ರೈತರ ಮಕ್ಕಳು ಮದುವೆಯಾಗಲು ವಧು ಸಿಗುತ್ತಿಲ್ಲ. ಯುವ ರೈತರಿಗೆ ವಧು ಹುಡುಕಿ ಕೊಡಿ ಎಂದು ಯುವಕನೊಬ್ಬ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ನಡೆದಿದೆ.
ಕನಕಗಿರಿಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಯುವ ರೈತ ಸಂಗಪ್ಪ ಎಂಬಾತ ಕೊಪ್ಪಳ ಜಿಲ್ಲಾಧಿಕಾರಿ ನಲೀನ್ ಅತುಲ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾನೆ.
“ನಾನು ರೈತ ಕುಟುಂಬಕ್ಕೆ ಸೇರಿದವನು. ನಾನು ವಿವಾಹವಾಗಲು 10 ವರ್ಷಗಳಿಂದ ವಧು ಹುಡುಕುತ್ತಿದ್ದೇನೆ. ರೈತನೆಂಬ ಕಾರಣಕ್ಕೆ ಯಾವುದೇ ಹುಡುಗಿ ನನ್ನನ್ನು ಮದುವೆಯಾಗಲು ಒಪ್ಪುತ್ತಿಲ್ಲ” ಎಂದು ತನ್ನ ಅಳಲು ತೋಡಿಕೊಂಡಿದ್ದಾನೆ.
At Janaspandana programme in Koppal district , a farmer by name Sangappa came up with an application seeking a bride for him. He submitted his application to the DC @Nalini_Atul_ @NewIndianXpress @ramupatil_TNIE pic.twitter.com/l3qH5DDSk1
— Ashwini M Sripad/ಅಶ್ವಿನಿ ಎಂ ಶ್ರೀಪಾದ್🇮🇳 (@AshwiniMS_TNIE) June 26, 2024
“ಮದುವೆಗೆ ವಧು ಸಿಗದೆ, ಮಾನಸಿಕವಾಗಿ ಕುಗ್ಗಿದ್ದೇನೆ. ಯುವ ರೈತರಿಗಾಗಿ ಸರ್ಕಾರಗಳು ಕಾರ್ಯಕ್ರಮಗಳನ್ನು ರೂಪಿಸಬೇಕು. ರೈತರ ಮಕ್ಕಳ ಬಾಳಿಗೆ ಬೆಳಕು ನೀಡಲು ನೆರವಾಗಬೇಕು” ಎಂದು ಮನವಿ ಮಾಡಿದ್ದಾನೆ.
ಯುವಕನ ಮನವಿ ಆಲಿಸಿದ ಜಿಲ್ಲಾಧಿಕಾರಿ, ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿ, ಅರ್ಜಿ ಪಡೆದುಕೊಂಡಿದ್ದಾರೆ.