ರಾಯಚೂರು ನಗರದ ಜಲಾಲನಗರದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಭೋವಿ ವಡ್ಡರ ಸಮಾಜ ಸಿಂಧನೂರು ತಾಲೂಕು ಅಧ್ಯಕ್ಷೆ ರತ್ನಮ್ಮ ಒತ್ತಾಯಿಸಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ಜಲಾಲನಗರದ ನಿವಾಸಿಯಾಗಿರುವ ಅನುರಾಧಾ ಅದೇ ಬಡಾವಣೆಯ ವಿನಯರೆಡ್ಡಿ ಈರೇಶ ಎಂಬ ಯುವಕನನ್ನು ಪ್ರೀತಿಸಿ ಮದುವೆ ಮಾಡಿಕೊಳ್ಳುವದಾಗಿ ಪುಸಲಾಯಿಸಿ ದೂರದ ಊರುಗಳಿಗೆ ಕರೆದುಕೊಂಡು ಹೋಗಿದ್ದ. ಎಲ್ಲೆಡೆ ತಿರುಗಾಡಿ ಬಂದ ನಂತರ ವಡ್ಡರ ಸಮಾಜದರಾಗಿರುವುದರಿಂದ ಮನೆಯುವರು ಮದುವೆಗೆ ನಿರಾಕರಿಸಿದ್ದಾರೆ” ಎಂದರು.
“ಅನುರಾಧಾ ತಂದೆಯೂ ಮದುವೆಗೆ ಸಮ್ಮತಿಸಿದ್ದರು. ಅನುರಾಧಾಳನ್ನು ಮಹಿಳಾ ಸಾಂತ್ವಾನ ಕೇಂದ್ರದಲ್ಲಿರಿಸಿದ್ದಾಗ ತಂದೆತಾಯಿ ಮತ್ತು ಪ್ರೀತಿಸಿದ ಹುಡುಗ ಮೋಸ ಮಾಡಿದ್ದರಿಂದ ಕಟ್ಟಡದ ಮೇಲಿಂದ ಬಿದ್ದು ಸಾವಿಗೀಡಾಗಿದ್ದಾಳೆ. ಕೂಡಲೇ ಆರೋಪಿ ವಿನಯರೆಡ್ಡಿಯನ್ನು ಕಠಿಣ ಶಿಕ್ಷೆಗೆ ಗುರಿಗೊಳಿಸಬೇಕು” ಎಂದು ಆಗ್ರಹಿಸಿದರು.
ಭೋವಿ ವಡ್ಡರ ಸಮಾಜ ಜಿಲ್ಲಾ ಮಹಿಳಾಧ್ಯಕ್ಷೆ ಶಶಿಕಲಾ ಭೀಮರಾಯ ಮಾತನಾಡಿ, “ಪ್ರೀತಿಸುವಾಗ ಇಲ್ಲದೇ ಇರುವ ಜಾತಿ ಮದುವೆ ಮಾಡಿಕೊಳ್ಳಲು ಅಡ್ಡಿಯಾಗಿದೆ. ವಿನಯರೆಡ್ಡಿ ಎಂಬಾತನಿಂದಲೇ ಅನುರಾಧ ಸಾವಿಗೆ ಕಾರಣವಾಗಿದೆ. ಹಾಗಾಗಿ ಕೂಡಲೇ ಆತನ ವಿರುದ್ಧ ಕಠಿಣ ಕ್ರಮ ಕೈಗೊಂಡು ಮೃತ ಯುವತಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹೆಣ್ಣು ಮಕ್ಕಳ ಪೂರ್ಣ ಶಿಕ್ಷಣ, ದೇಶದ ರಕ್ಷಣೆ; ಕ್ರೈ ಸಂಸ್ಥೆಯ ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ
ಈ ಸಂದರ್ಭದಲ್ಲಿ ಭೋವಿ ಸಮಾಜದ ಜಿಲ್ಲಾಧ್ಯಕ್ಷ ಹನುಮಂತ, ಸಿಂಧನೂರು ತಾಲೂಕು ಅಧ್ಯಕ್ಷೆ ಗದ್ದೆಮ್ಮ, ರೇಣಮ್ಮ, ಹೊನ್ನಮ್ಮ, ಲಕ್ಷ್ಮೀ, ರತ್ನಮ್ಮ, ಶಾಂತಮ್ಮ, ನಾಗರತ್ನ ಇದ್ದರು.
ವರದಿ : ಹಫೀಜುಲ್ಲ
