ಕಿಂಗ್ಸ್ ಟೌನ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಸಿಸಿ T20 ವಿಶ್ವಕಪ್ ಟೂರ್ನಿಯ ಸೂಪರ್ 8 ಹಂತದ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 8 ರನ್ ಗಳಿಂದ ಸೋಲಿಸಿದ ಅಫ್ಘಾನಿಸ್ತಾನ, ಚೊಚ್ಚಲ ಬಾರಿಗೆ ಸೆಮಿಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ಸೃಷ್ಟಿಸಿತು.
𝐍𝐄𝐗𝐓 𝐃𝐄𝐒𝐓𝐈𝐍𝐀𝐓𝐈𝐎𝐍 👉🏻 𝐒𝐄𝐌𝐈-𝐅𝐈𝐍𝐀𝐋𝐒 𝐎𝐅 #T20WorldCup2024! 🇧🇩
Ecstatic scenes at St Vincent, and tears of joy flow as #NaveenulHaq wins it for Afghanistan while also knocking out the mighty Aussies! 🙌🏻
Watch them next in action 👉🏻 Semi Final 1 | SA 🆚 AFG |… pic.twitter.com/eGLE97Z108
— Star Sports (@StarSportsIndia) June 25, 2024
ಅಫ್ಘಾನಿಸ್ತಾನ ಸೆಮಿಫೈನಲ್ ಪ್ರವೇಶಿಸುವುದರೊಂದಿಗೆ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬಿದ್ದಿದೆ. ಮೊದಲ ಬಾರಿಗೆ ಐಸಿಸಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ರಶೀದ್ ಖಾನ್ ಬಳಗ ಇತಿಹಾಸ ಸೃಷ್ಟಿಸಿದೆ. ಜೂನ್ 26ರಂದು ಗಯಾನದಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಅಫ್ಘಾನಿಸ್ತಾನ ಎದುರಿಸಲಿದೆ.
The madness in Afghanistan. 🤯🇦🇫 pic.twitter.com/MyYrAcFidr
— Mufaddal Vohra (@mufaddal_vohra) June 25, 2024
ತಾಲಿಬಾನ್ ನಾಡಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ಸದ್ಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನೇತೃತ್ವದ ಸರ್ಕಾರವು ಆಡಳಿತ ನಡೆಸುತ್ತಿದೆ. ಬಾಂಗ್ಲಾದೇಶವನ್ನು 8 ರನ್ ಗಳಿಂದ ಅಫ್ಘಾನ್ ತಂಡವು ಸೋಲಿಸುತ್ತಿದ್ದತೆಯೇ ತಂಡದ ಆಟಗಾರರು, ಕೋಚ್ ಹಾಗೂ ಇಂಗ್ಲೆಂಡ್‌ನ ಮಾಜಿ ಆಟಗಾರ ಜೋನಾಥನ್ ಟ್ರಾಟ್, ಕೋಚಿಂಗ್ ತಂಡದ ಭಾಗವಾಗಿರುವ ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಡ್ವೇಯ್ನ್ ಬ್ರಾವೋ ಮೈದಾನವಿಡೀ ಓಡಿ, ಕುಣಿದು ಕುಪ್ಪಳಿದರು.
