ಜಾತಿ ಗಣತಿಗೆ ಬೆಂಬಲ ವ್ಯಕ್ತಪಡಿಸಿರುವ ಕೇಂದ್ರ ಸಚಿವ ರಾಮ್‌ದಾಸ್ ಅಠಾವಳೆ, ತಮ್ಮ ಪಕ್ಷ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ದೇಶದಲ್ಲಿ ಜಾತಿ ಗಣತಿ ನಡೆಸಲು ಬೆಂಬಲ ವ್ಯಕ್ತಪಡಿಸಲಿದ್ದು, ಇದಕ್ಕಾಗಿ ಯಾವುದಾದರೂ ದಾರಿಯನ್ನು ಹುಡುಕಬೇಕಿದೆ ಎಂದು ತಿಳಿಸಿದ್ದಾರೆ.
ಮಧ್ಯ ಪ್ರದೇಶದ ಇಂಧೋರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಠಾವಳೆ ”ಒಮ್ಮೆ ಜಾತಿ ಆಧಾರಿತ ಜನಗಣತಿ ಪೂರ್ಣಗೊಂಡರೆ ಯಾವುದಾದರೂ ದಾರಿ ಕಂಡುಕೊಳ್ಳಬಹುದಾದ ಕಾರಣ ಜನಸಂಖ್ಯೆಯಲ್ಲಿನ ಪ್ರತಿ ಜಾತಿಯು ಪಾಲನ್ನು ಪಡೆಯಬಹುದು ಎಂದು ನಮಗೆ ತಿಳಿಸಿದೆ. ಆದ ಕಾರಣ ನಮ್ಮ ಪಕ್ಷ ಜಾತಿ ಗಣತಿಗೆ ಬೆಂಬಲ ವ್ಯಕ್ತಪಡಿಸುತ್ತದೆ” ಎಂದು ತಿಳಿಸಿದರು.
“ಮುಂದಿನ ನಿರ್ಧಾರಗಳಲ್ಲಿ ಮೀಸಲಾತಿಯನ್ನು ಹೆಚ್ಚಿಸಿದರೆ ಜನಸಂಖ್ಯೆಯಲ್ಲಿ ಪ್ರತಿಯೊಬ್ಬರು ಜಾತಿ ಆಧಾರಿತದ ಮೇಲೆ ಅನುಕೂಲಗಳನ್ನು ಪಡೆದುಕೊಳ್ಳುಬಹುದು. ಇದಕ್ಕೆ ನಮ್ಮ ಪಕ್ಷ ವಿರೋಧಿಸುವುದಿಲ್ಲ. ಬಡತನದಲ್ಲಿರುವ ಎಲ್ಲ ಜಾತಿಗಳು ಅನುಕೂಲ ಪಡೆಯಬಹುದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಹಿತಿಗಳ ಸ್ವಾಭಿಮಾನ, ಸ್ವಾಯತ್ತತೆ ಮತ್ತು ಸಂಸ್ಕೃತಿ ಸಚಿವರ ತಿಪ್ಪೆ ಸಾರಿಸುವಿಕೆ
ಸಂವಿಧಾನದ 17ನೇ ವಿಧಿಯು ಜಾತಿ ಪದ್ಧತಿಯನ್ನು ನಿಷೇಧಿಸುವುದರಿಂದ ಜಾತಿ ಆಧಾರಿತ ಸಮೀಕ್ಷೆ ಕೈಗೊಳ್ಳಲು ಸರ್ಕಾರಗಳು ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ರಾಮದಾಸ್ ಅಠಾವಳೆ ಹೇಳಿದರು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ ಅಠಾವಳೆ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜಾತಿ ಗಣತಿಯನ್ನು ಏಕೆ ಕೈಗೊಳ್ಳಲಿಲ್ಲ ಎಂಬುದನ್ನು ನಾನು ರಾಹುಲ್ ಅವರಲ್ಲಿ ಕೇಳಬಯಸುತ್ತೇನೆ. ಮುಂದಿನ ಅಕ್ಟೋಬರ್‌ನಲ್ಲಿ ನಡೆಯುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟ 288 ಕ್ಷೇತ್ರಗಳ ಪೈಕಿ 170 ರಿಂದ 180 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದರು.
ಎನ್‌ಇಟಿ ಪರೀಕ್ಷೆಯ ಅಕ್ರಮದ ಬಗ್ಗೆ ಮಾತನಾಡಿದ ರಾಮದಾಸ್ ಅಠಾವಳೆ, ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳು ಇರಬಾರದು. ಶಿಕ್ಷಣ ಇಲಾಖೆ ಭವಿಷ್ಯತ್ತಿನ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಯಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದರು.
