ಭಾರತದ ಪ್ರಧಾನಿ ನರೇಂದ್ರ ಮೋದಿ ಜುಲೈನಲ್ಲಿ ರಷ್ಯಾಕ್ಕೆ ಭೇಟಿ ನಿಡುವ ಸಾಧ್ಯತೆಯಿದ್ದು, ಭಾರತ – ರಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಮೋದಿ ರಷ್ಯಾಕ್ಕೆ ಭೇಟಿ ನೀಡುತ್ತಿರುವುದು ಇದು ಮೊದಲ ಬಾರಿಯಾಗಿದೆ.
ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಮೋದಿ ಇಟಲಿಗೆ ಭೇಟಿ ನೀಡಿದ್ದರು. ಈಗ ಅಧಿಕಾರ ಸ್ವೀಕರಿಸಿ ಒಂದಿ ತಿಂತಗಳು ಕಳೆದಿಲ್ಲ, ಈಗ ರಷ್ಯಾಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ.
ಮೋದಿ ಭೇಟಿ ನೀಡುತ್ತಿರುವ ಬಗ್ಗೆ ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ರಷ್ಯಾದ ಸುದ್ದಿ ಮಾಧ್ಯಮ ಸಂಸ್ಥೆ ಆರ್‌ಐಎ ತಿಳಿಸಿದೆ. ಆದರೆ ಭೇಟಿಯ ಅಂತಿಮ ರೂಪುರೇಷುಗಳು ಇನ್ನು ನಿರ್ಧಾರವಾಗಿಲ್ಲ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮೋದಿ ಅವರಿಗೆ ರಷ್ಯಾಕ್ಕೆ ಭೇಟಿ ನೀಡಲು ಮಾರ್ಚ್‌ನಲ್ಲಿ ಆಹ್ವಾನ ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ವಾಧಿಕಾರಿಯ ಸೊಕ್ಕಡಗಿಸಲು ಸಂವಿಧಾನವೇ ಅಸ್ತ್ರ ಮತ್ತು ಗುರಾಣಿ
ಮೋದಿ ರಷ್ಯಾಕ್ಕೆ ಕೊನೆಯ ಬಾರಿ ಭೇಟಿ ನೀಡಿದ್ದು 2019ರಲ್ಲಿ. ವ್ಲಾಡಿವೊಸ್ಟೋಕ್‌ನಲ್ಲಿನ ಈಸ್ಟರ್ನ್ ಎಕನಾಮಿಕ್ ಫೋರಂನಲ್ಲಿ ಭಾಗಿಯಾಗಿದ್ದರು. 2000ರ ಅಕ್ಟೋಬರ್‌ನಲ್ಲಿ ಪುಟಿನ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ ಹಾಗೂ ರಷ್ಯಾ ನಡುವೆ ವಾರ್ಷಿಕ ಸಾಂಪ್ರದಾಯಿಕ ಶೃಂಗಸಭೆ ಆರಂಭಗೊಂಡಿತ್ತು.
ಭಾರತ – ರಷ್ಯಾ ನಡುವೆ ಸಾಂಪ್ರದಾಯಿಕ ಶೃಂಗಸಭೆ ಕೊನೆಯದಾಗಿ 2021ರ ಡಿಸೆಂಬರ್‌ನಲ್ಲಿ ನಡೆದಿತ್ತು. ಅಧ್ಯಕ್ಷ ಪುಟಿನ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೋವಿಡ್ ಸಾಂಕ್ರಾಮಕ ಹಾಗೂ ಅನಿರ್ದಿಷ್ಟ ಕಾರಣಗಳಿಂದ ಕಳೆದ ಎರಡು ವರ್ಷಗಳಿಂದ ಉಭಯ ದೇಶಗಳ ನಡುವೆ ಶೃಂಗಸಭೆ ನಡೆದಿಲ್ಲ.
ಕಳೆದ ಹಲವು ದಶಕಗಳಲ್ಲಿ ರಷ್ಯಾವು ಭಾರತಕ್ಕೆ ರಕ್ಷಣಾ ಸಾಮಾಗ್ರಿಗಳನ್ನು ರಫ್ತು ಮಾಡುತ್ತಿತ್ತು. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಯೂರೋಪ್ ಹಾಗೂ ಅಮೆರಿಕ ನಡುವೆ ಭಾರತ ರಕ್ಷಣಾ ಸಾಮಗ್ರಿಗಳಿಗಾಗಿ ಒಪ್ಪಂದ ಮಾಡಿಕೊಂಡಿದೆ.
