ರಕ್ತದೊತ್ತಡ, ಸಕ್ಕರೆ ಪ್ರಮಾಣ ಇಳಿಕೆಯಾಗುತ್ತಿದೆ, ಆದರೆ ದೆಹಲಿಯ 28 ಲಕ್ಷ ಜನರಿಗೆ ನೀರು ಸಿಗುವವರೆಗೆ ಅನಿರ್ದಿಷ್ಟಾವಧಿ ಉಪವಾಸ ಮುಂದುವರಿಸುವುದಾಗಿ ದೆಹಲಿ ಜಲ ಸಚಿವ ಅತಿಶಿ ಹೇಳಿದ್ದಾರೆ.
ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ ಕುರಿತು ಮಾತನಾಡಿದ ಅವರು, “ಇಂದು ನನ್ನ ಅನಿರ್ದಿಷ್ಟ ಉಪವಾಸದ ನಾಲ್ಕನೇ ದಿನ. ದೆಹಲಿಯಲ್ಲಿ ನೀರಿನ ಕೊರತೆಯಿರುವ ಕಾರಣ ನಾನು ಉಪವಾಸ ಮಾಡುತ್ತಿದ್ದೇನೆ. ಕಳೆದ 3 ವಾರಗಳಿಂದ ಹರಿಯಾಣವು ನೀರಿನ ಪೂರೈಕೆಯನ್ನು ಕಡಿಮೆ ಮಾಡಿದೆ” ಎಂದು ಆರೋಪಿಸಿದರು.
“ಕಳೆದ 3 ವಾರಗಳಿಂದ ಹರಿಯಾಣ ಸರ್ಕಾರ ದೆಹಲಿಗೆ 100 ಎಂಜಿಡಿ ಕಡಿಮೆ ನೀರು ನೀಡುತ್ತಿದೆ. ನಿನ್ನೆ ವೈದ್ಯರು ಬಂದು ನನ್ನನ್ನು ಪರೀಕ್ಷಿಸಿದರು. ನನ್ನ ಬಿಪಿ ಕಡಿಮೆಯಾಗಿದೆ, ನನ್ನ ಶುಗರ್ ಕಡಿಮೆಯಾಗಿದೆ ಎಂದು ಹೇಳಿದರು. ನಾನು ತೂಕವನ್ನು ಕಳೆದುಕೊಳ್ಳುತ್ತಿದ್ದೇನೆ, ಕೀಟೋನ್ ಮಟ್ಟವು ತುಂಬಾ ಹೆಚ್ಚಾಗಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ನೀರಿನ ಬಿಕ್ಕಟ್ಟು| ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ದೆಹಲಿ ಸಚಿವೆ ಅತಿಶಿ
“ಕೀಟೋನ್ ಮಟ್ಟವು ಹೆಚ್ಚಾಗುವುದು ದೇಹಕ್ಕೆ ಹಾನಿಯನ್ನುಂಟುಮಾಡುತ್ತದೆ ಎಂದು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ನನ್ನ ದೇಹ ಎಷ್ಟೇ ನೋವಿನಲ್ಲಿದ್ದರೂ ಈ ಉಪವಾಸ ಮಾಡುವ ನನ್ನ ಸಂಕಲ್ಪ ಬಲವಾಗಿದೆ. ದೆಹಲಿಯ 28 ಲಕ್ಷ ಜನರಿಗೆ ನೀರು ಸಿಗುವವರೆಗೂ ನನ್ನ ಅನಿರ್ದಿಷ್ಟಾವಧಿ ಉಪವಾಸ ಮುಂದುವರಿಯಲಿದೆ” ಎಂದು ಹೇಳಿದರು.
#WATCH | On her indefinite hunger protest, Delhi Water Minister Atishi says, “Today is the fourth day of my indefinite fast. I am on a fast because there is a huge shortage of water in Delhi. For the last 3 weeks, Haryana has reduced the supply of water to Delhiites. The Haryana… pic.twitter.com/StLptz5GFa
— ANI (@ANI) June 24, 2024