𝐊𝐡𝐨𝐬𝐭 𝐚𝐭 𝐢𝐭 𝐚𝐠𝐚𝐢𝐧! 🤩
They know how to celebrate #AfghanAtalan‘s heroics at the #T20WorldCup! 👏💪#AFGvAUS | #GloriousNationVictoriousTeam pic.twitter.com/SZQ0O1xt0Z
— Afghanistan Cricket Board (@ACBofficials) June 25, 2024
ಗೆದ್ದ ಖುಷಿಯಲ್ಲಿದ್ದ ಅಫ್ಘಾನ್ ತಂಡದ ಆಟಗಾರರ ಕಣ್ಣಲ್ಲಿ ಖುಷಿಯಿಂದ ಆನಂದಬಾಷ್ಪ ಹರಿಸಿದರೆ, ತಂಡವು ಗೆಲ್ಲುತ್ತಿದ್ದಂತೆಯೇ ತಾಲಿಬಾನ್ ನಾಡಲ್ಲಿ ಜನರು ಖುಷಿಯಿಂದ ರಸ್ತೆಗಿಳಿದು, ಸಂಭ್ರಮಾಚರಣೆ ನಡೆಸಿದರು. ಇದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಹೀಗಾಗಿ ರಸ್ತೆಯಿಂದ ಜನರನ್ನು ತೆರವುಗೊಳಿಸಲು ಅಫ್ಘಾನಿಸ್ತಾನದ ಪೊಲೀಸರು, ನೆರೆದಿದ್ದ ಜನರನ್ನು ಚದುರಿಸಲು ಜಲಫಿರಂಗಿ ಬಳಸಿದರಾದರೂ, ಯಾರೂ ಕೂಡ ರಸ್ತೆಯಿಂದ ಕದಡಲಿಲ್ಲ.
Water brigade used on Afghanistan people to clear the road, but nobody moved. 😂🔥 pic.twitter.com/zFCnGmlTM7
— Mufaddal Vohra (@mufaddal_vohra) June 25, 2024
ಈ ನಡುವೆ ಸಾವಿರಾರು ಮಂದಿ ಅಫ್ಘಾನಿಸ್ತಾನದ ಜಲಾದಾಬಾದ್‌ನಲ್ಲಿ ರಸ್ತೆಗೆ ಇಳಿದಿರುವ ಫೋಟೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
ಈ ಫೋಟೊವನ್ನು ಖುದ್ದು ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ತನ್ನ ಸೋಷಿಯಲ್ ಮೀಡಿಯಾ ಪೇಜ್‌ನಲ್ಲೂ ಕೂಡ ಪ್ರಕಟಿಸಿದ್ದು, “ತಂಡದ ಗೆಲುವನ್ನು ಹೇಗೆ ಆಚರಿಸಬೇಕೆಂದು ನಮ್ಮವರಿಗೆ ತಿಳಿದಿದೆ” ಎಂದು ತಿಳಿಸಿದೆ.
— 💥 (@Johnsmaink) June 25, 2024
ವಿಡಿಯೋ ಕಾಲ್ ಮಾಡಿ ನಾಯಕ ರಶೀದ್ ಖಾನ್‌ಗೆ ಅಭಿನಂದಿಸಿದ ಅಫ್ಘಾನ್ ವಿದೇಶ ಮಂತ್ರಿ
ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದ್ದಕ್ಕಾಗಿ ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಅವರನ್ನು ದೇಶದ ವಿದೇಶಾಂಗ ವ್ಯವಹಾರಗಳ ಸಚಿವ ಅಮೀರ್ ಖಾನ್ ಮುಟ್ಟಾಕಿ ಅಭಿನಂದಿಸಿದ್ದು, ತಂಡಕ್ಕೆ ಹೆಚ್ಚಿನ ಯಶಸ್ಸು ಸಿಗಲಿ ಎಂದು ಹಾರೈಸಿದರು.
د هېواد د بهرنیو چارو وزیر ښاغلي امیر خان متقي د نړیوال جام نیمه پایلوبو ته د افغان اتلانو د لارموندنې په پار لوبډلمشر راشد خان ته مبارکي ورکړه او لوبډلې ته یې د لا زیاتو بریاو غوښتنه وکړه، د دوی بشپړې ټیلیفوني خبرې اترې دلته اورېدلی شئ. pic.twitter.com/YMz3jI6Mwe
— Afghanistan Cricket Board (@ACBofficials) June 25, 2024
ننګرهاریان د افغانستان کرېکټ بریا لمانځي 🇦🇫😍 pic.twitter.com/T6ArpFAVPO
— Abdulhaq Omeri (@AbdulhaqOmeri) June 25, 2024
