ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್ ಪರವಾಗಿ ಆತನ ಅಭಿಮಾನಿಗಳಿಗೆ ಪ್ರಚೋದನೆ ಮಾಡುತ್ತಿದ್ದ ಹಾಗೂ ನಿರ್ಮಾಪಕ ಉಮಾಪತಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ದರ್ಶನ್ ಅಭಿಮಾನಿ ಚೇತನ್ ಎಂಬುವವರನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಚೇತನ್ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 504, 506 ಅಡಿ ಎಫ್ಐಆರ್ ದಾಖಲಾಗಿದೆ.
ಇತ್ತೀಚೆಗೆ ಜೈಲು ಸೇರಿದ್ದ ನಟ ದರ್ಶನ್ ವಿರುದ್ಧ ನಿರ್ಮಾಪಕ ಉಮಾಪತಿ ಗೌಡ ಅವರು ಮಾತನಾಡಿದ್ದರು. ಇದಕ್ಕೆ ಕೋಪಗೊಂಡ ದರ್ಶನ್ ಅಭಿಮಾನಿಯಾದ ಆರೋಪಿ ಚೇತನ್ ನಿರ್ಮಾಪಕ ಉಮಾಪತಿಗೆ ಬೆದರಿಕೆ ಹಾಕಿದ್ದನು. ಅಲ್ಲದೇ, ಅವರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಜತೆಗೆ, ದರ್ಶನ್ ಅಭಿಮಾನಿಗಳಿಗೆ ಪ್ರಚೋದನೆ ಮಾಡಿದ್ದನು.
ಈ ಬಗ್ಗೆ ನಿರ್ಮಾಪಕ ಉಮಾಪತಿ ಗೌಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಚೇತನ್ನನ್ನು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸೂರಜ್ ರೇವಣ್ಣ ಪ್ರಕರಣ ತನಿಖೆ ಸಿಐಡಿಗೆ ವರ್ಗಾವಣೆ
ಅಭಿಮಾನಿ ಗಾಡಿ ಮೇಲೆ ನಟ ದರ್ಶನ್‌ಗೆ ನೀಡಿರುವ ಖೈದಿ ನಂಬರ್
ಮೈಸೂರಿನಲ್ಲಿ ನಟ ದರ್ಶನ್ ಅಭಿಮಾನಿ ರಾಜೇಶ್ ಎಂಬುವವರು ತಮ್ಮ ಗಾಡಿ ಮೇಲೆ ದರ್ಶನ್‌ಗೆ ಜೈಲಿನಲ್ಲಿ ನೀಡಿರುವ ಖೈದಿ ನಂಬರ್ ಹಾಕಿಸಿಕೊಂಡಿದ್ದಾರೆ.
ರಾಜೇಶ್ ಇವರು ಟಿ.ನರಸೀಪುರ ತಾಲೂಕಿನ ಕರುಹಟ್ಟಿ ಗ್ರಾಮದವರು. ಜೈಲಿನಲ್ಲಿ ನಟ ದರ್ಶನ್‌ಗೆ ಖೈದಿ ನಂಬರ್ 6106 ಕೊಟ್ಟಿದ್ದಾರೆ. ಈಗಾಗಲೇ ಗಾಡಿಗೆ ನಂಬರ್ ಇದ್ದು, ಅದನ್ನು ಬದಲಾಯಿಸಲು ಆಗದ ಕಾರಣ ಗಾಡಿ ಮೇಲೆ 6106 ಹಾಕಿಸಿಕೊಂಡಿದ್ದಾರೆ. ಇದೇ ಲಕ್ಕಿ ನಂಬರ್ ಎಂದು ಗಾಡಿ ಮೇಲೆ ಬರೆಸಿದ್ದಾರೆ.