ದಾಖಲಿಸಿದೆ. ಜಿಆರ್‌ಪಿ ಡೆಪ್ಯುಟಿ ಎಸ್ಪಿ, ಬೆಂಗಳೂರು, ರವಿಕುಮಾರ್, ಬೆಂಗಳೂರು ಸರ್ಕಲ್ ಇನ್ಸ್‌ಪೆಕ್ಟರ್ ಎಂಎನ್ ರವಿಶಂಕರ್ ಮತ್ತು ಸಬ್ ಇನ್‌ಸ್ಪೆಕ್ಟರ್‌ಗಳಾದ ವಸಂತಕುಮಾರ್ ಮತ್ತು ಸತ್ಯಪ್ಪ ಗಾಂಜಾ ವಶಪಡಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.